ETV Bharat / jagte-raho

20 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ, ಡ್ರಗ್ ಪೆಡ್ಲರ್​​ ಅರೆಸ್ಟ್​ - ಕೋಲ್ಕತ್ತಾ ಪೊಲೀಸರು ಮತ್ತು ವಿಶೇಷ ಪೊಲೀಸ್​ ಕಾರ್ಯಪಡೆ

ಮಾದಕವಸ್ತು ಕಳ್ಳಸಾಗಣೆಗಾಗಿ ಕೋಲ್ಕತ್ತಾಗೆ ಬಂದಿದ್ದ ಡ್ರಗ್ ಪೆಡ್ಲರ್​ನನ್ನು ಬಂಧಿಸಿರುವ ಕೋಲ್ಕತ್ತಾ ಪೊಲೀಸರು ಆತನ 20 ಕೋಟಿ ರೂ. ಮೌಲ್ಯದ 3 ಕೆಜಿ 749 ಗ್ರಾಂ ಹೆರಾಯಿನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Heroin worth Rs 20 crore seized in Kolkata
20 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ, ಡ್ರಗ್ ಪೆಡ್ಲರ್​​ ಅರೆಸ್ಟ್​
author img

By

Published : Dec 5, 2020, 5:10 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜಂಟಿ ಕಾರ್ಯಾಚರಣೆಯಲ್ಲಿ ಕೋಲ್ಕತ್ತಾ ಪೊಲೀಸರು ಮತ್ತು ವಿಶೇಷ ಪೊಲೀಸ್​ ಕಾರ್ಯಪಡೆ ಬರೋಬ್ಬರಿ 20 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದು, ಓರ್ವ ಡ್ರಗ್ ಪೆಡ್ಲರ್​ನನ್ನು ಬಂಧಿಸಿದ್ದಾರೆ.

ಆರೋಪಿ ಹಲೀಮ್ ಶೇಖ್ (40) ಮಾಲ್ಡಾದ ನಿವಾಸಿಯಾಗಿದ್ದು, ಮಾದಕವಸ್ತು ಕಳ್ಳಸಾಗಣೆಗಾಗಿ ಕೋಲ್ಕತ್ತಾಗೆ ಬಂದಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈತನ ಬಳಿಯಿದ್ದ 3 ಕೆಜಿ 749 ಗ್ರಾಂ ಹೆರಾಯಿನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಗೊಂಬೆಯೊಳಗೆ ಹೆರಾಯಿನ್ ಇಟ್ಟು ಸಾಗಣೆ ಮಾಡುತ್ತಿದ್ದ ಖತರ್ನಾಕ್ ದಂಧೆಕೋರ ಅಂದರ್​​!

ತನಿಖೆಯಲ್ಲಿರುವ ಅಂತಾರಾಷ್ಟ್ರೀಯ ಡ್ರಗ್​​ ಪ್ರಕರಣವೊಂದರ ಜೊತೆ ಈತನ ಸಂಬಂಧವಿದೆ ಎಂದು ಹಾಗೂ ಹೆರಾಯಿನ್ ಅನ್ನು ಬಾಂಗ್ಲಾದೇಶದ ಗಡಿಯ ಮೂಲಕ ತರಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದರ ಹಿಂದಿರುವ ದೊಡ್ಡ ಜಾಲದ ಸಂಪೂರ್ಣ ಮಾಹಿತಿ ತಿಳಿಯಲು ಹಲೀಂನನ್ನು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಪೊಲೀಸ್​ ಕಾರ್ಯಪಡೆಯು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದು, ಪೊಲೀಸ್ ಕಸ್ಟಡಿಗೆ ಮನವಿ ಸಲ್ಲಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.