ತಿರುಚಿರಾಪಲ್ಲಿ(ತಮಿಳುನಾಡು) : ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಇಲ್ಲಿನ ಎರಡು ಖಾಸಗಿ ಕಂಪನಿಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ₹4.43 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದೆ.
ತಿರುಚಿರಾಪಲ್ಲಿಯ ಮೆಸ್ಸರ್ಸ್ ಸೆಥರ್ ಲಿಮಿಟೆಡ್ ಹಾಗೂ ಮೆಸ್ಸರ್ಸ್ ಎನ್ಎಸ್ಕೆ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರ ನಿವಾಸ ಹಾಗೂ ಕಚೇರಿಯಲ್ಲಿ ಇಡಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಶೋಧದ ವೇಳೆ ಚಿನ್ನಾಭರಣ, ಆಸ್ತಿ ದಾಖಲೆಗಳು ಹಾಗೂ ಕೆಲ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ: 50 ಲಕ್ಷ ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್‌ಸ್ಟೇಬಲ್
ಈ ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ತಡೆ ಕಾಯ್ದೆ-2002ರ ಅಡಿ ಕೇಂದ್ರೀಯ ತನಿಖಾ ದಳದ ಬೆಂಗಳೂರು ವಿಭಾಗ ಎಫ್ಐಆರ್ ದಾಖಲಿಸಿತ್ತು. ಇಂಡಿಯನ್ ಮತ್ತು ಇತರ ಬ್ಯಾಂಕ್ಗಳಿಗೆ ಈ ಕಂಪನಿಗಳು 1340 ಕೋಟಿ ರೂ. ವಂಚಿಸಿರುವ ಆರೋಪವಿತ್ತು.
ಈ ಸಂಬಂಧ ತನಿಖೆ ಆರಂಭಿಸಿದ್ದ ಇಡಿ, ದಾಳಿ ನಡೆಸಿದೆ ಹಾಗೂ ತನಿಖೆ ಪ್ರಗತಿಯಲ್ಲಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.