ಕಾಬೂಲ್ : ಅಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಸುಮಾರು 15 ಮಂದಿ ದಂಗೆಕೋರರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ನಿನ್ನೆ ರಾತ್ರಿ ಪಕ್ತಿಯಾ ಪ್ರಾಂತ್ಯದ ರೋಹಾನಿ ಬಾಬಾ ಜಿಲ್ಲೆಯ ಚೆಕ್ ಪಾಯಿಂಟ್ ಬಳಿ ಆತ್ಮಾಹುತಿ ದಾಳಿ ನಡೆದಿದ್ದು, ಮೃತಪಟ್ಟವರ, ಗಾಯಗೊಂಡವರ ಕುರಿತು ನಿಖರ ಮಾಹಿತಿ ದೊರೆತಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ದಂಗೆಕೋರರು ಸಾವನ್ನಪ್ಪಿದ್ದನ್ನು ಇಂದು ಬೆಳಗ್ಗೆ ಟೋಲೋ ನ್ಯೂಸ್ ಸ್ಪಷ್ಟಪಡಿಸಿತ್ತು.
ಘಟನೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. ಇನ್ನು, ಇಂದು ಬೆಳಗ್ಗೆ ಕಾಬೂಲ್‌ನ ಖ್ವಾಜಾ ಸಬ್ಜ್ ಪೋಶ್ ಪ್ರದೇಶದಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡು ಭದ್ರತಾ ಪಡೆ ಸಿಬ್ಬಂದಿ ಮತ್ತು ನಾಗರಿಕರು ಗಾಯಗೊಂಡಿದ್ದಾರೆ.