ಚಾಮರಾಜನಗರ: ಕಾರು ರಿವರ್ಸ್ ಮಾಡುವ ವೇಳೆ ಅವಘಡ ಸಂಭವಿಸಿ ಹಾಲುಗಲ್ಲದ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕಹೊಳೆ ಬಳಿಯ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ರೋಹಿತ್(1) ಮೃತಪಟ್ಟ ಕಂದಮ್ಮ. ತಂದೆ ಶಕ್ತಿವೇಲು ಹೊರಗಡೆ ಹೋಗಲು ಶೆಡ್ನಿಂದ ಕಾರು ತೆಗೆಯುವ ವೇಳೆ ಮಗು ಅಪ್ಪನನ್ನು ಹಿಂಬಾಲಿಸಿದೆ. ಮಗುವನ್ನು ಗಮನಿಸದ ತಂದೆ ರಿವರ್ಸ್ ತೆಗೆದಾಗ ಕಾರು ಗುದ್ದಿದ ರಭಸಕ್ಕೆ ಮಗು ತೀವ್ರ ಅಸ್ವಸ್ಥಗೊಂಡಿದೆ. ತಾಳವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿದೆ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸದ್ಯ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಮಗುವಿನ ಮೃತದೇಹ ರವಾನಿಸಿದ್ದಾರೆ.