ETV Bharat / international

ಉಕ್ರೇನ್ ವಿರುದ್ಧ ಯುದ್ಧ: ರಷ್ಯಾ ಮೇಲೆ ಅಮೆರಿಕದಿಂದ ಮತ್ತಷ್ಟು ಹೊಸ ನಿರ್ಬಂಧ

author img

By

Published : May 19, 2023, 7:19 AM IST

ಅಮೆರಿಕ ಜಿ7 (G7) ಶೃಂಗಸಭೆಯ ಮೂಲಕ ರಷ್ಯಾ ಮೇಲೆ ಹೊಸ ನಿರ್ಬಂಧಗಳನ್ನು ಹೇರಲು ಮುಂದಾಗಿದೆ.

US President Joe Biden and Russian President Vladimir Putin
ಜೋ ಬೈಡನ್ ಮತ್ತು ವ್ಲಾಡಿಮಿರ್ ಪುಟಿನ್

ವಾಷಿಂಗ್ಟನ್ (ಅಮೆರಿಕ) : ಉಕ್ರೇನ್ ಯುದ್ಧಭೂಮಿಗೆ ಸಂಬಂಧಿಸಿದ ಸರಕುಗಳಿಗೆ ರಷ್ಯಾ ಪ್ರವೇಶವನ್ನು ನಿರ್ಬಂಧಿಸಲು ಅಮೆರಿಕ ಹೊಸ ನಿರ್ಬಂಧಗಳನ್ನು ಅನಾವರಣಗೊಳಿಸಲಿದೆ ಎಂದು ಯುಎಸ್‌ಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು (ಶುಕ್ರವಾರ) ಜಪಾನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಮುಂಚಿತವಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಸಕ್ತ ವರ್ಷ ಜಿ7 ನಿಂದ ಯುನೈಟೆಡ್ ಸ್ಟೇಟ್ಸ್‌ನ ಮುಖ್ಯ ಗುರಿಗಳು ಹಲವು. ಅದರಲ್ಲಿ ಉಕ್ರೇನ್‌ಗೆ ನಿರಂತರ ಬೆಂಬಲ ನೀಡುವುದೂ ಸೇರಿದೆ ಎಂದು ಅವರು ಒತ್ತಿ ಹೇಳಿದರು.

ರಷ್ಯಾವನ್ನು ಯುದ್ಧಾಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಲು ನಾವು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಜಿ7 ಪಾಲುದಾರರೊಂದಿಗೆ ಸಮನ್ವಯದಲ್ಲಿ ನಾವು ಪ್ರಮುಖ ಆರ್ಥಿಕತೆಯ ಮೇಲೆ ವಿಧಿಸಿರುವ ನಿರ್ಬಂಧಗಳು ಮತ್ತು ರಫ್ತು ನಿಯಂತ್ರಣ ಕ್ರಮಗಳನ್ನು ಬಹಿರಂಗಪಡಿಸಲಿದ್ದೇವೆ ಎಂದು ಅಮೆರಿಕ ಹೇಳಿದೆ.

300ಕ್ಕೂ ಹೆಚ್ಚು ಹೊಸ ನಿರ್ಬಂಧಗಳು: ನಿರ್ಬಂಧಿತ ಯುಸ್‌ಎ​ ಉತ್ಪನ್ನಗಳನ್ನು ರಷ್ಯಾಕ್ಕೆ ಮಾರಾಟ ಮಾಡುವ ಸುಮಾರು 70 ಕಂಪನಿಗಳು ಮತ್ತು ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಯುನೈಟೆಡ್ ಸ್ಟೇಟ್ಸ್ ಯೋಜಿಸಿದೆ. ಇದಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಘಟಕಗಳು, ಹಡಗುಗಳು ಮತ್ತು ವಿಮಾನಗಳ ವಿರುದ್ಧ 300 ಕ್ಕೂ ಹೆಚ್ಚು ಹೊಸ ನಿರ್ಬಂಧಗಳು ಜಾರಿಗೆ ಬರಲಿವೆ. "ನಾವು ರಫ್ತು ನಿಯಂತ್ರಣಗಳನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ. ಈ ನಿರ್ಬಂಧಗಳಿಂದ ರಷ್ಯಾ ತನ್ನ ಯುದ್ಧ ಯಂತ್ರವನ್ನು ಅನುಷ್ಠಾನಗೊಳಿಸಲು ಇನ್ನಷ್ಟು ಕಷ್ಟವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೆಚ್ಚುವರಿಯಾಗಿ ಯುಎಸ್ ತನ್ನ ನಿರ್ಬಂಧಗಳ ವ್ಯಾಪ್ತಿಯನ್ನು ದೇಶದ ಮಿಲಿಟರಿ-ಕೈಗಾರಿಕಾ ಸಂಕೀರ್ಣಕ್ಕೆ ನಿರ್ಣಾಯಕವಾಗಿರುವ ರಷ್ಯಾದ ಆರ್ಥಿಕ ಕ್ಷೇತ್ರಗಳಿಗೆ ವಿಸ್ತರಿಸುತ್ತದೆ. ರಷ್ಯಾಕ್ಕೆ ತನ್ನ ಸೇವೆಗಳನ್ನು ಬಳಸದಂತೆ ತಡೆಯಲು ಹೊಸ ನಿರ್ಬಂಧಗಳನ್ನು ಜಾರಿಗೊಳಿಸುತ್ತದೆ. ಜಿ7 ಸದಸ್ಯರು ಹೊಸ ನಿರ್ಬಂಧಗಳು ಮತ್ತು ರಫ್ತು ನಿಯಂತ್ರಣಗಳನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದ್ದಾರೆ. ಆದರೆ ಯುನೈಟೆಡ್ ಸ್ಟೇಟ್ಸ್ ಹೊಸ ಮಹತ್ವದ ನಿರ್ಬಂಧಗಳನ್ನು ವಿಧಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ರಷ್ಯಾ vs ಉಕ್ರೇನ್- ಮುಂದುವರೆದ ಸಂಘರ್ಷ: ಕಳೆದ ವರ್ಷದ ಫೆಬ್ರವರಿ 24 ರಂದು ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈಗಲೂ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಲೇ ಇದೆ.

ಹಿರೋಶಿಮಾದಲ್ಲಿ ಜಿ7 ಶೃಂಗಸಭೆ: ಅಮೆರಿಕ ಅಧ್ಯಕ್ಷ ಜೋ ಬೈಡನ್​ ಮತ್ತು ಇತರ ನಾಯಕರು ಜಿ7 ನಲ್ಲಿ ಭಾಗವಹಿಸಲು ಜಪಾನ್‌ನ ಹಿರೋಷಿಮಾ ನಗರದಲ್ಲಿದ್ದಾರೆ. ಆತಿಥೇಯ ದೇಶದ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರು ಹಿರೋಷಿಮಾ ಪೀಸ್ ಮೆಮೋರಿಯಲ್ ಪಾರ್ಕ್ (ಗೆನ್‌ಬಾಕು ಡೋಮ್)ನಲ್ಲಿ ವಿಶ್ವ ನಾಯಕರನ್ನು ಸ್ವಾಗತಿಸಲಿದ್ದಾರೆ. ಈ ಪ್ರದೇಶದಲ್ಲಿ ಉಳಿದಿರುವ ಏಕೈಕ ರಚನೆ ವಿಶ್ವದ ಮೊದಲ ಪರಮಾಣು ದಾಳಿ ನಂತರದ ಪರಿಣಾಮಗಳನ್ನು ಚಿತ್ರಿಸುತ್ತದೆ. ಆಗಸ್ಟ್ 6, 1945 ರಂದು ನಗರದ ಮೇಲೆ ಅಮೆರಿಕ ಭಯಾನಕ ಅಣುಬಾಂಬ್ ದಾಳಿ ನಡೆಸಿತ್ತು. ಏಳು ದೇಶಗಳ ಗುಂಪಿನ ನಾಯಕರು ಮತ್ತು ಭಾರತ ಸೇರಿದಂತೆ ಇತರ ಎಂಟು ಆಹ್ವಾನಿತ ದೇಶಗಳ ನಾಯಕರು ಹಿರೋಷಿಮಾದ ಈ ಶಾಂತಿ ಸ್ಮಾರಕ ಉದ್ಯಾನವನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಹಿರೋಷಿಮಾ ಮಾನವ ಇತಿಹಾಸದಲ್ಲಿ ಪರಮಾಣು ಶಸ್ತ್ರಾಸ್ತ್ರದ ಮೊದಲ ಮಿಲಿಟರಿ ಗುರಿಯಾಗಿದೆ. 2ನೇ ವಿಶ್ವ ಸಮರದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆರ್ಮಿ ಏರ್ ಫೋರ್ಸಸ್ ನಗರದ ಮೇಲೆ "ಲಿಟಲ್ ಬಾಯ್" ಪರಮಾಣು ಬಾಂಬ್ ಅನ್ನು ಇಲ್ಲಿ ಪ್ರಯೋಗಿಸಿತು. ಹಿರೋಷಿಮಾ ನಗರ ಬಹುಪಾಲು ನಾಶವಾಯಿತು. ಇದೀಗ ಹಿರೋಷಿಮಾ ಶಾಂತಿ ಸ್ಮಾರಕ ಬಾಂಬ್ ಸ್ಫೋಟದ ಸ್ಮಾರಕವಾಗಿ ಗುರುತಿಸಿಕೊಂಡಿದೆ. ಶಾಂತಿಗಾಗಿ ತಮ್ಮ ಬದ್ಧತೆಯನ್ನು ಇದು ತೋರಿಸುತ್ತದೆ

ಏನಿದು ಜಿ7 ಶೃಂಗಸಭೆ?: ಜಗತ್ತಿನ ಪ್ರಮುಖ ಆರ್ಥಿಕ ಬಲಾಡ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್‌ ದೇಶಗಳು ಸೇರಿ ಮಾಡಿಕೊಂಡಿರುವ ಅನಧಿಕೃತ ಒಕ್ಕೂಟ. ಅಂದ್ರೆ, ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಅನೌಪಚಾರಿಕ ಗುಂಪು. ಇದರಲ್ಲಿ ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳು, ಇತರೆ ಆಹ್ವಾನಿತ ದೇಶಗಳೊಂದಿಗೆ ಪ್ರತಿ ವರ್ಷ ವಾರ್ಷಿಕ ಜಿ7 ಶೃಂಗಸಭೆ ನಡೆಸುತ್ತವೆ.

ಇದನ್ನೂ ಓದಿ: ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.