ETV Bharat / international

ವಿಶ್ವಾದ್ಯಂತ 1.5 ಕೋಟಿ ಮಂದಿ ಕೋವಿಡ್​​ಗೆ ಬಲಿ: ವಿಶ್ವ ಆರೋಗ್ಯ ಸಂಸ್ಥೆ - ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿಕೆ

24 ತಿಂಗಳ ಅವಧಿಯಲ್ಲಿ ಕೋವಿಡ್​​-19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವಾದ್ಯಂತ ಸುಮಾರು 1.49 ಕೋಟಿಗೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಗುರುವಾರ ಬಹಿರಂಗಪಡಿಸಿದೆ.

COVID 19 latest update
ಸಾಂದರ್ಭಿಕ ಚಿತ್ರ
author img

By

Published : May 6, 2022, 12:40 PM IST

ಜಿನೀವಾ: 2020 ಮತ್ತು 2021ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನೆಲ್ಲೆಡೆ ಸುಮಾರು 1.49 ಕೋಟಿಗೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಬಹಿರಂಗಪಡಿಸಿದೆ. ಕೇವಲ 10 ದೇಶಗಳಲ್ಲಿ ಶೇ.68ರಷ್ಟು ಸಾವು ದಾಖಲಾಗಿದ್ದರೆ, ಆಗ್ನೇಯ ಏಷ್ಯಾ, ಯುರೋಪ್ ಮತ್ತು ಅಮೆರಿಕಗಳಲ್ಲಿ ಹೆಚ್ಚಿನ ಸಾವು (ಶೇ. 84) ದಾಖಲಾಗಿದೆ.

24 ತಿಂಗಳ ಅವಧಿಯಲ್ಲಿ ಒಟ್ಟು ಸಾವುಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಶೇ.81ರಷ್ಟು, ಹಿಂದುಳಿದ ದೇಶಗಳು ಶೇ.53 ಮತ್ತು ಮುಂದುವರೆದ ದೇಶಗಳಲ್ಲಿ ಶೇ.28 ರಷ್ಟು ಸಾವು ವರದಿಯಾಗಿದೆ. ಈ ವರದಿ ಸೋಂಕಿನ ಪರಿಣಾಮವನ್ನು ಮಾತ್ರ ಸೂಚಿಸುತ್ತದೆ. ಆದರೆ ಎಲ್ಲಾ ದೇಶಗಳು ಹೆಚ್ಚು ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವ ಅಗತ್ಯವನ್ನು ಸೂಚಿಸುತ್ತದೆ ಎಂದು ಡಬ್ಲೂಹೆಚ್‌ಒ ಡೈರೆಕ್ಟರ್ ಜನರಲ್ ಡಾ.ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದರು.

ಜಾಗತಿಕ ಸಾವಿನ ಸಂಖ್ಯೆ ಮಹಿಳೆಯರು (ಶೇ. 43), ಪುರುಷರಿಗಿಂತ (ಶೇ 57) ವಯಸ್ಕರಲ್ಲಿ ಹೆಚ್ಚು ಎಂದು ಅಂದಾಜಿಸಲಾಗಿದೆ. ಮಾರ್ಚ್‌ನಲ್ಲಿ, ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವಿಶ್ಲೇಷಣೆಯು ಜಾಗತಿಕ ಕೋವಿಡ್​​ ಸಾವಿನ ಸಂಖ್ಯೆ ಅಧಿಕೃತ ಸಾಂಕ್ರಾಮಿಕ ಸಾವಿನ ದಾಖಲೆಗಳು ಸೂಚಿಸುವುದಕ್ಕಿಂತ ಮೂರು ಪಟ್ಟು ಹೆಚ್ಚಿರಬಹುದು ಎಂದು ತಿಳಿಸಿದೆ.

ಅಧಿಕೃತ ಕೋವಿಡ್​​ ಸಾವಿನ ದಾಖಲೆಗಳ ಪ್ರಕಾರ, ಜನವರಿ 1, 2020 ಮತ್ತು ಡಿಸೆಂಬರ್ 31, 2021 ರ ನಡುವೆ 0.59 ಕೋಟಿ ಜನರು ಸಾವನ್ನಪ್ಪಿದ್ದಾರೆ. ಆದರೆ ಹೊಸ ಅಧ್ಯಯನವು ಅದೇ ಅವಧಿಯಲ್ಲಿ 1.82 ಕೋಟಿ ಹೆಚ್ಚುವರಿ ಸಾವುಗಳು ಸಂಭವಿಸಿದೆ ಎಂದು ಅಂದಾಜಿಸಿದೆ ಮತ್ತು ಭಾರತ ಶೇ.22 ರಷ್ಟು ಪಾಲನ್ನು ಹೊಂದಿದೆ.

ಸಾಂಕ್ರಾಮಿಕದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಮರಣದ ಮಾಪನವು ಅತ್ಯಗತ್ಯ ಅಂಶವಾಗಿದೆ. ಅನೇಕ ದೇಶಗಳಲ್ಲಿ ಡೇಟಾ ವ್ಯವಸ್ಥೆಗಳಲ್ಲಿ ಸೀಮಿತ ಹೂಡಿಕೆಯಿಂದಾಗಿ, ಮರಣದ ನಿಜವಾದ ಪ್ರಮಾಣ ಮರೆಮಾಚಲ್ಪಡುತ್ತದೆ ಎಂದು ಡಬ್ಲೂಹೆಚ್‌ಒ ಡೇಟಾ, ಅನಾಲಿಟಿಕ್ಸ್ ಮತ್ತು ವಿತರಣೆಯ ಸಹಾಯಕ ಮಹಾನಿರ್ದೇಶಕ ಡಾ.ಸಮೀರಾ ಅಸ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 'ಭಾರತದಲ್ಲಿ 47 ಲಕ್ಷ ಕೋವಿಡ್ ಸಾವು': WHO ವರದಿ ತಿರಸ್ಕರಿಸಿದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.