ETV Bharat / international

Explained: ಕೆಂಪು ಸಮುದ್ರ ಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಹೌತಿ ದಾಳಿ; ಪರಿಣಾಮಗಳೇನು?

author img

By ETV Bharat Karnataka Team

Published : Dec 30, 2023, 11:31 AM IST

Updated : Dec 30, 2023, 11:53 AM IST

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಇದೀಗ ವಾಣಿಜ್ಯ ವಹಿವಾಟಿನ ಮೇಲೆ ಆತಂಕ ಮೂಡಿಸಿದೆ. ಈ ಬಗ್ಗೆ ಡಾ. ರಾವೆಲ್ಲ ಭಾನು ಕೃಷ್ಣ ಕಿರಣ್ ಅವರು ವಿಶ್ಲೇಷಿಸಿದ್ದಾರೆ.

What are the consequences of Houthis attack on merchant navy vessels in Red Sea

ಹಮಾಸ್​​- ಇಸ್ರೇಲ್​ ನಡುವಿನ ಸಂಘರ್ಷ ಒಂದು ಕಡೆಯಾದರೆ, ಮತ್ತೊಂದು ಕಡೆ ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ಮುಂದುವರೆದಿದೆ. ಇದರ ನಡುವೆ ಮತ್ತೊಂದು ಯುದ್ಧಕ್ಕೆ ಜಗತ್ತು ಸಾಕ್ಷಿಯಾಗಿದೆ. ಅದುವೇ ಕೆಂಪು ಸಮುದ್ರದ ಮೇಲೆ ಯೆಮೆನ್​ನ ಹೌತಿ ಉಗ್ರರ ದಾಳಿ. ಈ ದಾಳಿಯಿಂದಾಗಿ ಮತ್ತೊಂದು ದೀರ್ಘ ಸಮಸ್ಯೆಯನ್ನು ಜಗತ್ತು ಎದುರಿಸುವಂತಾಗಿದೆ.

ಕೆಂಪು ಸಮುದ್ರದ ಮಾರ್ಗ: ಯುರೋಪ್​ ಮತ್ತು ಏಷ್ಯಾದ ನಡುವೆ ವಾಣಿಜ್ಯ ಸರಕು ಸಾಗಣೆಯ ಪ್ರಮುಖ ಸಮುದ್ರ ಮಾರ್ಗ ಈ ಕೆಂಪು ಸಮುದ್ರವಾಗಿದೆ. ಈ ಮಾರ್ಗದ ಬಾಬ್​ ಎಲ್ ಮಂಡೇಬ್​​ ಸಮೀಪದಲ್ಲೇ ಯಮೆನ್​ ದೇಶವಿದ್ದು, ಇದು ಅಡೆನ್​ ಕೊಲ್ಲಿಯ ಮೂಲಕ ಕೆಂಪು ಸಮುದ್ರವನ್ನು ಸಂಪರ್ಕಿಸುತ್ತದೆ. ಪಶ್ಚಿಮ ದೇಶಗಳಿಂದ ಪೂರ್ವಕ್ಕೆ ಬಂದ ಹಡಗುಗಳು ಸೂಯೆಜ್​ ಕಾಲುವೆ ಮೂಲದ ಕೆಂಪು ಸಮುದ್ರ ಮಾರ್ಗವಾಗಿ ಚಲಿಸುತ್ತದೆ. ಯುರೋಪ್​ ಮತ್ತು ಏಷ್ಯಾವನ್ನು ಸಂಪರ್ಕಿಸುವ ಸುಲಭ ಅಂತಾರಾಷ್ಟ್ರೀಯ ಸಣ್ಣ ಜಲಮಾರ್ಗ ಇದಾಗಿದೆ.

ಹೌತಿ ಉಗ್ರರ ದಾಳಿ ಏಕೆ: ಕೆಂಪು ಸಮುದ್ರದ ಮೇಲೆ ಹೌತಿ ಉಗ್ರರು ನಡೆಸುತ್ತಿರುವ ದಾಳಿಯು ಇಸ್ರೇಲ್​- ಹಮಾಸ್​ ಘರ್ಷಣೆಯೊಂದಿಗೆ ನಂಟು ಹೊಂದಿದೆ. ಹಮಾಸ್​ ಉಗ್ರರಿಗೆ ನೆರವು ನೀಡುತ್ತಿರುವ ಇರಾನ್​ ಭಾಗವಾಗಿದ್ದಾರೆ ಈ ಹೌತಿಗಳು. ಯೆಮೆನ್​ ದೇಶದ ಅಸ್ತಿತ್ವದ ಕುರಿತು ಇರಾನ್​ ಸೇರಿದಂತೆ ಪ್ರಮುಖ ಎಲ್ಲಾ ಗುಂಪುಗಳು ವಾದ ಮಂಡಿಸುತ್ತವೆ. ಇರಾನ್​ ಸಾಂಕೇತಿಕವಾಗಿ ಪ್ಯಾಲೆಸ್ತೀನಿಯರನ್ನು ಬೆಂಬಲಿಸಿದರೂ, ಇದೀಗ ಅವರು ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ಈ ಮೂಲಕ ಗಾಜಾದಲ್ಲಿ ಇಸ್ರೇಲ್​ ಮಿಲಿಟರಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ತಂತ್ರ ರೂಪಿಸಿದೆ. ಇದಕ್ಕಾಗಿ ಭೌಗೋಳಿಕ ರಾಜಕೀಯ ಪ್ರಭಾವ ಹೆಚ್ಚಿಸಲು ಕೆಂಪು ಸಮುದ್ರದಲ್ಲಿ ಹೌತಿಗಳು ದಾಳಿಗೆ ಮುಂದಾಗಿದ್ದಾರೆ.

ಇಲ್ಲಿಯವರೆಗಿನ ಘರ್ಷಣೆ: ಅಮೆರಿಕದ ರಕ್ಷಣಾ ಇಲಾಖೆ ಪ್ರಕಾರ, ಹೌತಿ ಉಗ್ರರು 35ಕ್ಕೂ ವಿವಿಧ ದೇಶಗಳ 100ಕ್ಕೆ ಹೆಚ್ಚು ವ್ಯಾಪಾರಿ ಹಡಗುಗಳ ಮೇಲೆ ವೈಮಾನಿಕ ಮತ್ತು ಬ್ಯಾಲಿಸ್ಟಿಕ್​ ಕ್ಷಿಪಣಿ ದಾಳಿ ನಡೆಸಿದ್ದಾರೆ. ಕಳೆದ ನಾಲ್ಕು ವಾರದಲ್ಲಿ 13 ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಯೆಮೆನ್​ನಲ್ಲೂ 25 ಎಂವಿ ಗ್ಯಾಲಕ್ಸಿ ನಾಯಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಈ ಬಂಡುಕೋರರು ಇಸ್ರೇಲ್​ಗೆ ಹೋಗುವ ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಆದರೆ, ಡಿಸೆಂಬರ್​ 11ರಂದು ನಾರ್ವೇಜಿಯಮನ್​ ಸ್ಟ್ರಿಂಡಾ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಇದಾದ ಬಳಿಕ ಡಿಸೆಂಬರ್​ 15ರಂದು ಹೌತಿ ದಾಳಿಯು ಜಾಗತಿಕವಾಗಿ ಕಳವಳ ಮೂಡಿಸಿದೆ.

ಸಮುದ್ರ ವ್ಯಾಪಾರದ ಪ್ರಮುಖ ಮಾರ್ಗ: ಕೆಂಪು ಸಮುದ್ರದ ಮೇಲೆ ಇದೀಗ ಹೌತಿ ಉಗ್ರರು ನಡೆಸುತ್ತಿರುವ ದಾಳಿ ಅಂತಾರಾಷ್ಟ್ರೀಯ ಸಮುದ್ರ ವ್ಯಾಪಾರಕ್ಕೆ ಆತಂಕ ಮೂಡಿಸಿದೆ. ಕೆಂಪು ಸಮುದ್ರದ ಮೂಲಕ ನೌಕೆಗಳು ಸೂಯೆಜ್​ ಕಾಲುವೆ ಸೇರಬೇಕು. ಪೂರ್ವ ಮತ್ತು ಪಶ್ಚಿಮದ ನಡುವಿನ ಪ್ರಮುಖ ವ್ಯಾಪಾರಕ್ಕೆ ಸೂಯೆಜ್​ ಕಾಲುವೆ ನೇರ ಮಾರ್ಗವಾಗಿದೆ. ಇದು ಕಡಿಮೆ ವೆಚ್ಚದಾಯಕ ಮಾರ್ಗವೂ ಆಗಿದೆ. ಈ ದಕ್ಷಿಣ ಕೆಂಪು ಸಮುದ್ರದ ಮಾರ್ಗದಲ್ಲಿ 400 ವಾಣಿಜ್ಯ ಹಡಗುಗಳು ಸಂಚಾರ ಮಾಡುತ್ತದೆ. ಇದಕ್ಕೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಜಾಗತಿಕ ವ್ಯಾಪಾರದ ಶೇ. 12ರಷ್ಟು ತೈಲದ ಶೇ. 10ರಷ್ಟು ಕಂಟೈನರ್​​ಗಳ ಚಲನವಲನ ಇಲ್ಲಿ ನಡೆಯುತ್ತದೆ.

ಕೆಂಪು ಸಮುದ್ರದಲ್ಲಿ ಸಂಚರಿಸುತ್ತಿರುವ ಅನೇಕ ನೌಕೆಗಳ ಮೇಲೆ ಹೌತಿ ಉಗ್ರರು ನಿರಂತರ ದಾಳಿಗೆ ಮುಂದಾಗಿದ್ದಾರೆ. ಇದರಿಂದ ಪ್ರಮುಖ ಹಡಗು ಕಂಪನಿಗಳಾದ ಎಂಎಸ್​​ಸಿ, ಸಿಎಂಎ, ಸಿಜಿಎಂ, ಹಪಗ್​ ಲೊಯ್ಡ್​​ ಮತ್ತು ಎಪಿ ಮೊಲರ್​ ಮರ್ಸ್ಕ್​​ ಕಳೆದೊಂದು ವಾರದಿಂದ ಬಾಬ್​ ಎಲ್​ ಮಾಂಡೆಬ್​ ಜಲಸಂಧಿ ಮಾರ್ಗ ಸಂಚಾರವನ್ನು ನಿಲ್ಲಿಸಿದೆ. ಇದೀಗ ಅವರು ಬದಲಿ ಮಾರ್ಗವಾಗಿ ಕೇಪ್​ ಆಫ್​ ಗುಡ್​ ಹೋಪ್​ ಮೂಲಕ ಸಂಚಾರಕ್ಕೆ ಮುಂದಾಗಿದ್ದು, ಈ ಮೂಲಕ ಸುರಕ್ಷತೆ ಕಾಯ್ದುಕೊಳ್ಳಲು ನಿರ್ಧರಿಸಿದೆ. ಇದರಿಂದ ಹಡಗಿನ ಸಂಚಾರದಲ್ಲಿ 19ರಿಂದ 30 ದಿನಗಳು ವಿಳಂಬ ಆಗುತ್ತದೆ. ಇದರ ಜೊತೆಗೆ ವಿಮಾ ಕಂಪನಿಗಳು ಈ ಸಾಗಣೆ ಮಾರ್ಗವನ್ನು ಸರಿದೂಗಿಸಿಲ್ಲ ಹಾಗೂ ಯುದ್ಧ ಅಪಾಯದ ಹಿನ್ನೆಲೆ 5,200 ಡಾಲರ್​​ ಹೆಚ್ಚುವರಿ ಶುಲ್ಕ ವಿಧಿಸುತ್ತಿವೆ.

ಭಾರತ ಮತ್ತು ಕೆಂಪು ಸಮುದ್ರದ ಬಿಕ್ಕಟ್ಟು: ಕೆಂಪು ಸಮುದ್ರದಲ್ಲಿ ಉಂಟಾಗಿರುವ ಈ ಬಿಕ್ಕಟ್ಟಿನಿಂದ ಕೇಪ್​ ಆಫ್​ ಗುಡ್​ ಹೋಪ್​ ಮಾರ್ಗ ಬಳಕೆಯು ಇದೀಗ ಭಾರತದಲ್ಲಿ ಇಂಧನ ಬೆಲೆ ಏರಿಕೆಯ ಭೀತಿ ಮೂಡಿಸಿದೆ. ಭಾರತವೂ ಕಚ್ಚಾ ತೈಲ, ಆಹಾರ ಉತ್ಪನ್ನಗಳು, ಉಡುಪುಗಳು ಮತ್ತು ಎಲೆಕ್ಟ್ರಾನಿಕ್ಸ್ ರಫ್ತಿಗಾಗಿ ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ಗೆ ಬಾಬ್-ಎಲ್-ಮಂಡೇಬ್ ಜಲಸಂಧಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ಸುಮಾರು 200 ಬಿಲಿಯನ್​ ಡಾಲರ್​ ವಹಿವಾಟನ್ನು ಸಮುದ್ರದ ವ್ಯಾಪಾರಕ್ಕೆ ವಿನಿಯೋಗಿಸುತ್ತಿದೆ.

ಇದೀಗ ಈ ಜನಸಂಧಿಯಲ್ಲಿನ ಸಂಚಾರ ಬಿಕ್ಕಟ್ಟು ಭಾರತದ ಆರ್ಥಿಕತೆ ಮತ್ತು ಭದ್ರತೆ ಮೇಲೆ ಪರಿಣಾಮ ಬೀರಲಿದೆ. ಈ ಬಿಕ್ಕಟ್ಟು ಹೀಗೆಯೇ ಮುಂದುವರೆದರೆ, ರಷ್ಯಾದಿಂದ ಭಾರತಕ್ಕೆ ಕಚ್ಚಾ ಸಾಗಾಣಿಕೆಗೆ ಅಡ್ಡಿಯಾಗಬಹುದು. ಸೂಯೆಜ್​ ಜಾಲುವೆ ಮಾರ್ಗದ ಅಡ್ಡಿಯಿಂದ ಸರಕು ಸಾಗಣೆ ದರ ಮತ್ತಷ್ಟು ಹೆಚ್ಚಲಿದೆ. ಭಾರತೀಯ ಸರಕು ರಫ್ತುದಾರರ ಪ್ರಕಾರ, ಕೆಂಪು ಸಮುದ್ರದ ವ್ಯಾಪಾರ ಮಾರ್ಗದಲ್ಲಿ ನಡೆಯುತ್ತಿರುವ ಆತಂಕ ಮುಂದುವರೆದರೆ ಯುರೋಪ್ ಮತ್ತು ಆಫ್ರಿಕಾಕ್ಕೆ ಸಾಗುವ ಭಾರತೀಯ ಸಾಗಣೆಯ ಸರಕುಗಳ ದರಗಳು ಶೇಕಡಾ 25- 30ರಷ್ಟು ಹೆಚ್ಚಾಗಬಹುದು. ಇರಾನ್ ಮತ್ತು ರಷ್ಯಾದೊಂದಿಗೆ ಭಾರತದ ಸೌಹಾರ್ದ ಸಂಬಂಧವನ್ನು ಪರಿಗಣಿಸಿ, ಹೌತಿ ಬಂಡುಕೋರರು ಭಾರತದ ಹಿತಾಸಕ್ತಿಗಳನ್ನು ಉಳಿಸುವ ಸಾಧ್ಯತೆಯೂ ಇದೆ.

ಆಪರೇಷನ್​ ಪ್ರಾಸ್ಪರಿಟಿ ಗಾರ್ಡಿಯನ್​: ಬಾಬ್ ಎಲ್-ಮಾಂಡೆಬ್ ಮತ್ತು ಅಡೆನ್ ಕೊಲ್ಲಿಯಲ್ಲಿ ರಕ್ಷಣೆ ಕಾಪಾಡುವ ಉದ್ದೇಶದಿಂದ ಏಪ್ರಿಲ್​ 2022ರಿಂದ ನೌಕಾಪಡೆಯು ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ಉಗ್ರರ ದಾಳಿ ಆರಂಭದ ಬಳಿಕ ಕೆಂಪು ಸಮುದ್ರದಲ್ಲಿ ಗಸ್ತು ತಿರುಗುತ್ತಿರುವ ಯುಎಸ್ ಮತ್ತು ಫ್ರೆಂಚ್ ಯುದ್ಧನೌಕೆಗಳು ಹೌತಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿವೆ. ಇಟಲಿ, ನೆದರ್ಲ್ಯಾಂಡ್ಸ್, ನಾರ್ವೆ, ಸೆಶೆಲ್ಸ್ ಸ್ಪೇನ್ ಅಮೆರಿಕ ಸಾರಥ್ಯದ ಬಗ್ಗೆ ಬಹುರಾಷ್ಟ್ರೀಯ ಆಪರೇಷನ್​ ಪ್ರಾಸ್ಪರಿಟಿ ಗಾರ್ಡಿಯನ್​ ಕಾರ್ಯಾಪಡೆ ಘೋಷಿಸಿದೆ. ಪ್ರಸ್ತುತ ಈ ಕಾರ್ಯಾಚರಣೆ ಕೆಲವು ದೇಶಗಳು ಮಾತ್ರ ಭಾಗಿಯಾಗಿವೆ. ಈಜಿಪ್ಟ್​​ ಈ ಸೂಯೆಜ್​ ಕಾಲುವೆಯಲ್ಲಿನ ಸಾರಿಗೆ ಶುಲ್ಕದಿಂದ 30 ಮಿಲಿಯನ್​ ಡಾಲರ್​ ನಷ್ಟ ಅನುಭವಿಸುತ್ತಿದ್ದು, ಈ ಮೈತ್ರಿಗೆ ಗೈರಾಗಿದೆ.

ಮುಂದಿನ ನಡೆ ಏನು: ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ದಾಳಿ ಇದೀಗ ವಾಣಿಜ್ಯ ವಹಿವಾಟಿನ ಮೇಲಿನ ಅಪಾಯ ಹೆಚ್ಚಿಸಿದೆ. ಅಲ್ಲದೇ ನಾವಿಕರಿಗೆ ಅಪಾಯದ ಭೀತಿ ಮೂಡಿಸಿದೆ. ಈ ಮೂಲಕ ನೌಕಾ ಸಾರಿಗೆ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಜಲಮಾರ್ಗದ ರಕ್ಷಣೆಗೆ ಒಗ್ಗೂಡಬೇಕಿದೆ. ಮಿಲಿಟರಿ ಮಧ್ಯಸ್ಥಿಕೆಗಳು ಅಥವಾ ಗಾಜಾ ಸಮಸ್ಯೆ ಪರಿಹರಿಸುವುದು ಆಯ್ಕೆಯಾಗಿದೆ. ಇಲ್ಲದಿದ್ದರೆ ಇದು ಪ್ರಾದೇಶಿಕ ಘರ್ಷಣೆಗಳನ್ನು ಮೀರಿ ವಿಸ್ತರಿಸುವ ಸಾಧ್ಯತೆ ಇದೆ.

- ಡಾ. ರಾವೆಲ್ಲ ಭಾನು ಕೃಷ್ಣ ಕಿರಣ್

(ಈ ಲೇಖನವೂ ಸಂಪೂರ್ಣವಾಗಿ ಲೇಖಕರ ಅಭಿಪ್ರಾಯವಾಗಿದ್ದು, ಇದರಲ್ಲಿನ ನೈಜತೆ ಮತ್ತು ಅಭಿಪ್ರಾಯದ ಬಗ್ಗೆ ಈಟಿವಿ ಭಾರತಕ್ಕೆ ಸಂಬಂಧ ಇಲ್ಲ)

ಇದನ್ನೂ ಓದಿ: ಭಾಗಶಃ ಕದನವಿರಾಮ ಪ್ರಸ್ತಾಪಿಸಿದ ಇಸ್ರೇಲ್; ಒತ್ತೆಯಾಳು ಬಿಡಲ್ಲ ಎಂದ ಹಮಾಸ್

Last Updated : Dec 30, 2023, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.