ಕೋಲಾರ : ಗೆಳೆಯ ಅಂತಾ ಸಲುಗೆ ಕೊಟ್ಟರೇ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪಾಪಿ ಸ್ನೇಹಿತನೊಬ್ಬ ಕುಚುಕುವನ್ನೇ ಕೊಲೆ ಮಾಡಿರುವ ಮಾಲೂರು ತಾಲೂಕಿನ ಆಲಂಬಾಡಿ ಗ್ರಾಮದಲ್ಲಿ ನಡೆದಿದೆ.
ಆಲಂಬಾಡಿಯಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ ಮೃತ ಸುನಿಲ್ ಅನಾಥ. ಈತನಿಗೆ ತಂದೆ-ತಾಯಿ ಯಾರೂ ಇರಲಿಲ್ಲ. ಆದರೆ, ಹೆಂಡತಿ ಹಾಗೂ ಎರಡು ಮಕ್ಕಳ ಪುಟ್ಟ ಸಂಸಾರವಿತ್ತು. ಇಂಥ ಸಂಸಾರದ ಮೇಲೆ ಅದೇ ಗ್ರಾಮದ ವಜ್ರಸ್ವಾಮಿ ಎಂಬಾತ ಸುನೀಲ್ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಸ್ಕೂಲ್ ಬಸ್ ಓಡಿಸುತ್ತಿದ್ದ ಸುನೀಲ್‌ಗೆ ನಿನಗೊಂದು ಬಾಡಿಗೆ ಕಾರ್ ಕೊಡಿಸ್ತೀನಿ ಅದನ್ನ ಓಡಿಸಿಕೊಂಡಿರು ಎಂದು ಹೇಳಿ ಬಾಡಿಗೆ ಕಾರ್ ಕೊಡಿಸಿ ಮೋಸದಾಟ ಆಡಿದ್ದಾನೆ..
ಸುನಿಲ್ ಕಾರ್ ಓಡಿಸಿಕೊಂಡಿದ್ರೆ, ಇತ್ತ ಆರೋಪಿ ವಜ್ರಸ್ವಾಮಿ ಆತನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಬೆಳಸಿದ್ದನಂತೆ. ಈ ವಿಷಯ ಸುನಿಲ್ಗೆ ಗೊತ್ತಾಗಿ ಮನೆಯಲ್ಲಿ ಹೆಂಡತಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಊರಿನಲ್ಲಿ ರಾಜಿ ಕೂಡ ಮಾಡಿಸಿದ್ದಾರೆ. ಆದರೆ, ತಮ್ಮ ಅಕ್ರಮ ಸಂಬಂಧಕ್ಕೆ ಈತ ಅಡ್ಡವಾಗಿದ್ದಾನೆ ಅಂತಾ ವಜ್ರಸ್ವಾಮಿ ಸ್ಕೆಚ್ ಹಾಕಿ ಮುಗಿಸೇ ಬಿಟ್ಟಿದ್ದಾನಂತೆ..
ನಿನ್ನೆ ರಾತ್ರಿ ವಜ್ರಸ್ವಾಮಿ ಆಲಂಬಾಡಿ ಗ್ರಾಮದ ಕೆರೆಯ ಬಳಿ ಕರೆಸಿಕೊಂಡು ಸುನಿಲ್ಗೆ ಚೆನ್ನಾಗಿ ಕುಡಿಸಿ ತನ್ನ ಸ್ನೇಹಿತರಾದ ಬಾಬು ಸಹಾಯ ಪಡೆದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಮೃತದೇಹವನ್ನು ಅಲ್ಲಿಂದ ಪಕ್ಕದ ವಡ್ಡಕೆರೆಯಲ್ಲಿ ತಂದು ಬಿಸಾಡಿ ಹೋಗಿದ್ದಾನಂತೆ.
ಪ್ರಮುಖ ಆರೋಪಿ ಸಹಚರ ಬಾಬುವನ್ನು ಬಂಧಿಸಿರುವ ಮಾಲೂರು ಪೊಲೀಸರು, ವಜ್ರಸ್ವಾಮಿಗಾಗಿ ಬಲೆ ಬೀಸಿದ್ದಾರೆ. ನೆಮ್ಮದಿಯಾಗಿ ಬದುಕುತ್ತಿದ್ದ ಸುಂದರ ಕುಟುಂಬ ಇದೀಗ ಬೀದಿಪಾಲಾಗಿದೆ. ಅಕ್ರಮಕ್ಕೆ ಸಾಥ್ ನೀಡಿದ್ದ ಸುನಿಲ್ ಪತ್ನಿ ತನ್ನ ಕೈಯಾರೆ ತಾನೇ ತನ್ನ ಸುಂದರ ಕುಟುಂಬಕ್ಕೆ ಕೊಳ್ಳಿ ಇಟ್ಟುಕೊಂಡು ಮಕ್ಕಳೊಂದಿಗೆ ಬೀದಿಗೆ ಬಿದ್ದಿದ್ದಾಳೆ..