ಬೆಂಗಳೂರು: ಪುಲ್ವಾಮಾ ದಾಳಿಕೋರರನ್ನು ಬೆಂಬಲಿಸುವ ಸಂದೇಶಗಳನ್ನು ಪೋಸ್ಟ್ ಮಾಡಿದ್ದ ಕಾಶ್ಮೀರಿ ಯುವಕ ಅಬಿದ್ ಮಲಿಕ್ ಪ್ರಕರಣವನ್ನು ಬೆಂಗಳೂರು ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವರ್ಗಾಯಿಸಿದ್ದಾರೆ.
ಕಾಶ್ಮೀರಕ್ಕೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿರುವ ಅಬಿದ್ ಮಲ್ಲಿಕ್ ತಲೆಮರೆಸಿಕೊಂಡಿದ್ದಾನೆ. ಕಳೆದ ಫೆಬ್ರವರಿಯಲ್ಲಿ ಅಬಿದ್ ಪುಲ್ವಾಮಾ ದಾಳಿಕೋರರನ್ನು ಬೆಂಬಲಿಸಿದ್ದಲ್ಲದೇ ಭಾರತೀಯ ಸೇನೆಯನ್ನು ಕಟುವಾಗಿ ಟೀಕಿಸಿ, ಫೇಸ್ಬುಕ್ನಲ್ಲಿ ಪೋಸ್ಟ್ ಹರಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಹೆಚ್‌ಎಎಲ್ ಪೊಲೀಸರು ಅಬಿದ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಹೆಣ್ಣೂರಿನ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಅಬಿದ್ ಮಲ್ಲಿಕ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ಸೇರಿದಂತೆ ಅನೇಕ ಪ್ರಕರಣ ದಾಖಲಿಸಲಾಗಿದೆ. ಆತನ ಫೇಸ್‌ಬುಕ್ ಮಾಹಿತಿ ಪ್ರಕಾರ ಆತ ಶ್ರೀನಗರದವ. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಪ್ರತ್ಯೇಕತಾವಾದಿಗಳಿಗೆ ಬೆಂಬಲಿಸುತ್ತಿದ್ದ ಎನ್ನಲಾಗಿದೆ.