ಆನೇಕಲ್: ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ದಂಪತಿಯನ್ನು ಇದೀಗ ಜಿಗಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ವಿನೋಭನಗರದ 38 ವರ್ಷದ ಸುರೇಖಾ ತನ್ನ ಪಕ್ಕದ ಮನೆಯ ಕಾರ್ ಮೆಕಾನಿಕ್ ಗೌಸೀರ್ (ಮುನ್ನ) ಎಂಬುವವರ ಜೊತೆ ಪ್ರೇಮ ವಿವಾಹವಾಗಿ ಮೂವರ ಮಕ್ಕಳ ತಾಯಿಯಾಗಿದ್ದರು. ಈ ಮಧ್ಯೆ ಸರ್ಕಾರಿ ಕೋಟಾದಡಿ ನರ್ಸಿಂಗ್ ಸಿಟು ಸಿಕ್ಕಿದ್ದು, ಗಂಡ, ಮಕ್ಕಳನ್ನು ಮರೆತ ರೇಖಾ ಫೇಸ್ಬುಕ್ ಮೂಲಕ ಜಿಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ನ ಪ್ರೇಮ ಪಾಶಕ್ಕೆ ಬೀಳುತ್ತಾಳೆ. ಸತತ ಎರಡು ವರ್ಷ ಪ್ರೇಮಾಂಕುರದ ನಂತರ ಕಿರಣ್ ರೇಖಾಳೊಂದಿಗೆ ದೂರವಾಗುತ್ತಾ ಮನೆಯವರ ಬಲವಂತಕ್ಕೆ ಬೇರೆ ಮದುವೆಯಾಗಲು ಸಿದ್ದತೆ ಮಾಡಿಕೊಂಡಿದ್ದಾನೆ.
ನಂತರ ರೇಖಾ ಮದುವೆ ಮತ್ತು ದೈಹಿಕ ಸಂಬಂದದ ಬಗ್ಗೆ ಗಂಡನಿಗೆ ತಿಳಿಸುತ್ತಾಳೆ. ಇದರಿಂದ ಕುಪಿತನಾದ ಗೌಸ್ ಕಿರಣ್ ರೂಮಿಗೆ ಬಂದು ಮನೆಯಲ್ಲಿದ್ದ ಚಾಕುವಿನಿಂದ ಕಿರಣ್ ಕತ್ತಿಗೆ ಇರಿದು ಪರಾರಿಯಾಗಿದ್ದರು. ಇದೀಗ ಜಿಗಣಿ ಪೊಲೀಸರು ಹಂತಕ ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.