ETV Bharat / jagte-raho

ಹೈದರಾಬಾದ್​ ಏರ್​ಪೋರ್ಟ್​ನಲ್ಲಿ ವಿದೇಶಿ ಕರೆನ್ಸಿ ವಶಕ್ಕೆ.. ಓರ್ವ ಅರೆಸ್ಟ್​ - Hyderabad customs officers

ಹೈದರಾಬಾದ್‌ನಿಂದ ಶಾರ್ಜಾಗೆ ತೆರಳುತ್ತಿದ್ದ ಪ್ರಯಾಣಿಕನ ಬಳಿ ಭಾರಿ ಮೊತ್ತದ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ.

Hyderabad customs officers seized huge foreign currency in shamshabad airport
ಹೈದರಾಬಾದ್​ ಏರ್​ಪೋರ್ಟ್​ನಲ್ಲಿ ವಿದೇಶಿ ಕರೆನ್ಸಿ ವಶಕ್ಕೆ
author img

By

Published : Dec 21, 2020, 11:05 AM IST

ಹೈದರಾಬಾದ್ (ತೆಲಂಗಾಣ): ಇಲ್ಲಿನ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮೊತ್ತದ ವಿದೇಶಿ ಕರೆನ್ಸಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಹಾಗೂ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹೈದರಾಬಾದ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಶಾರ್ಜಾಗೆ ತೆರಳುತ್ತಿದ್ದ ಪ್ರಯಾಣಿಕನ ಬಳಿ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಯುಎಸ್ ಡಾಲರ್, ಒಮಾನಿ ರಿಯಾಲ್, ಸೌದಿ ರಿಯಾಲ್ ಮತ್ತು ಕತಾರಿ ರಿಯಾಲ್ ಕರೆನ್ಸಿ ನೋಟುಗಳು ಆತನ ಬಳಿ ಇದ್ದವು. ಇದರ ಮೌಲ್ಯ 32.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 42 ಲಕ್ಷ ಕೋಟಿ ರೂ.ಗೆ ತಲುಪಿದ ವಿದೇಶಿ ವಿನಿಮಯ ನಿಧಿ!

ಆರೋಪಿಯು ಚಂದ್ರಯಾನಗುಟ್ಟಾ ಮೂಲದವನಾಗಿದ್ದು, ಈತನನ್ನು ಅಧಿಕಾರಿಗಳು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.