ಕೀವ್(ಉಕ್ರೇನ್): ಯುದ್ಧದಲ್ಲಿ ಸಾವಿರಾರು ಜನ ಸಾಯುತ್ತಾರೆ ಎಂದು ನಿಮ್ಮ ಸೇನಾ ದಂಡನಾಯಕರುಗಳಿಗೂ ತಿಳಿದಿದೆ. ಹೀಗಿರುವಾಗ ನೀವು ಉಕ್ರೇನ್ ಯುದ್ಧದಲ್ಲಿ ಹೋರಾಟ ಮಾಡಬೇಡಿ, ರಷ್ಯಾಗೆ ಹೋಗಿ ಬದುಕಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಮ್ಮ ವಿಡಿಯೊ ಭಾಷಣದಲ್ಲಿ ರಷ್ಯಾದ ಸೈನಿಕರಿಗೆ ಮನವಿ ಮಾಡಿದ್ದಾರೆ.
ಯುದ್ಧದ ಆರಂಭಿಕ ವಾರಗಳಲ್ಲಿ ನಾಶವಾಗಿರುವ ಘಟಕಗಳಿಗೆ 'ಕಡಿಮೆ ಪ್ರೇರಣೆ ಮತ್ತು ಕಡಿಮೆ ಯುದ್ಧದ ಅನುಭವ' ಹೊಂದಿರುವವರನ್ನು ಕೂಡ ರಷ್ಯಾ ತನ್ನ ಹೊಸ ಪಡೆಗಳಾಗಿ ನೇಮಿಸಿಕೊಳ್ಳುತ್ತಿದೆ. ಆದ್ದರಿಂದ ಈ ಘಟಕಗಳನ್ನು ಮತ್ತೆ ಯುದ್ಧಕ್ಕೆ ಬಿಡಬಹುದು. ಮುಂದಿನ ದಿನಗಳಲ್ಲಿ ಅವರಲ್ಲಿ ಇನ್ನೂ ಸಾವಿರಾರು ಜನರು ಸಾವಿಗೀಡಾಗುತ್ತಾರೆ ಮತ್ತು ಸಾವಿರಕ್ಕೂ ಅಧಿಕ ಜನರು ಗಾಯಗೊಳ್ಳುತ್ತಾರೆ ಎಂಬುದು ರಷ್ಯಾದ ಕಮಾಂಡರ್‌ಗಳಿಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಅವರು ಇದೇ ವೇಳೆ ಎಚ್ಚರಿಸಿದರು.
ಯುದ್ಧದಲ್ಲಿ ಹೋರಾಡಲು ನಿರಾಕರಿಸಿದ್ದಕ್ಕಾಗಿ ರಷ್ಯಾದ ಕಮಾಂಡರ್‌ಗಳು ತಮ್ಮ ಸೈನಿಕರಿಗೆ ಸಾವಿನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಉದಾಹರಣೆಗೆ, ಶವಗಳನ್ನು ಸಂಗ್ರಹಿಸಲು ರಷ್ಯಾದ ಸೈನ್ಯವು ಹೆಚ್ಚುವರಿ ರೆಫ್ರಿಜರೇಟರ್ ಟ್ರಕ್‌ಗಳನ್ನು ಸಿದ್ಧಪಡಿಸುತ್ತಿದೆ. ಜನರಲ್‌ಗಳು ನಿರೀಕ್ಷಿಸುವ ಹೊಸ ನಷ್ಟಗಳ ಬಗ್ಗೆ ಅವರು ಸೈನಿಕರಿಗೆ ಹೇಳುವುದಿಲ್ಲ ಎಂದು ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ 3ನೇ ಮಹಾಯುದ್ಧವನ್ನು ಪ್ರಚೋದಿಸುತ್ತಿದೆ: ರಷ್ಯಾ ಎಚ್ಚರಿಕೆ