ದಾವಣಗೆರೆ: ಆಯ ತಪ್ಪಿ ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟ ಘಟನೆ ಹೊಸಕುಂದುವಾಡ ಗ್ರಾಮದಲ್ಲಿ ನಡೆದಿದೆ.
ಕೂಲಿ ಕಾರ್ಮಿಕ ತಿಪ್ಪೇಶ್ ಹಾಗೂ ಮಂಜಮ್ಮ ದಂಪತಿಯ ಪುತ್ರ ಸಿದ್ದೇಶ್ ಸಾವನ್ನಪ್ಪಿದ ಮಗು. ಮನೆ ಮುಂದೆ ಆಟವಾಡುವಾಗ ಆಯ ತಪ್ಪಿ ಮಗು ತೊಟ್ಟಿಗೆ ಬಿದ್ದು ಉಸಿರುಗಟ್ಟಿ ಅಸುನೀಗಿದೆ. ಮಗು ಕಳೆದುಕೊಂಡ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.