ETV Bharat / jagte-raho

ಇಸ್ರೇಲ್​ನಲ್ಲಿದ್ದ ಚೀನಾ ರಾಯಭಾರಿ ಶವವಾಗಿ ಪತ್ತೆ! - ಜೆರುಸೆಲಂ

ಇಸ್ರೇಲ್​ನ ಚೀನಾ ರಾಯಭಾರಿ ಡು ವೀ, ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆಸಿದ್ದೇವೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ.

Chinese ambassador to Israel found dead in home
ಇಸ್ರೇಲ್​ನಲ್ಲಿ ಚೀನಾದ ರಾಯಭಾರಿ ಶವವಾಗಿ ಪತ್ತೆ
author img

By

Published : May 17, 2020, 4:53 PM IST

ಜೆರುಸೆಲಂ: ಇಸ್ರೇಲ್​ನಲ್ಲಿನ ಚೀನಾದ ರಾಯಭಾರಿಯ ಮೃತದೇಹ ಅವರ ನಿವಾಸದಲ್ಲಿ ಪತ್ತೆಯಾಗಿರುವುದಾಗಿ ಇಸ್ರೇಲ್​ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಸಾವಿಗೆ ಕಾರಣ ತಿಳಿದು ಬಂದಿಲ್ಲ, ತನಿಖೆ ಮುಂದುವರೆಸಿದ್ದೇವೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಉಕ್ರೇನ್‌ಗೆ ಚೀನಾದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಡು ವೀ ಅವರನ್ನು, ಕೋವಿಡ್​-19 ಬಿಕ್ಕಟ್ಟಿನ ನಡುವೆ ಫೆಬ್ರವರಿಯಲ್ಲಿ ಇಸ್ರೇಲ್​ನ ರಾಯಭಾರಿಯಾಗಿ ನೇಮಿಸಲಾಗಿತ್ತು.

ಇಸ್ರೇಲ್ ಹಾಗೂ ಚೀನಾ ನಡುವೆ ಉತ್ತಮ ಬಾಂಧವ್ಯವಿದೆ. ಇಸ್ರೇಲ್​ನಲ್ಲಿ ಚೀನಾದ ಹೂಡಿಕೆಗಳನ್ನು ಖಂಡಿಸಿ ಹಾಗೂ ಕೊರೊನಾ ಕುರಿತು ಚೀನಾ ಮಾಹಿತಿಯನ್ನು ಮರೆಮಾಚಿದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಆರೋಪಿಸಿದ್ದರು. ಈ ಆರೋಪವನ್ನು ಡು ವೀ ಖಂಡಿಸಿದ ಎರಡು ದಿನಗಳ ಬಳಿಕ ಇದೀಗ ಅವರು ಶವವಾಗಿ ಪತ್ತೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.