ಹುಬ್ಬಳ್ಳಿ : ಮನೆಗಳ್ಳತನ ನಡೆಸುತ್ತಿದ್ದ ನಾಲ್ವರು ಕಳ್ಳರನ್ನು ಬಂಧಿಸಿ 14,30,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸುಕೊಳ್ಳುವಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
![four-thieve-are-detention](https://etvbharatimages.akamaized.net/etvbharat/prod-images/6000774_hbl.jpg)
ಆನಂದನಗರ ನಿವಾಸಿ ಮಹಮ್ಮದ್ ಅಲಿ ಅಲ್ಲಾಭಕ್ಷ ನಾಲಬಂದ (45), ಬಾಣತಿಕಟ್ಟಿಯ ಮಹಮ್ಮದಗೌಸ್ ಅಲಿಯಾಸ್ ಗೌಸಮೋದಿನ ರಫೀಕಸಾಬ್ ಬಿಜಾಪೂರ (24), ಖ್ವಾಜಾಸಾಬ ಮಹಮ್ಮದಗೌಸ್ ಶಿಗ್ಗಾಂವ (25) ಹಾಗೂ ಕಲ್ಮೇಶ್ವರ ನಗರದ ನಿವಾಸಿ ಅಬ್ದುಲಖಾದರ್ ಜೈಲಾನಿ ಮುಜಾವರ (35) ಬಂಧಿತ ಆರೋಪಿಗಳು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಎಸ್. ಗುಳ್ಳಾರಿ ಇವರ ನೇತೃತ್ವದಲ್ಲಿ ಎ.ಎಸ್.ಐ, ಎಸ್.ಎಸ್. ದೊಡ್ಡಮನಿ, ಬಿ.ಎಮ್. ಹೆರೂರು ಮತ್ತು ಸಿಬ್ಬಂದಿ ಯಶಸ್ವಿಯಾಗಿ ಪ್ರಕರಣಗಳನ್ನು ಭೇದಿಸಿದ್ದಾರೆ.