ನೆಲಮಂಗಲ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಾಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಆತನನ್ನು ರಕ್ಷಿಸುವ ಬದಲಿಗೆ ದೃಶ್ಯ ನೋಡುತ್ತಾ ನಿಂತು ಜನರು ಮಾನವೀಯತೆ ಮರೆತಿರುವ ಘಟನೆ ನಡೆದಿದೆ.
ನೆಲಮಂಗಲ ನವಯುಗ ಟೋಲ್ ಬಳಿ ಘಟನೆ ನಡೆದಿದ್ದು, ಲಾರಿ ಚಕ್ರದಡಿ ಸಿಲುಕಿದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ. ತಕ್ಷಣವೇ ಆಸ್ಪತ್ರೆಗೆ ಸೇರಿಸಲು ಜನ ಹಿಂದೇಟು ಹಾಕಿದ್ದಾರೆ. ಟೋಲ್ ಬಳಿಯೇ ಅಪಘಾತವಾದರು ಟೋಲ್ ಆಂಬ್ಯುಲೆನ್ಸ್ ಸಹ 20 ನಿಮಿಷ ತಡವಾಗಿ ಬಂದಿದೆ. ಆಂಬ್ಯುಲೆನ್ಸ್ ಬರುವರೆಗೂ ಆತ ನರಳಾಡುತ್ತಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.