ETV Bharat / international

ವಿಶ್ವ ಪ್ರವಾಸೋದ್ಯಮ ದಿನ: ಕಾಂಬೋಡಿಯಾಗೆ ಈ ವರ್ಷ 3.5 ಮಿಲಿಯನ್ ಪ್ರವಾಸಿಗರ ಭೇಟಿ - ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯ

ಕಾಂಬೋಡಿಯಾಗೆ ಈ ವರ್ಷ ದಾಖಲೆಯ 3.5 ಮಿಲಿಯನ್ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ.

3.5 million int'l tourists visit Cambodia this year

author img

By ETV Bharat Karnataka Team

Published : Sep 27, 2023, 7:46 PM IST

ನಾಮ್​ಪೆನ್ (ಕಾಂಬೋಡಿಯಾ) : 2023 ರ ಮೊದಲ ಎಂಟು ತಿಂಗಳಲ್ಲಿ ಕಾಂಬೋಡಿಯಾಗೆ ಸುಮಾರು 3.5 ಮಿಲಿಯನ್ ಅಂತರರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 250.8 ರಷ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಹುನ್ ಮಾನೆಟ್ ಬುಧವಾರ ಹೇಳಿದ್ದಾರೆ. "ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು" ಎಂಬ ವಿಷಯದ ಅಡಿಯಲ್ಲಿ 2023 ರ ವಿಶ್ವ ಪ್ರವಾಸೋದ್ಯಮ ದಿನವನ್ನು ಗುರುತಿಸುವ ಸಂದೇಶದಲ್ಲಿ ಅವರು ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

"ನಮ್ಮ 'ವಿಸಿಟ್ ಕಾಂಬೋಡಿಯಾ ಇಯರ್ 2023' ಅಭಿಯಾನದೊಂದಿಗೆ, 2023 ರಲ್ಲಿ ಕಾಂಬೋಡಿಯಾಗೆ ಸರಿಸುಮಾರು 5 ಮಿಲಿಯನ್ ವಿದೇಶಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಪ್ರವಾಸಿಗರ ಪ್ರಮಾಣ ಶೇಕಡಾ 120 ರಷ್ಟು (2022 ರಲ್ಲಿ 2.27 ಮಿಲಿಯನ್ ನಿಂದ) ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ಹುನ್ ಮಾನೆಟ್ ಹೇಳಿದರು. ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ದೇಶಕ್ಕೆ ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ 2025 ರಲ್ಲಿ 7 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಇದು 2019 ರಲ್ಲಿ ಕೋವಿಡ್ ಪೂರ್ವ ಸಾಂಕ್ರಾಮಿಕ ಮಟ್ಟವಾದ 6.6 ಮಿಲಿಯನ್ ಅನ್ನು ಮೀರಿದೆ.

ಉಡುಪು, ಪಾದರಕ್ಷೆ ಮತ್ತು ಪ್ರಯಾಣ ಸರಕುಗಳ ರಫ್ತು, ಕೃಷಿ ಮತ್ತು ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಜೊತೆಗೆ ಕಾಂಬೋಡಿಯಾದ ಆರ್ಥಿಕತೆಗೆ ಬಲ ನೀಡುವ ನಾಲ್ಕು ಸ್ತಂಭಗಳಲ್ಲಿ ಪ್ರವಾಸೋದ್ಯಮವೂ ಒಂದಾಗಿದೆ.

ಕಾಂಬೋಡಿಯಾದಲ್ಲಿ ನಾಲ್ಕು ವಿಶ್ವ ಪರಂಪರೆಯ ತಾಣಗಳಿವೆ. ವಾಯುವ್ಯ ಸೀಮ್ ರೀಪ್ ಪ್ರಾಂತ್ಯದ ಆಂಗ್ಕೋರ್ ಪುರಾತತ್ವ ಉದ್ಯಾನ, ಮಧ್ಯ ಕಂಪಾಂಗ್ ಥೋಮ್ ಪ್ರಾಂತ್ಯದ ಸಂಬೋರ್ ಪ್ರಿ ಕುಕ್ ಪುರಾತತ್ವ ತಾಣ, ವಾಯವ್ಯ ಪ್ರೀಹ್ ವಿಹೇರ್ ಪ್ರಾಂತ್ಯದಲ್ಲಿರುವ ಪ್ರೀಹ್ ವಿಹೇರ್ ದೇವಾಲಯ ಮತ್ತು ಕೊಹ್ ಕೆರ್ ಪುರಾತತ್ವ ತಾಣಗಳು ಪ್ರವಾಸಿಗರ ಆಕರ್ಷಣೆಯ ಸ್ಥಳಗಳಾಗಿವೆ. ಇದಲ್ಲದೆ, ನಾಲ್ಕು ನೈಋತ್ಯ ಪ್ರಾಂತ್ಯಗಳಾದ ಸಿಹಾನೌಕ್ವಿಲ್ಲೆ, ಕಾಂಪಾಟ್, ಕೆಪ್ ಮತ್ತು ಕೊಹ್ ಕಾಂಗ್​ ಮೂಲಕ 450 ಕಿಮೀ ಉದ್ದದ ಕರಾವಳಿಯನ್ನು ಹೊಂದಿದೆ.

ಕಾಂಬೋಡಿಯಾ ಪ್ರವಾಸೋದ್ಯಮವು ಉಷ್ಣವಲಯದ ಕಡಲತೀರಗಳು, ಐತಿಹಾಸಿಕ ಸ್ಮಾರಕಗಳು, ಉತ್ಸಾಹಭರಿತ ರಾತ್ರಿಜೀವನ ಮತ್ತು ಸುಂದರವಾದ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ. ಮಧ್ಯಮ ಉಷ್ಣವಲಯದ ಹವಾಮಾನದಿಂದಾಗಿ, ಕಾಂಬೋಡಿಯಾ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಾಂಬೋಡಿಯಾದ ರಾಜಧಾನಿಯಾದ ನಾಮ್​ಪೆನ್​ ನಗರವು ದೇಶದ ಸಮಕಾಲೀನ ಸಂಸ್ಕೃತಿಯ ಉತ್ತಮ ಮಾದರಿಯಾಗಿದೆ.

ಇದನ್ನೂ ಓದಿ : ಬ್ಯಾಂಕ್​, ವಿಮಾ ಕಂಪನಿಗಳಿಗೆ ಟ್ರಂಪ್​ರಿಂದ ವಂಚನೆ; ನ್ಯಾಯಾಲಯದ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.