ETV Bharat / international

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ತೀವ್ರ: ಗೋಧಿ ಹಿಟ್ಟಿಗಾಗಿ ಪ್ರಾಣವನ್ನೇ ಪಣಕ್ಕಿಡುವ ಜನ! - ಗೋಧಿ ಹಿಟ್ಟು ತುಂಬಿದ ಟ್ರಕ್‌

ದಿನ ಕಳೆದಂತೆ ನೆರೆಯ ದೇಶ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸುತ್ತಿದೆ. ಇಲ್ಲಿನ ಜನರು ತಮ್ಮ ಹಸಿವು ನೀಗಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಿಕ್ಕಿವೆ.

people chasing food truck  people chasing food truck in Pakistan  Pakistan finance crisis  ನೆರೆ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟು  ಗೋದಿ ಹಿಟ್ಟು ಖರೀದಿ  ಪ್ರಾಣವನ್ನೇ ಪಣಕ್ಕೀಡುವ ಪಾಕ್​ ಜನ  ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು  ಹಸಿವನ್ನು ನೀಗಿಸಿಕೊಳ್ಳಲು ಹರಸಾಸಹ  ಗೋಧಿ ಹಿಟ್ಟು ತುಂಬಿದ ಟ್ರಕ್‌  ಗೋಧಿ ಹಿಟ್ಟು ತುಂಬಿದ ಟ್ರಕ್‌
ಗೋದಿ ಹಿಟ್ಟು ಖರೀದಿಗಾಗಿ ಪ್ರಾಣವನ್ನೇ ಪಣಕ್ಕೀಡುವ ಪಾಕ್​ ಜನ!
author img

By

Published : Jan 16, 2023, 11:05 AM IST

ಇಸ್ಲಾಮಾಬಾದ್ (ಪಾಕಿಸ್ತಾನ): ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಜನರು ಹಸಿವಿನಿಂದ ಒದ್ದಾಡುವ ದುಸ್ಥಿತಿ ಎದುರಾಗಿದೆ. ಇದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಗೋಧಿ ಹಿಟ್ಟು ಸರಬರಾಜು ಮಾಡುವ ಟ್ರಕ್ ಅನ್ನು ನೂರಾರು ಜನರು ಬೈಕ್‌ಗಳಲ್ಲಿ ಹಿಂಬಾಲಿಸುವ ವಿಡಿಯೋ ದೊರೆತಿದ್ದು, ಆತಂಕ ಸೃಷ್ಟಿಸುವಂತಿದೆ.

ಗೋಧಿ ಹಿಟ್ಟು ತುಂಬಿದ ಟ್ರಕ್‌ನಿಂದ ಹಿಟ್ಟಿನ ಚೀಲವನ್ನು ಖರೀದಿಸಲು ಇಬ್ಬರು ಪುರುಷರು ವಾಹನದ ಹಿಂಭಾಗದಲ್ಲಿ ಅಪಾಯಕಾರಿಯಾಗಿ ವಾಹನ ಸವಾರಿ ಮಾಡುತ್ತಿದ್ದಾರೆ. ವಾಹನದ​ ಹಿಂಬದಿ ನೂರಾರು ಜನರು ಬೈಕ್‌ಗಳೊಂದಿಗೆ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಈ ವಿಡಿಯೋವನ್ನು ಪ್ರೊಫೆಸರ್ ಸಜ್ಜದ್ ರಜಾ ಎಂಬವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇದು ಬೈಕ್ ಜಾಥಾವಲ್ಲ. ಗೋಧಿ ಹಿಟ್ಟಿನ ಚೀಲಕ್ಕಾಗಿ ಪಾಕಿಸ್ತಾನದ ಜನರು ಪಡುತ್ತಿರುವ ಕಷ್ಟ. ಇನ್ನಾದರೂ ಜಮ್ಮು ಕಾಶ್ಮೀರದ ಜನತೆ ಕಣ್ಣು ತೆರೆಯಬೇಕು. ನಾನು ಪಾಕಿಸ್ತಾನಿಯಾಗದೇ ಇರುವುದಕ್ಕೆ ಖುಷಿಯಾಗಿದೆ.' ಎಂದು ತಿಳಿಸಿದ್ದಾರೆ.

ಗೋಧಿ ಹಿಟ್ಟಿಗಾಗಿ ಕಾಲ್ತುಳಿತ: ಕೆಲವು ದಿನಗಳ ಹಿಂದೆ ಪಾಕ್‌ನ ಖೈಬರ್ ಪಖ್ತುಂಖ್ವಾ, ಸಿಂಧ್ ಮತ್ತು ಬಲೂಚಿಸ್ತಾನದಂತಹ ಪ್ರದೇಶಗಳಲ್ಲಿ ಜನರು ಸಬ್ಸಿಡಿ ದರದಲ್ಲಿ ಸಿಗುವ ಗೋಧಿ ಹಿಟ್ಟಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಬಳಿಕ ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ಹಿಟ್ಟು ವಿತರಿಸಬೇಕಾಯಿತು.

ವಿದೇಶಗಳಿಂದ ನೆರವು ನಿರಾಕರಣೆ: ಏರುತ್ತಿರುವ ಆಹಾರ ಬೆಲೆಗಳಿಂದಾಗಿ ಪಾಕಿಸ್ತಾನದ ಹಣದುಬ್ಬರವು ಕಳೆದ ತಿಂಗಳು ಶೇ 24.5 ರಷ್ಟು ಹೆಚ್ಚಾಗಿದೆ. ಹಣದುಬ್ಬರ ಮತ್ತು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಸಂಗ್ರಹದಿಂದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನಂತಹ ಸಂಸ್ಥೆಗಳು ಹಣಕಾಸಿನ ನೆರವು ನೀಡಲು ನಿರಾಕರಿಸಿವೆ. ಇದರಿಂದಾಗಿ ಪಾಕಿಸ್ತಾನದ ಆರ್ಥಿಕತೆಯು ತೀವ್ರ ಸಂಕಷ್ಟದಲ್ಲಿದೆ. ಪಾಕಿಸ್ತಾನದಲ್ಲಿ ಹೆಚ್ಚಿನ ಜನರು ಗೋಧಿ ಹಿಟ್ಟು ಬಳಸುತ್ತಾರೆ. ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಪ್ರಕಾರ, ಗೋಧಿ ಹಿಟ್ಟಿನ ಬೆಲೆ ಕೆಲವೇ ದಿನಗಳಲ್ಲಿ 41 ಪ್ರತಿಶತದಿಂದ 57 ಪ್ರತಿಶತಕ್ಕೆ ಏರಿದೆಯಂತೆ.

ಶ್ರೀಲಂಕಾದ ಪರಿಸ್ಥಿತಿಯತ್ತ ಪಾಕ್‌: ಭಾರತದ ನೆರೆರಾಷ್ಟ್ರ ಪಾಕಿಸ್ತಾನವು ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಾಕಿಸ್ತಾನದ ಪರಿಸ್ಥಿತಿ ಶ್ರೀಲಂಕಾದಂತೆ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಬಹುತೇಕ ದಿವಾಳಿಯ ಅಂಚಿನಲ್ಲಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಭಯೋತ್ಪಾದನೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲಿ ರಾಜಕೀಯ ಕ್ರಾಂತಿ ಶುರುವಾಗಿದೆ.

ಇಮ್ರಾನ್ ಖಾನ್ ಮತ್ತು ಶೆಹಬಾಜ್ ಷರೀಫ್ ಅವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ರಾಜಕೀಯ ಕ್ರಾಂತಿಗೆ ಸನ್ನಿಹಿತವಾಗಿದೆ. ಇತ್ತೀಚಿನ ಪ್ರವಾಹಪೀಡಿತ ಪ್ರದೇಶಗಳನ್ನು ಸುಮಾರು ಎರಡು ದಶಕಗಳ ಹಿಂದಕ್ಕೆ ತಳ್ಳಿದೆ. ಇಂಥ ಸವಾಲುಗಳನ್ನು ಎದುರಿಸಲು ಸದ್ಯ ಪಾಕಿಸ್ತಾನದಲ್ಲಿ ಭರವಸೆಯ ಆಶಾಕಿರಣ ಇರುವುದು ವಿದೇಶಗಳ ನೆರವು ಮಾತ್ರ.!

ಕುಸಿದ ವಿದೇಶಿ ವಿನಿಮಯ ಸಂಗ್ರಹ: ಜನವರಿ 2022ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ವಿದೇಶಿ ವಿನಿಮಯ ಸಂಗ್ರಹವು $16.6 ಬಿಲಿಯನ್ ಇತ್ತು. ಈಗ ಅದು 5.576 ಶತಕೋಟಿ ಡಾಲರ್‌ಗೆ ಕುಸಿದಿದೆ. ವಿಶ್ಲೇಷಕರ ಮಾಹಿತಿ ಪ್ರಕಾರ, ಪ್ರಸ್ತುತ ವಿದೇಶಿ ವಿನಿಮಯ ಸಂಗ್ರಹದ ಅನ್ವಯ ಪಾಕಿಸ್ತಾನವು ಎರಡ್ಮೂರು ವಾರಗಳವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದು.

ಪಾಕಿಸ್ತಾನದ ರೂಪಾಯಿ ದುರ್ಬಲ: ಇದಷ್ಟೇ ಅಲ್ಲ, ಡಾಲರ್ ಎದುರು ಪಾಕಿಸ್ತಾನದ ಕರೆನ್ಸಿ ಕೂಡ ದುರ್ಬಲವಾಗಿ ಮಂಡಿಯೂರಿದೆ. ಡಾಲರ್ ಬೆಲೆ 227.8 ಪಾಕಿಸ್ತಾನಿ ರೂಪಾಯಿಗೆ ಸಮನಾಗಿದೆ. ಕಳೆದ ಮೂರು ತಿಂಗಳಲ್ಲಿ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ 10 ರೂಪಾಯಿ ಇಳಿಕೆಯಾಗಿದೆ. ಆಹಾರ ಹಣದುಬ್ಬರವು ಸಹ ವರ್ಷದಿಂದ ವರ್ಷಕ್ಕೆ 35.5 ಪ್ರತಿಶತದಷ್ಟು ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ಸಾರಿಗೆ ದರಗಳು ಡಿಸೆಂಬರ್‌ನಲ್ಲಿ ಶೇ 41.2 ದಷ್ಟು ಹೆಚ್ಚಾಗಿವೆ.

ಇದನ್ನೂ ಓದಿ: ಆರ್ಥಿಕ ದಿವಾಳಿ ಸನಿಹದಲ್ಲಿ ನೆರೆಯ ಪಾಕಿಸ್ತಾನ.. ಶ್ರೀಲಂಕಾಗೆ ಬಂದ ಪರಿಸ್ಥಿತಿ ಪಾಕಿಸ್ತಾನಕ್ಕೂ ಬರಬಹುದು ವಿಶ್ಲೇಷಕರ ಸುಳಿವು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.