ETV Bharat / international

ಬಾಂಗ್ಲಾದೇಶದಲ್ಲಿ ಹಿಂಸಾಚಾರ; ಬಿಎನ್​ಪಿ - ಅವಾಮಿ ಲೀಗ್​​ ಸಂಘರ್ಷದಲ್ಲಿ 50 ಜನರಿಗೆ ಗಾಯ - ಕೊಮಿಲ್ಲಾ ಸದರ್ ದಕ್ಷಿಣ ಉಪಜಿಲಾ ಪರಿಷತ್ ಅಧ್ಯಕ್ಷ

ಬಾಂಗ್ಲಾದೇಶ ನ್ಯಾಷನಲಿಸ್ಟ್​ ಪಾರ್ಟಿ ಮತ್ತು ಅವಾಮಿ ಲೀಗ್​ ಕಾರ್ಯಕರ್ತರ ನಡುವಿನ ಹೋರಾಟ ತಾರಕಕ್ಕೇರಿದ್ದು, ಗುಂಡಿನ ದಾಳಿಯಲ್ಲಿ ಕನಿಷ್ಠ 50 ಜನ ಗಾಯ

BNP-Awami League clash leaves 50 injured in Comilla

author img

By ETV Bharat Karnataka Team

Published : Aug 27, 2023, 12:25 PM IST

ಢಾಕಾ (ಬಾಂಗ್ಲಾದೇಶ): ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಕನಿಷ್ಠ 50 ನಾಯಕರು ಮತ್ತು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಕೊಮಿಲ್ಲಾದಲ್ಲಿ, ಲಾಲ್ಮಾಯಿ ಉಪಜಿಲಾ ಪರಿಷತ್ ಅಧ್ಯಕ್ಷ ಕಮರುಲ್ ಹಸನ್ ಮತ್ತು ಕೊಮಿಲ್ಲಾ ಸದರ್ ದಕ್ಷಿಣ ಉಪಜಿಲಾ ಪರಿಷತ್ ಅಧ್ಯಕ್ಷ ಗೋಲಮ್ ಸರ್ವಾರ್ ಅವರ ಬೆಂಬಲಿಗ ಅವಾಮಿ ಲೀಗ್ ಸದಸ್ಯರು ಗುಂಡು ಹಾರಿಸಿ ಬಿಎನ್​ಪಿ ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ತಾವು ಆಯೋಜಿಸಿದ್ದ ಕಾರ್ಯಕ್ರಮವೊಂದರ ಸ್ಥಳವೊಂದನ್ನು ಅವಾಮಿ ಲೀಗ್ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯ ಬಿಎನ್‌ಪಿ ಸದಸ್ಯರು ಆರೋಪಿಸಿದ್ದಾರೆ. ಕೊಮಿಲ್ಲಾದ ಲಾಲ್ಮಾಯಿ ಉಪಜಿಲಾದ ಬೆಲ್ಘರ್ ದಖಿನ್ ಯೂನಿಯನ್​ ಪ್ರದೇಶದಲ್ಲಿ ಘಟನೆ ನಡೆದಿದೆ. ಕಾರ್ಯಕ್ರಮ ಪ್ರಾರಂಭವಾದಾಗ ಸಂಜೆ 5 ಗಂಟೆಗೆ ತಾವು ಅಲ್ಲಿರಬೇಕಿತ್ತು ಎಂದು ಬಿಎನ್‌ಪಿ ಅಧ್ಯಕ್ಷರ ಸಲಹೆಗಾರ ಮತ್ತು ಮಾಜಿ ಸಂಸದ ಮೊನಿರುಲ್ ಹಕ್ ಚೌಧರಿ ಹೇಳಿಕೊಂಡಿದ್ದಾರೆ.

ಆದಾಗ್ಯೂ, ಮಧ್ಯಾಹ್ನ 2 ಗಂಟೆಗೆ ಕೆಲ ಅವಾಮಿ ಲೀಗ್ ಕಾರ್ಯಕರ್ತರು ಆ ಸ್ಥಳದ ಸುತ್ತಲೂ ಜಮಾಯಿಸಿದ್ದಾರೆ ಎಂಬ ಮಾಹಿತಿ ಬಂದಿತ್ತು ಹಾಗೂ ನಂತರ ಅವರು ಅಲ್ಲಿ ಸೇರಿದ್ದ ಜನರ ಮೇಲೆ ಗುಂಡು ಹಾರಿಸಿದರು ಮತ್ತು ಸ್ಥಳವನ್ನು ಧ್ವಂಸಗೊಳಿಸಿದರು ಎಂದು ಮೊನಿರುಲ್ ಹಕ್ ಚೌಧರಿ ಆರೋಪಿಸಿದರು. ಜುಬೊ ದಳದ ಮುಖಂಡರಾದ ಫಿರೋಜ್ ಮತ್ತು ಮೊನಿರ್ ಅವರಿಗೆ ಗುಂಡು ತಗುಲಿದ್ದು, ಇದರಲ್ಲಿ ಒಬ್ಬರ ತಲೆಗೆ ಗುಂಡು ತಗುಲಿದೆ ಎಂದು ಅವರು ಹೇಳಿದರು. ಗಾಯಗೊಂಡ ನಾಯಕರನ್ನು ಕೊಮಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಏತನ್ಮಧ್ಯೆ, ಕೊಮಿಲ್ಲಾ ಸದರ್ ದಕ್ಷಿಣ ಉಪಜಿಲಾ ಪರಿಷತ್ ಅಧ್ಯಕ್ಷ ಗೋಲಮ್ ಸರ್ವಾರ್ ಬಿಎನ್​ಪಿಯ ಆರೋಪಗಳನ್ನು ನಿರಾಕರಿಸಿದ್ದಾರೆ. ಅಲ್ಲದೆ ಬಿಎನ್​ಪಿ ಕಾರ್ಯಕರ್ತರೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸ್ಥಳೀಯ ಗೈಯರ್ ಭಂಗಾ-ಬೆಲ್ಘರ್ ರಸ್ತೆಯಲ್ಲಿ ಅವಾಮಿ ಲೀಗ್ ರ್ಯಾಲಿಯ ಮೇಲೆ ಬಿಎನ್​ಪಿ ಬೆಂಬಲಿಗರು ನಡೆಸಿದ ಗುಂಡಿನ ದಾಳಿಯಲ್ಲಿ ಪಕ್ಷದ ಎಂಟರಿಂದ ಒಂಬತ್ತು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಗಾಯಗೊಂಡ ಅವಾಮಿ ಲೀಗ್ ಸದಸ್ಯರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಗೋಲಮ್ ಸರ್ವಾರ್, ಗಾಯಗೊಂಡವರನ್ನು ಗುರುತಿಸಲು ಈಗಷ್ಟೇ ಪ್ರಯತ್ನಿಸಲಾಗುತ್ತಿದೆ ಎಂದರು.

ಢಾಕಾ ಟ್ರಿಬ್ಯೂನ್ ಪ್ರಕಾರ, ಮಾಜಿ ಸಂಸದ ಮೊನಿರುಲ್ ಹಕ್ ಚೌಧರಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಬಿಎನ್​ಪಿ ನಾಯಕನನ್ನು ಭೇಟಿ ಮಾಡಲು ಬೆಲ್ಘಾರ್​​ಗೆ ಆಗಮಿಸುವವರಿದ್ದರು ಎಂದು ಲಾಲ್ಮಾಯಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಹನೀಫ್ ಸರ್ಕಾರ್ ತಿಳಿಸಿದ್ದಾರೆ. "ಆ ಸಮಯದಲ್ಲಿ ಗ್ರಾಮದಲ್ಲಿ ಅವಾಮಿ ಲೀಗ್​ನ ಶಾಂತಿ ಸಭೆ ನಡೆಯುತ್ತಿತ್ತು. ಸಭೆ ನಡೆಯುತ್ತಿರುವಾಗಲೇ ಬಿಎನ್​ಪಿ ಕಾರ್ಯಕರ್ತರು ಸಭೆಯತ್ತ ಇಟ್ಟಿಗೆಗಳನ್ನು ಎಸೆದಾಗ ಗಲಾಟೆ ಆರಂಭವಾಯಿತು" ಎಂದು ಅವರು ಹೇಳಿದರು. ಆದರೆ ಘಟನಾ ಸ್ಥಳದಲ್ಲಿ ಗುಂಡು ಹಾರಿಸಿದ ಯಾವುದೇ ಕುರುಹುಗಳು ಪೊಲೀಸರಿಗೆ ಕಂಡು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು. (ಎಎನ್ಐ)

ಇದನ್ನೂ ಓದಿ : ಉಕ್ರೇನ್​ ಪೈಲಟ್​ಗಳಿಗೆ ಅಮೆರಿಕದಿಂದ ಎಫ್-16 ಫೈಟರ್ ಜೆಟ್ ತರಬೇತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.