ETV Bharat / jagte-raho

ಬೆಂಗಳೂರಿಗೆ ಭೂಗತ ಪಾತಕಿ ರವಿ ಪೂಜಾರಿ ಕರೆತಂದ ಪೊಲೀಸರು

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಬೇಕಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ರಾಜ್ಯ ಪೊಲೀಸರು ಇಂದು‌ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

ravi poojary
ರವಿ ಪೂಜಾರಿ
author img

By

Published : Feb 23, 2020, 9:02 PM IST

Updated : Feb 24, 2020, 5:49 AM IST

ಬೆಂಗಳೂರು: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಮೋಸ್ಟ್​​ ವಾಂಟೆಡ್​​ ಲಿಸ್ಟ್​​ನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ರಾಜ್ಯ ಪೊಲೀಸರು ಆಫ್ರಿಕಾದ ಸೆನಗಲ್ ದೇಶದಿಂದ ಭಾನುವಾರ ತಡರಾತ್ರಿ ಬೆಂಗಳೂರಿಗೆ ಕರೆ ತಂದಿದ್ದಾರೆ.

ಬೆಂಗಳೂರಿಗೆ ಭೂಗತ ಪಾತಕಿ ರವಿ ಪೂಜಾರಿ ಕರೆತಂದ ಪೊಲೀಸರು

ಸುಮಾರು 15 ವರ್ಷಗಳಿಂದ ರವಿ ಪೂಜಾರಿಗಾಗಿ ರಾಜ್ಯ ಪೊಲೀಸರ ಜೊತೆಗೆ ಎನ್​ಐಎ, ರಾ ಹಾಗೂ ಕೇಂದ್ರ ತನಿಖಾ ತಂಡ‌ಗಳು ಹುಡುಕಾಟ ನಡೆಸುತ್ತಿದ್ದವು. ರವಿ ಪೂಜಾರಿ ವಿರುದ್ಧ ಕರ್ನಾಟಕ,‌ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ 49 ಕೇಸ್​ಗಳು ದಾಖಲಾಗಿವೆ. ಈತ 20 ವರ್ಷಗಳ ಹಿಂದೆಯೇ ಭಾರತದಿಂದ ಪರಾರಿಯಾಗಿದ್ದ. ಕಳೆದ ವರ್ಷ ಜ.19ರಂದು ಪೂಜಾರಿಯನ್ನು ಸೆನೆಗಲ್ ಪೊಲೀಸರು ಸೆರೆಹಿಡಿದಿದ್ದರು.ಸದ್ಯ ರವಿ ಪೂಜಾರಿ ರಾಜ್ಯ ಪೊಲೀಸರ ವಶದಲ್ಲಿದ್ದು, ಬೆಂಗಳೂರಿನ ಮಡಿವಾಳದ ಇಂಟರಗೇಷನ್ ಸೆಂಟರ್​ಗೆ ಕರೆದೊಯ್ಯಲಾಗಿದೆ.

  • Bengaluru: Ravi Pujari (wearing white cap), accused of committing serious offences including murder and extortion, reaches Kempegowda International Airport. He was extradited from Senegal on February 22 pursuant to an extradition request made by India in early 2019. #Karnataka pic.twitter.com/3cAALKm3Ss

    — ANI (@ANI) February 23, 2020 " class="align-text-top noRightClick twitterSection" data=" ">

ಇಂದು ಬಿಗಿ ಭದ್ರತೆಯಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಿದ್ದಾರೆ. ಸದ್ಯ ಈತನನ್ನು ರಾಜ್ಯ ಪೊಲೀಸರ‌ ಜೊತೆಗೆ ಎನ್​ಐಎ, ರಾ ಹಾಗೂ ಕೇಂದ್ರ ತನಿಖಾ ತಂಡದವರು ಮಡಿವಾಳದ ಇಂಟರಗೇಷನ್ ಸೆಂಟರ್​​ನಲ್ಲಿ ಬಿಗಿಭದ್ರತೆ ನಡುವೆ ವಿಚಾರಣೆ ನಡೆಸಲಿದ್ದಾರೆ.

ಸದ್ಯ ಮಡಿವಾಳ ಇಂಟರಗೇಷನ್ ಸೆಂಟರ್​​ನಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಅಮರ್ ಕುಮಾರ್ ಪಾಂಡೆ, ಹೆಚ್ಚುವರಿ ಆಯುಕ್ತ ಮುರುಗನ್, ಡಿಸಿಪಿ ಕುಲ್ದೀಪ್, ಇಶಾ ಪಂಥ್, ಭೀಮಾಶಂಕರ್ ಗುಳೇದ್ ಸೇರಿ ಹಿರಿಯ ಅಧಿಕಾರಿಗಳು ‌ಮೊಕ್ಕಂ ಹೂಡಿದ್ದಾರೆ.

Last Updated : Feb 24, 2020, 5:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.