ETV Bharat / jagte-raho

ಡೆಲಿವರಿ ಬಾಯ್​ ಕೊಲೆಗೈದ ದುಷ್ಕರ್ಮಿಗಳು: ಕ್ಷುಲ್ಲಕ ಕಾರಣಕ್ಕೆ ಘಟನೆ ಶಂಕೆ - ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್​ ಕೊಲೆ

ಐವರು ದುಷ್ಕರ್ಮಿಗಳು ಸೇರಿ ಯುವಕನೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸ್ನೇಹಿತರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

Delivery boy stabbed to death in Bangalore
Delivery boy stabbed to death in Bangalore
author img

By

Published : Dec 27, 2019, 9:35 AM IST

ಬೆಂಗಳೂರು: ಶ್ರೀರಾಂಪುರದ ಆರ್.​ಜೆ. ನಗರದ ಬಸ್​ಸ್ಟಾಂಡ್​ ಬಳಿ ಕ್ಷುಲ್ಲಕ ಕಾರಣಕ್ಕೆ ಐವರು ದುಷ್ಕರ್ಮಿಗಳು ಸೇರಿ ಯುವಕನೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ದೀಪಾಂಜಲಿ ನಗರದ ನಿವಾಸಿ ಮಂಜುನಾಥ್​ (25 ) ಕೊಲೆಗೀಡಾದ ವ್ಯಕ್ತಿ. ಹಣಕಾಸಿನ ವಿಚಾರಕ್ಕೆ ಮಂಜುನಾಥ್​ನನ್ನು ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್​​ ನಿನ್ನೆ (ಶುಕ್ರವಾರ) ರಾತ್ರಿ 9 ಗಂಟೆ ಸುಮಾರಿಗೆ ಶ್ರೀರಾಂಪುರಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಮಾತನಾಡಬೇಕೆಂದು ಮಂಜುನಾಥ್​ನನ್ನು ಕರೆದೊಯ್ದು ಗಲಾಟೆ ಮಾಡಿದ್ದಾರೆ.

ಕೃತ್ಯ ನಡೆದ ಸ್ಥಳ

ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ವ್ಯಕ್ತಿಯೊಬ್ಬ ಹಿಂಬದಿಯಿಂದ ಮಂಜುನಾಥ್​ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ತಿವಿದಿದ್ದಾನೆ. ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಜುನಾಥ್​ಗೆ ಮತ್ತೊಬ್ಬ ತಲೆಗೆ ಲಾಂಗ್​​ನಿಂದ ಹೊಡೆದಿದ್ದಾನೆ.

ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವ ಉಂಟಾಗಿ ಮಂಜುನಾಥ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶ್ರೀರಾಂಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಡೆಲಿವರಿ ಬಾಯ್​ ಕೊಲೆ ಮಾಡಿದ ದುಷ್ಕರ್ಮಿಗಳು.

ಕ್ಷುಲ್ಲಕ ಕಾರಣಕ್ಕೆ ಯುವಕನನ್ನ ಐದಾರು ಮಂದಿ ದುಷ್ಕರ್ಮಿಗಳು ಸೇರಿ ಚಾಕುವಿನಿಂದ ತಿವಿದು ಕೊಲೆ ಮಾಡಿರುವ ‌ಘಟನೆ ಬೆಂಗಳೂರಿನ ಶ್ರೀರಾಂಪುರದ ಆರ್​ಜೆ ನಗರದ 81 ಬಸ್​ಸ್ಟಾಂಡ್​ ಬಳಿ ನಡೆದಿದೆ...ದೀಪಾಂಜಲಿ ನಗರದ ನಿವಾಸಿ ಮಂಜುನಾಥ್​ (25 ) ಮೃತ ದುರ್ದೈವಿ ..

ಡೆಲಿವರಿ ಬಾಯ್​ ಆಗಿ ಕೆಲಸ ಮಾಡ್ತಿರೋ ಮಂಜುನಾಥ್​​ ನೆನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶ್ರೀರಾಂಪುರಕ್ಕೆ ಬಂದಿದ್ದ. ಈ ನಡುವೆ ದುಷ್ಕರ್ಮಿಗಳು ಮಾತನಾಡಬೇಕೆಂದು ಮಂಜುನಾಥ್​ನನ್ನ ಕರೆದೊಯ್ದು ಗಲಾಟೆ ಮಾಡಿದ್ದಾರೆ.. ಹೀಗಿರುವಾಗ್ಲೇ ಹಿಂಬದಿಯಿಂದ ದುಷ್ಕರ್ಮಿಯೊಬ್ಬ ಮಂಜುನಾಥ್​ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ತಿವಿದಿದ್ದಾನೆ..ಕೂಡ್ಲೇ ಮಂಜುನಾಥ್​​ ಅಲ್ಲಿಂದ ಓಡಲು ಯತ್ನಿಸಿದ್ದು, ಮತ್ತೊಬ್ಬ ಲಾಂಗ್​​ನಿಂದ ತಲೆಗೆ ಹೊಡೆದಿದ್ದಾನೆ..

ಇದ್ರಿಂದ ತೀವ್ರ ರಕ್ತಸ್ರಾವವಾದ ಹಿನ್ನಲೆ ಮಂಜುನಾಥ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ.. ಹಣಕಾಸಿನ ವಿಚಾರಕ್ಕೆ ಮಂಜುನಾಥ್​ನನ್ನ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.ಇನ್ನು ಸ್ಥಳಕ್ಕೆ ಶ್ರೀರಾಂಪುರ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ..Body:KN_BNG_01_MURDER_7204498Conclusion:KN_BNG_01_MURDER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.