ವಿಜಯಪುರ : ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬರುವ ಮುನ್ನವೇ ಸದಸ್ಯರೊಬ್ಬರನ್ನು ಮತ್ತೊಬ್ಬ ಸದಸ್ಯ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ರಾಮನ ಹಳ್ಳಿಯಲ್ಲಿ ನಡೆದಿದೆ.
ಓದಿ: ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಹೆಚ್.ಡಿ.ಕುಮಾರಸ್ವಾಮಿ!
ಗ್ರಾಪಂ ಸದಸ್ಯನನ್ನು ಮತ್ತೊಬ್ಬ ಸದಸ್ಯ ಅಪಹರಣ ಮಾಡಿದ್ದಾರೆ ಎಂದು ಅಪಹರಣಕ್ಕೆ ಒಳಗಾದ ಸದಸ್ಯನ ಕುಟುಂಬದವರು ದೂರು ದಾಖಲಿಸಿದ್ದಾರೆ. ರಾಮನಹಳ್ಳಿ ಪಂಚಾಯತ್ ವ್ಯಾಪ್ತಿಗೆ ಬರುವ ವಾರ್ಡ್ ನಂ. 02ರ ಸದಸ್ಯ ಶರಣಪ್ಪ ದೊಡ್ಡಮನಿ ಅವರು ಅಪಹರಣಕ್ಕೊಳಗಾದ ಸದಸ್ಯರಾಗಿದ್ದಾರೆ.
ಅದೇ ಪಂಚಾಯತ್ ಸದಸ್ಯ ಮಾಹಾಂತೇಶ ಮಾಡ್ಯಾಳ ಎನ್ನುವರು ಅಪಹರಣ ಮಾಡಿದ್ದಾರೆ ಎಂದು ಅಪರಣಕ್ಕೊಳಗಾದ ಶರಣಪ್ಪ ದೊಡಮನಿ ಪುತ್ರ ಬಾಗಪ್ಪ ದೊಡಮನಿ ಎನ್ನುವರು ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.