ETV Bharat / jagte-raho

ಹರಿದ್ವಾರ ಕಾರಾಗೃಹದಿಂದ 8 ಕೈದಿಗಳು ಪರಾರಿ! - ರೋಶನಾಬಾದ್​ನಲ್ಲಿರುವ ತಾತ್ಕಾಲಿಕ ಜೈಲು

ಕೋವಿಡ್​-19 ಮಾರ್ಗಸೂಚಿಗಳನುಸಾರವಾಗಿ ಒಂದು ವಾರದ ಹಿಂದೆ ಹರಿದ್ವಾರದ ತಾತ್ಕಾಲಿಕ ಜೈಲಿಗೆ ಸ್ಥಳಾಂತರಿಸಲಾಗಿದ್ದ ಎಂಟು ಮಂದಿ ಕೈದಿಗಳು ಇಂದು ಪರಾರಿಯಾಗಿದ್ದಾರೆ.

8 prisoners escape from temporary jail in Haridwar
ಹರಿದ್ವಾರ ಕಾರಾಗೃಹದಿಂದ 8 ಕೈದಿಗಳು ಪರಾರಿ
author img

By

Published : Sep 22, 2020, 5:11 PM IST

ಹರಿದ್ವಾರ: ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೋಶನಾಬಾದ್​ನಲ್ಲಿರುವ ತಾತ್ಕಾಲಿಕ ಜೈಲಿನಿಂದ ಇಂದು ಎಂಟು ಮಂದಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಭಿಕ್ಷುಕರಿಗೆ ಆಶ್ರಯ ನೀಡಲಾಗುತ್ತಿದ್ದ ಕಟ್ಟಡವನ್ನು ತಾತ್ಕಾಲಿಕ ಜೈಲಾಗಿ ಮಾರ್ಪಾಡು ಮಾಡಲಾಗಿತ್ತು. ಕೋರ್ಟ್​ನಲ್ಲಿ ವಿಚಾರಣೆ ಬಳಿಕ ಈ ಕೈದಿಗಳನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಬೇಕಾಗಿತ್ತು. ಆದರೆ ಕೋವಿಡ್​-19 ಮಾರ್ಗಸೂಚಿಗಳನುಸಾರವಾಗಿ ಒಂದು ವಾರದ ಹಿಂದೆ ಇವರನ್ನು ಕೆಲದಿನಗಳ ಅವಧಿಗೆ ಈ ತಾತ್ಕಾಲಿಕ ಜೈಲಿಗೆ ಶಿಫ್ಟ್​ ಮಾಡಲಾಗಿತ್ತು.

ಕೈದಿಗಳು ಪರಾರಿಯಾಗುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಜನರಿಗೆ ಎಚ್ಚರಿಕೆ ನೀಡಿರುವ ಪೊಲೀಸರು, ಗಡಿ ಪ್ರದೇಶಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಕೈದಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.