ETV Bharat / jagte-raho

ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಕೃತ್ಯ... ಬೆಳ್ಳಂಬೆಳಗ್ಗೆ ಒಂಟಿಯಾಗಿ ಓಡಾಡುವ ಯುವತಿಯರೇ ಎಚ್ಚರ! - crime news in bangalore

ಬೆಳ್ಳಂಬೆಳಗ್ಗೆ ಯುವತಿವೋರ್ವಳು ಬೆಂಗಳೂರಿನ ವಿಕ್ಟೋರಿಯಾ ಲೇಔಟ್​ನಲ್ಲಿ ಒಂಟಿಯಾಗಿ ಫುಟ್ ಪಾತ್ ಮೇಲೆ ತೆರಳುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.

attempt-to-snatch-mobile-from-girl-at-bangalore
attempt-to-snatch-mobile-from-girl-at-bangalore
author img

By

Published : Feb 4, 2020, 2:20 PM IST

Updated : Feb 4, 2020, 3:26 PM IST

ಬೆಂಗಳೂರು: ನೀವು ಬೆಳಗಿನಜಾವ ಒಬ್ಬರೇ ಓಡಾಡುತ್ತಿರಾ? ಹಾಗಾದ್ರೆ, ನಿಮ್ಮ ಮೈಯೆಲ್ಲಾ‌‌ ಕಣ್ಣಾಗಿರಲಿ. ಏಕೆಂದ್ರೆ ಯಾವಾಗ, ಎಲ್ಲಿಂದ ಸುಲಿಗೆಕೋರರು ಬರುತ್ತಾರೋ ಗೊತ್ತಿಲ್ಲ.

ಯುವತಿಯಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ ಖದೀಮರು

ನಾವು ಇಷ್ಟೆಲ್ಲ ಹೇಳೋಕೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಸಿಸಿಟಿವಿ ದೃಶ್ಯಾವಳಿ. ಇಂದು ಬೆಳ್ಳಂಬೆಳಗ್ಗೆ ಯುವತಿವೋರ್ವಳು ನಗರದ ವಿಕ್ಟೋರಿಯಾ ಲೇಔಟ್​ನಲ್ಲಿ ಒಂಟಿಯಾಗಿ ಫುಟ್ ಪಾತ್ ಮೇಲೆ ತೆರಳುತ್ತಿದ್ದಾಗ ದಿಢೀರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

ಆದರೆ‌, ಅದೃಷ್ಟವಶಾತ್​ ಯುವತಿ ದರೋಡೆಕೋರರಿಂದ ತಪ್ಪಿಸಿಕೊಂಡು ಕಿರುಚುತ್ತ ವಾಪಸ್​ ಹಿಂದೆ ಓಡಿ ಬಂದಿದ್ದಾಳೆ. ಆಕೆಯ ಚೀರಾಟದಿಂದ ಎಚ್ಚೆತ್ತುಕೊಂಡ ಖದೀಮರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಯುವತಿಯ ಮೊಬೈಲ್ ಕಸಿಯಲು ಯತ್ನಿಸಿರುವ ದೃಶ್ಯ ಆ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ‌ಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ಬಂಧನಕ್ಕೆ ತಲಾಶ್​ ನಡೆಸಿದ್ದಾರೆ.

Intro:ನಸುಕಿನಲ್ಲಿ ಒಬ್ಬಂಟಿಯಾಗಿ ಓಡಾಡುವ ಯುವತಿಯರೇ ಹುಷಾರ್..

ನಸುಕಿನಲ್ಲಿ ಒಬ್ಬಂಟಿಯಾಗಿ ನಾವು ಓಡಾಡುವ ಮುನ್ನ ಮೈಯೆಲ್ಲಾ‌‌ ಕಣ್ಣಾಗಿರಬೇಕು.. ಯಾಕಂದ್ರೆ ನೋಡ ನೋಡುತ್ತಲೇ ನಿಮ್ಮ ಮೊಬೈಲ್ ಸ್ನಾಚ್ ಮಾಡ್ತಾರೆ ಸುಲಿಗೆಕೋರರು..

ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರಿನ ವಿಕ್ಟೋರಿಯಾ ಲೇಔಟ್ನಲ್ಲಿ ಒಂಟಿಯಾಗಿ ಯುವತಿ ತೆರಳ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಫುಟ್ ಪಾತ್ ಮೇಲೆ ಯುವತಿ ನಡ್ಕೊಂಡು ತೆರಳ್ತಿದ್ದ ವೇಳೆ ಮೊಬೈಲ್ ಕಿತ್ತುಕೊಳ್ಳಲು ಯತ್ನ ಪಟ್ಟಿದ್ದಾರೆ.

ಆದರೆ‌ ಯುವತಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ವಾಪಸ್ಸು ಹಿಂದೆ ಕಿರುಚಿಕೋಂಡು ಓಡ್ಕೊಂಡು ಬಂದಿದ್ದಾಳೆ.ಇದನ್ನ ನೋಡಿದ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಮೊಬೈಲ್ ಸ್ನಾಚ್ ಯತ್ನ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆ‌ಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದ್ದು ಬೆಂಗಳೂರಿನ ಪೊಲೀಸರು ಆರೋಪಿಗಳಿಗೆ ತಲಾಷ್ ಮಾಡಿದ್ದಾರೆBody:KN_BNG_03_SNTCH_7204498Conclusion:KN_BNG_03_SNTCH_7204498
Last Updated : Feb 4, 2020, 3:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.