ಶಿರಸಿ: ಉಪ ಚುನಾವಣೆಯ ಹಿನ್ನೆಲೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬನವಾಸಿಯಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬನವಾಸಿ ಸಮೀಪದ ಕನಕಪುರ ಚೆಕ್ ಪೋಸ್ಟ್ ಬಳಿ 4 ಲಕ್ಷ 8500 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಬನವಾಸಿ ಪೆಟ್ರೋಲ್ ಬಂಕ್ ಮಾಲೀಕ ವಿನೋದ ಕಾಮತ್ ಎಂಬುವವರಿಗೆ ಸೇರಿದ ಹಣ ಇದಾಗಿದ್ದು, ಬನವಾಸಿಯಿಂದ ಜಡೆ ಗ್ರಾಮದ ಕಡೆ ವಾಹನದಲ್ಲಿ ಒಯ್ಯಲಾಗುತಿತ್ತು ಎನ್ನಲಾಗಿದೆ. ಅಧಿಕಾರಿಗಳಿಂದ ಹಣ ಪರಿಶೀಲನೆ ನಡೆದಿದ್ದು, ಪ್ಲೈಯಿಂಗ್ ಸ್ಕ್ವಾಡ್ ಗೆ ಹಣ ಹಸ್ತಾಂತರಿಸಲಾಗಿದೆ.