ವಾಷಿಂಗ್ಟನ್, ಅಮೆರಿಕ: ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಂಧು ಅವರು ವಾಷಿಂಗ್ಟನ್ ಡಿಸಿಯ ಇಂಡಿಯಾ ಹೌಸ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ದೇಶಕ್ಕೆ ನೆನಪಿಸಿದರು. ಭಾರತ - ಯುಎಸ್ ಸಹಭಾಗಿತ್ವವು ಎರಡೂ ದೇಶಗಳಿಗೆ ಸೇರಿದಂತೆ ಪ್ರಪಂಚದ ಇತರ ಭಾಗಗಳಿಗೆ ಪ್ರಮುಖ ಪಾಲುದಾರಿಕೆಯಾಗಿದೆ ಎಂದು ಹೇಳಿದರು.
-
Enthusiasm to celebrate the Tiranga 🇮🇳 at India House today #HarGharTiranga pic.twitter.com/kqLgvWKDvD
— Taranjit Singh Sandhu (@SandhuTaranjitS) August 15, 2022 " class="align-text-top noRightClick twitterSection" data="
">Enthusiasm to celebrate the Tiranga 🇮🇳 at India House today #HarGharTiranga pic.twitter.com/kqLgvWKDvD
— Taranjit Singh Sandhu (@SandhuTaranjitS) August 15, 2022Enthusiasm to celebrate the Tiranga 🇮🇳 at India House today #HarGharTiranga pic.twitter.com/kqLgvWKDvD
— Taranjit Singh Sandhu (@SandhuTaranjitS) August 15, 2022
ಭಾರತದ ಸ್ವಾತಂತ್ರ್ಯ ದಿನವನ್ನು ಉದ್ದೇಶಿಸಿ ಮಾತನಾಡಿದ ರಾಯಭಾರಿ ಸಂಧು, ಭಾರತವು ಸಕಾರಾತ್ಮಕ ಪ್ರಗತಿಯನ್ನು ಸಾಧಿಸುತ್ತಿರುವುದರಿಂದ ಮುಂದಿನ ಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸಲು ನಾವು ಹೆಚ್ಚಿನದನ್ನು ಮಾಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನವಿಯಂತೆ... ಮುಂದಿನ 25 ವರ್ಷಗಳ ಪ್ರಯಾಣವು ನವ ಭಾರತ ನಿರ್ಮಾಣ ಸೂಚಿಸುತ್ತದೆ. ಸಮೃದ್ಧಿಯ ಹೊಸ ಉತ್ತುಂಗಕ್ಕೆ ಏರುವುದು ಈ ಅಮೃತ್ ಕಾಲದ ಗುರಿಯಾಗಿದೆ ಎಂದು ಹೇಳಿದರು.
ಭಾರತ ಮತ್ತು ಯುಎಸ್ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತವೆ ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆ, ಗ್ರಹ ಮತ್ತು ಮಾನವರ ಅಭಿವೃದ್ಧಿಯನ್ನು ಮುನ್ನಡೆಸಲು ತಮ್ಮ ಸಿನರ್ಜಿ ಮತ್ತು ಪೂರಕತೆಯ ಲಾಭವನ್ನು ಪಡೆದುಕೊಳ್ಳುತ್ತವೆ ಎಂದು ಅವರು ಹೇಳಿದರು. ಈ ಪ್ರಕ್ರಿಯೆಯಲ್ಲಿ, ಭಾರತೀಯ ಡಯಾಸ್ಪೊರಾ ಪ್ರಮುಖ ಸ್ತಂಭವಾಗಿ ಮುಂದುವರಿಯುತ್ತದೆ ಮತ್ತು ಡಯಾಸ್ಪೊರಾ ಮಾಡುತ್ತಿರುವ ಮಹತ್ತರವಾದ ಕೆಲಸವನ್ನು ಪ್ರಶಂಸಿಸಲು ನಾನು ಈ ಅವಕಾಶವನ್ನು ಬಳಸುತ್ತೇನೆ ಎಂದರು.
ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವ, ಸ್ವಾತಂತ್ರ್ಯದ ಅಮೃತ ಮಹೋತ್ಸವದಂತಹ ಸಂದರ್ಭಗಳು ಭಾರತವನ್ನು ಪುನರ್ವಿಮರ್ಶಿಸಲು, ತನ್ನ ಗುರಿಗಳನ್ನು ಮರು ಲೆಕ್ಕಾಚಾರ ಮಾಡಲು ಮತ್ತು ಅವುಗಳನ್ನು ಸಾಧಿಸುವ ತನ್ನ ಸಂಕಲ್ಪವನ್ನು ಬಲಪಡಿಸಲು ಪ್ರೇರೇಪಿಸುತ್ತದೆ ಎಂದು ರಾಯಭಾರಿ ಸಂಧು ಹೇಳಿದರು.
ಟೈಮ್ಸ್ ಸ್ಕ್ವೇರ್: ಪ್ರಧಾನಿ ಮೋದಿ ಹೇಳಿದಂತೆ 'ಇದು ಸಮಯ, ಇದು ಸರಿಯಾದ ಸಮಯ, ಇದು ಭಾರತದ ಅಮೂಲ್ಯ ಘಳಿಗೆ' ಎಂದು ನಾನು ಉಲ್ಲೇಖಿಸುತ್ತೇನೆ ಎಂದು ಸಂಧು ಹೇಳಿದರು. ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ನ್ಯೂಯಾರ್ಕ್‌ನ ಐತಿಹಾಸಿಕ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಈ ಕಾರ್ಯಕ್ರಮವನ್ನು ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್- ನ್ಯೂಯಾರ್ಕ್ ಮೆಟ್ರೋಪಾಲಿಟನ್ ಏರಿಯಾ ಆಯೋಜಿಸಿತ್ತು.
ಶಂಕರ್ ಮಹದೇವನ್ ಸಂಗೀತದ ಇಂಪು: ಇಲ್ಲಿ ಭಾರತೀಯ ಕಾನ್ಸುಲೇಟ್ ಜನರಲ್ ರಣಧೀರ್ ಜಸ್ವಾಲ್ ಅವರು ಭಾರತದ ಧ್ವಜವನ್ನು ಆರೋಹಣ ಮಾಡಿದರು. ಈ ಸಂದರ್ಭದಲ್ಲಿ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಉಪಸ್ಥಿತರಿದ್ದರು. ಖ್ಯಾತ ಸಂಗೀತ ಸಂಯೋಜಕರಾದ ದೇವಿ ಶ್ರೀ ಪ್ರಸಾದ್ (ಡಿಎಸ್ಪಿ) ಮತ್ತು ಶಂಕರ್ ಮಹಾದೇವನ್ ಕೂಡ ಉಪಸ್ಥಿತರಿದ್ದರು.
ಭಾರತೀಯ ಗಾಯಕ ಮತ್ತು ಸಂಯೋಜಕ ಶಂಕರ್ ಮಹಾದೇವನ್ ಅವರು 'ಏ ವತನ್ ವತನ್ ಮೇರೆ ಆಬದ್ ರಹೇ ತು' ಎಂಬ ದೇಶಭಕ್ತಿ ಗೀತೆಯನ್ನು ಹಾಡಿದರು. ಭಾರತೀಯ ಡಯಾಸ್ಪೊರಾ ಕೂಡ ತಮ್ಮ ರಾಗಗಳನ್ನು ಮಹಾದೇವನ ರಾಗದೊಂದಿಗೆ ಬೆರೆಸಿದರು. ಹಾಡುಗಳು ಮತ್ತು ಲಯಬದ್ಧವಾದ ಬಡಿತಗಳ ನಡುವೆ ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ಮತ್ತು ದೇಶಭಕ್ತಿಯ ಉತ್ಸಾಹಕ್ಕೆ ತಮ್ಮನ್ನು ತಾವು ಜೋಡಿಸಿಕೊಂಡರು. ಆಜಾದಿ ಕಾ ಅಮೃತ ಮಹೋತ್ಸವದ ಸಮಾರೋಪದಲ್ಲಿ ಡಿಎಸ್ಪಿ ರಾಷ್ಟ್ರಗೀತೆ ಹಾಡಿದರು.
ಅಮೆರಿಕದಲ್ಲಿ ತೆರದುಕೊಂಡ ಭಾರತೀಯ ಸಂಸ್ಕೃತಿ: ಸಮಾರಂಭದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಪ್ರದರ್ಶಿಸಿದ ಕೂಚಿಪುಡಿ, ಒಡಿಸ್ಸಿ, ಕಥಕ್ ಮತ್ತು ಭರತನಾಟ್ಯ ಸೇರಿದಂತೆ ಭಾರತೀಯ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ಒಳಗೊಂಡ ಕಿರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.
ಈ ಸಂದರ್ಭದಲ್ಲಿ ದೊಡ್ಡ ಕರಕುಶಲ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವುದರೊಂದಿಗೆ ಹರ್ ಘರ್ ತಿರಂಗಾ ಅಭಿಯಾನವನ್ನು ಸ್ಮರಿಸಲಾಯಿತು. ಅಟ್ಲಾಂಟಾ, ಹೂಸ್ಟನ್, ಚಿಕಾಗೋ, ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಇತರ ಭಾರತೀಯ ದೂತಾವಾಸಗಳಲ್ಲಿಯೂ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಹಿರಿಯ ಸದಸ್ಯರು ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ನಾದ್ಯಂತದ ನಾಯಕರು ಮತ್ತು ವ್ಯಾಪಾರ, ಕಲೆ, ವಿಜ್ಞಾನ ಇತ್ಯಾದಿ ವಿವಿಧ ಕ್ಷೇತ್ರಗಳ ಗಣ್ಯರು ಈ ಮಹತ್ವದ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ವಿವಿಧ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ಪ್ರತಿನಿಧಿಗಳು, ವ್ಯಾಪಾರ ಸಮುದಾಯದ ಸದಸ್ಯರು ಮತ್ತು ಇತರರು ಸೇರಿದಂತೆ ಇಂಡೋ-ಅಮೆರಿಕನ್ ಸಮುದಾಯದ ಪ್ರಮುಖ ಸದಸ್ಯರು ತಮ್ಮ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
ಐಕಾನಿಕ್ ಸೈಟ್‌ನಲ್ಲಿ ತಿರಂಗಾ ಸದ್ದು: ಈ ಐಕಾನಿಕ್ ಸೈಟ್‌ನಲ್ಲಿ ತ್ರಿವರ್ಣ ಧ್ವಜಾರೋಹಣವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಂತರ ಹಗಲಿನಲ್ಲಿ ಎಂಪೈರ್ ಸ್ಟಾರ್ ಬಿಲ್ಡಿಂಗ್ ಅನ್ನು ಭಾರತೀಯ ಧ್ವಜದ ಬಣ್ಣಗಳಲ್ಲಿ ಬೆಳಗಿಸಲಾಯಿತು ಮತ್ತು ಸಂಜೆ ಹಡ್ಸನ್ ನದಿಯ ಮೇಲೆ ವೈಮಾನಿಕ ಪ್ರದರ್ಶನವು ತ್ರಿವರ್ಣ ಧ್ವಜವನ್ನು 220 ಅಡಿಗಳಷ್ಟು ಏರಿಸಲಾಯಿತು.
ಕೆನಡಾದಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಂಗು: ದೇಶದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ಭಾರತವು ದೇಶಪ್ರೇಮದ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಆದರೆ, ಕೆನಡಾದಲ್ಲಿ ಹಿಂದೂ ಮತ್ತು ಸಿಖ್ ವಲಸಿಗರು ಟೊರೊಂಟೊ ನಗರದಲ್ಲಿ ಕೆನಡಾದ ಸಾರ್ವಜನಿಕರಿಗೆ ಉಚಿತ ಆಹಾರವನ್ನು ವಿತರಿಸಿದರು. ಟೊರೊಂಟೊದ ಬೀದಿಗಳಲ್ಲಿ ದೇಶದ ವಲಸಿಗರು ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಿದರು.
ಹಿಂದೂ ಫೋರಮ್ ಕೆನಡಾ ಕೂಡ ಗ್ರೇಟರ್ ಟೊರೊಂಟೊದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ, ಆಜಾದಿಯ ಅಮೃತ ಮಹೋತ್ಸವದ ಅಡಿಯಲ್ಲಿ 75,000 ಜನರಿಗೆ ಉಚಿತ ಸಸ್ಯಾಹಾರಿ ಆಹಾರವನ್ನು ನೀಡುವ ಅಭಿಯಾನವನ್ನು ಪ್ರಾರಂಭಿಸಲಾಯಿತು. ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿಂದೂ ಫೋರಂ ಕೆನಡಾದ ಸದಸ್ಯರೊಬ್ಬರು 75,000 ಕೆನಡಿಯನ್ನರಿಗೆ ಉಚಿತ ಸಸ್ಯಾಹಾರಿ ಊಟವನ್ನು ನೀಡುತ್ತಿದೆ ಎಂದು ಹೇಳಿದರು.
ಓದಿ: ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ದೇಶಭಕ್ತಿಗೀತೆ ಹಾಡಿದ ಶಂಕರ್ ಮಹಾದೇವನ್