ಧಾರವಾಡ: ತಾಲೂಕಿನ ಬೋಗೂರ ಗ್ರಾಮದ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಇತಹದ್ದೇ ಮತ್ತೊಂದು ದುಷ್ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಗ್ರಾಮವೊಂದರ ಬಾಲಕಿಯೊಬ್ಬಳ ಮೇಲೆ ಮೇ 21ಕ್ಕೆ ಅದೇ ಗ್ರಾಮದ ಕಿಡಿಗೇಡಿಗಳು ಅತ್ಯಾಚಾರವೆಸಗಿ ವಿಷ ಕುಡಿಸಿ ಅವರೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾರೆ. ಮಾದನಭಾವಿ ಗ್ರಾಮದ ಬಸವರಾಜ ಕಿರಾಳೆ, ಸಮೀರ್ ಮುಲ್ಲಾನವರ್ ಎಂಬುವರು ಬಾಲಕಿ ಹೊಲದಲ್ಲಿ ಓದಿಕೊಳ್ಳುತ್ತಿದ್ದ ಸಮಯದಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಷ ಕುಡಿಸಿದ್ದಾರೆ ಎಂದು ಮೃತ ಬಾಲಕಿಯ ತಂದೆ ಕಣ್ಣೀರು ಹಾಕಿದ್ದಾರೆ.
ಬಾಲಕಿಯನ್ನು ಮೇ 21 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 23 ಕ್ಕೆ ಆಕೆ ಮೃತಪಟ್ಟಿದ್ದಳು. ಅಂದೇ ಮೃತ ಬಾಲಕಿಯ ತಂದೆ, ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದ್ರೆ ಪೊಲೀಸರು ಓರ್ವನನ್ನು ಮಾತ್ರ ಬಂಧಿಸಿದ್ದಾರೆ. ಇದರಿಂದ ಮೃತ ಬಾಲಕಿ ತಂದೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರು, ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧಿಸದಿರುವುದು ವಿಷಾದಕರ ಸಂಗತಿ, ಆರೋಪಿಗಳು ಯಾವುದೇ ಜಾತಿ ಧರ್ಮದವಾರಿದ್ದರೂ ಸರಿ, ತಪ್ಪು ತಪ್ಪೇ. ಅವರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.