ETV Bharat / jagte-raho

ನಟಿಗೆ ಲೈಂಗಿಕ ಕಿರುಕುಳ ಆರೋಪ: ವಿಚಾರಣೆಗೆ ಹಾಜರಾದ ನಿರ್ದೇಶಕ ಅನುರಾಗ್​ ಕಶ್ಯಪ್ - ಅನುರಾಗ್​ ಕಶ್ಯಪ್

ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್ ವಿರುದ್ಧ ನಟಿ ಪಾಯಲ್​ ಘೋಷ್ ಲೈಂಗಿಕ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದು, ವಿಚಾರಣೆಗೆ ಹಾಜರಾಗಲು ಮುಂಬೈನ ವೆರ್ಸೋವ ಪೊಲೀಸ್​ ಠಾಣೆಗೆ ಕಶ್ಯಪ್ ಬಂದಿದ್ದಾರೆ.

Film director Anurag Kashyap
ನಟಿಗೆ ಲೈಂಗಿಕ ಕಿರುಕುಳ ಆರೋಪ
author img

By

Published : Oct 1, 2020, 11:15 AM IST

ಮುಂಬೈ: ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್ ವಿಚಾರಣೆಗೆ ಹಾಜರಾಗಲು ಮುಂಬೈನ ವೆರ್ಸೋವ ಪೊಲೀಸ್​ ಠಾಣೆಗೆ ಆಗಮಿಸಿದ್ದಾರೆ.

ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳ (ಮೀ ಟೂ) ಆರೋಪ ಮಾಡಿದ್ದ ನಟಿ ಪಾಯಲ್​ ಘೋಷ್, ವೆರ್ಸೋವ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕಶ್ಯಪ್​ರಿಗೆ ನೋಟಿಸ್​ ನೀಡಿದ್ದರು. ಹೀಗಾಗಿ ಇಂದು ಕಶ್ಯಪ್ ವಿಚಾರಣೆಗೆ ಹಾಜರಾಗಿದ್ದಾರೆ.

ವೆರ್ಸೋವ ಪೊಲೀಸ್​ ಠಾಣೆಗೆ ಬಂದ ಅನುರಾಗ್​ ಕಶ್ಯಪ್

ಸೆ. 19ರಂದು ಪಾಯಲ್​ ಘೋಷ್ ತಮ್ಮ ಟ್ವಿಟರ್​ ಖಾತೆಯಲ್ಲಿ ಅನುರಾಗ್​ ಕಶ್ಯಪ್ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬರೆದುಕೊಂಡಿದ್ದರು. ಬಳಿಕ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ 2014ರಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಕಶ್ಯಪ್ ಅವರ ಮನೆಗೆ ಹೋದಾಗ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ಪಾಯಲ್​ ಹೇಳಿದ್ದರು.

ತನಗೆ ಭದ್ರತೆ ಒದಗಿಸುವಂತೆ ಕೋರಿ ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯರಿ ಹಾಗೂ ಕೇಂದ್ರ ಸಚಿವ ರಾಮದಾಸ್​​ ಅಠಾವಳೆ ಅವರನ್ನ ಪಾಯಲ್​ ಭೇಟಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.