ETV Bharat / international

ಸ್ಪೇನ್, ಪೋರ್ಚುಗಲ್‌ನಲ್ಲಿ ಭಾರಿ ಕಾಡ್ಗಿಚ್ಚು: ಈ ವರ್ಷ ಲಕ್ಷಾಂತರ ಹೆಕ್ಟೇರ್‌ ಅರಣ್ಯ ಸಂಪತ್ತು ನಾಶ - ಸ್ಪ್ಯಾನಿಷ್ ಕಾಡ್ಗಿಚ್ಚು

ಸ್ಪೇನ್​ನ ವೇಲೆನ್ಸಿಯಾ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಸಂಭವಿಸಿದ್ದು ಅಪಾರ ಪ್ರಮಾಣದ ಅರಣ್ಯ ಸಂಪತ್ತು ಸುಟ್ಟುಹೋಗಿದೆ. ಬಲವಾದ ಗಾಳಿ ಮತ್ತು ಶುಷ್ಕ ಹವಾಮಾನವೇ ಇದಕ್ಕ ಕಾರಣವಾಗುತ್ತಿದೆ.

ಕಾಡ್ಗಿಚ್ಚು
wildfire
author img

By

Published : Aug 22, 2022, 9:49 AM IST

Updated : Aug 22, 2022, 10:05 AM IST

ಮ್ಯಾಡ್ರಿಡ್(ಸ್ಪೇನ್): ವೇಲೆನ್ಸಿಯಾ ಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಉಂಟಾಗಿದ್ದು, ದೊಡ್ಡ ಪ್ರಮಾಣದ ಅರಣ್ಯ ಸಂಪತ್ತು ಸುಟ್ಟು ಹೋಗಿದೆ ಭಸ್ಮವಾಗಿದೆ. ಕಳೆದ ಬುಧವಾರ ಪೂರ್ವ ವೇಲೆನ್ಸಿಯಾ ಪ್ರದೇಶಕ್ಕೆ ವ್ಯಾಪಿಸಿದ್ದ ಕಾಡ್ಗಿಚ್ಚು ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಇದೀಗ ಉತ್ತರ ವೇಲೆನ್ಸಿಯಾದ ಬೆಜಿಸ್ ಪುರಸಭೆ ಮಾರ್ಗವಾಗಿ ವ್ಯಾಪಿಸುತ್ತಿದೆ. ಸ್ಪ್ಯಾನಿಷ್ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಬೆಜಿಸ್ ಪುರಸಭೆ ವ್ಯಾಪ್ತಿಯಲ್ಲಿ ಬೆಂಕಿಯ ಜ್ವಾಲೆಯಿಂದ ಮೂವರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಈಗಾಗಲೇ ಈ ಪ್ರದೇಶದ ಹಲವಾರು ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಬಲವಾದ ಗಾಳಿ ಮತ್ತು ಶುಷ್ಕ ಹವಾಮಾನದಿಂದಾಗಿ ಬೆಂಕಿ ಬಹುಬೇಗ ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ ಎಂದು ಸ್ಥಳೀಯ ತುರ್ತು ಸೇವೆಗಳು ಟ್ವಿಟರ್‌ನಲ್ಲಿ ತಿಳಿಸಿವೆ.

  • Spain: Wildfires continue to burn during Spain’s fire season. This incident was in Bejis, where winds fueled a fast moving fire. These guys really got close in there… a lot of these European fires have been arson. 🎥: Telegram#wildfire #fire #spain #europe #eu pic.twitter.com/qjcDdf6xwa

    — TheHotshotWakeUp: Podcast (@HotshotWake) August 18, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಕಾಡ್ಗಿಚ್ಚಿಗೆ ಧಗಧಗಿಸುತ್ತಿದೆ ಪೋರ್ಚುಗಲ್​​ ಅರಣ್ಯ; ವಿಮಾನ ಅಪಘಾತದಲ್ಲಿ ಪೈಲಟ್​ ಸಾವು

ನೆರೆಯ ಪೋರ್ಚುಗಲ್​​ನಲ್ಲಿ ಸಹ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, 1,200 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಒಂಬತ್ತು ವಾಟರ್‌ಬಾಂಬಿಂಗ್ ವಿಮಾನಗಳು ನೀರು ಸುರಿಯುವ ಮೂಲಕ ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸುತ್ತಿವೆ. ಆಗಸ್ಟ್ 6 ರಿಂದ ಈವರೆಗೆ 17,000 ಹೆಕ್ಟೇರ್‌ಗಳಿಗಿಂತ ಹೆಚ್ಚು ಪ್ರದೇಶ ಸುಟ್ಟುಹೋಗಿವೆ. ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಈ ವರ್ಷದಲ್ಲಿ ಇಲ್ಲಿಯವರೆಗೆ ಸ್ಪೇನ್‌ನಲ್ಲಿ 2,75,000 ಹೆಕ್ಟೇರ್‌ಗಳಿಗಿಂತ ಹೆಚ್ಚು ಮತ್ತು ಪೋರ್ಚುಗಲ್‌ನಲ್ಲಿ 87,000 ಹೆಕ್ಟೇರ್‌ಗಿಂತಲೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟುಹೋಗಿವೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹೆಚ್ಚಿದ ಉಷ್ಣಾಂಶ.. ನ್ಯೂಸೌತ್ ವೇಲ್ಸ್​ನಲ್ಲಿ ಕಾಡ್ಗಿಚ್ಚು

Last Updated : Aug 22, 2022, 10:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.