ETV Bharat / international

ಪುಟಿನ್- ವ್ಯಾಗ್ನರ್ ವಿವಾದದಿಂದ 'ನಿಜವಾದ ಬಿರುಕು' ಬಹಿರಂಗ: ಬ್ಲಿಂಕನ್ ಸ್ಫೋಟಕ ಹೇಳಿಕೆ - ಪುಟಿನ್ ವ್ಯಾಗ್ನರ್ ವಿವಾದ

ವ್ಯಾಗ್ನರ್ ಗ್ರೂಪ್​ ದಂಗೆಯ ಪ್ರಯತ್ನದ ನಂತರ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ವಿವಾದವು ವ್ಲಾಡಿಮಿರ್ ಪುಟಿನ್ ಆಳ್ವಿಕೆಯಲ್ಲಿನ 'ನಿಜವಾದ ಬಿರುಕು' ಬಹಿರಂಗವಾಗಿದೆ ಎಂದು ಬ್ಲಿಂಕನ್ ವಿಶ್ಲೇಷಿಸಿದ್ದಾರೆ.

Putin & Wagner dispute
ಪುಟಿನ್- ವ್ಯಾಗ್ನರ್ ವಿವಾದದಿಂದ 'ನಿಜವಾದ ಬಿರುಕು' ಬಹಿರಂಗ: ಬ್ಲಿಂಕನ್ ಸ್ಫೋಟಕ ಹೇಳಿಕೆ
author img

By

Published : Jun 26, 2023, 12:26 PM IST

ವಾಷಿಂಗ್ಟನ್ ಡಿಸಿ (ಅಮೆರಿಕ): ''ವ್ಲಾಡಿಮಿರ್ ಪುಟಿನ್ ಹಾಗೂ ವ್ಯಾಗ್ನರ್ ಗ್ರೂಪ್ ನಡುವಿನ ವಿವಾದದ ಕುರಿತು ಭಾನುವಾರ ಅಮೆರಿಕ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಅವರು ಬಿರುಗಾಳಿ ಎಬ್ಬಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ರಷ್ಯಾ ಅಧ್ಯಕ್ಷರ ಆಡಳಿತದಲ್ಲಿ 'ನಿಜವಾದ ಬಿರುಕು' ಬಹಿರಂಗವಾಗಿದೆ'' ಎಂದು ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

ಯೆವ್ಗೆನಿ ಪ್ರಿಗೊಜಿನ್ ತಮ್ಮ ಯೋಜನೆಯನ್ನು ರದ್ದುಗೊಳಿಸುತ್ತಾರೆ ಎಂದು ಅವರಿಗೆ ತಿಳಿದಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ಲಿಂಕೆನ್, ''ನನಗೆ ಗೊತ್ತಿಲ್ಲ. ಆದರೆ, ಪುಟಿನ್ ಹಾಗೂ ವ್ಯಾಗ್ನರ್ ನಡುವೆ ಏನಾಯಿತು ಎಂಬುದು ಮುಂದಿನ ದಿನಗಳಲ್ಲಿ ಮುಂಚೂಣಿಗೆ ಬರುವುದು ಖಚಿತ'' ಎಂದರು.

ಪುಟಿನ್ ಆಡಳಿತಕ್ಕೆ ನೇರ ಸವಾಲು: ''ಇದರ ಬಗ್ಗೆ ಅಮೆರಿಕಕ್ಕೆ ಯಾವುದೇ ಮಾಹಿತಿ ಇಲ್ಲ'' ಎಂದ ಅವರು, ''ವಾಸ್ತವವಾಗಿ, ಇದು ರಷ್ಯನ್ನರ ಆಂತರಿಕ ವಿಷಯವಾಗಿದೆ. ಇದನ್ನು ಇಡೀ ಪ್ರಪಂಚವು ವೀಕ್ಷಿಸುತ್ತಿದೆ. ಹಲವು ತಿಂಗಳುಗಳಲ್ಲಿ ರಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಾವು ನೋಡಿದ್ದೇವೆ. ಇದರಿಂದಾಗಿ ಈ ವಿವಾದವು ಸಂಭವಿಸಿದೆ. ಆದರೆ, ಇದು ಏಕೆ ನಡೆಯುತ್ತಿದೆ ಎಂದು ನಮಗೆ ತಿಳಿದಿಲ್ಲ. ಕಳೆದ ಎರಡರಿಂದ ಮೂರು ದಿನಗಳಲ್ಲಿ ಏನೇ ನಡೆದರೂ, ಮತ್ತೊಮ್ಮೆ ಪುಟಿನ್ ಆಡಳಿತಕ್ಕೆ ನೇರ ಸವಾಲಾಗಿದ್ದು, ಸಾರ್ವಜನಿಕವಾಗಿ ಹೊರಬರುತ್ತಿದೆ'' ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ಹೇಳಿದೆ.

ವ್ಯಾಗ್ನರ್ ಮುಖ್ಯಸ್ಥ ಟೆಲಿಗ್ರಾಮ್ ಪೋಸ್ಟ್‌ ಮಾಡಿದ್ದೇನು?: ''ಉಕ್ರೇನ್ ಅಥವಾ ನ್ಯಾಟೋ ಹೇಗಾದರೂ ರಷ್ಯಾಕ್ಕೆ ಬೆದರಿಕೆ ಒಡ್ಡಿದೆ ಎಂದು ನಂಬಲಾಗಿದೆ. ಇದನ್ನು ಮಿಲಿಟರಿಯಾಗಿ ಎದುರಿಸಬೇಕಾಗುತ್ತದೆ. ಶನಿವಾರ ಬೆಳಗ್ಗೆ, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಅವರು, ಟೆಲಿಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಪುರುಷರು ಉಕ್ರೇನ್‌ನಿಂದ ದಕ್ಷಿಣ ರಷ್ಯಾಕ್ಕೆ ಗಡಿ ದಾಟಿದ್ದಾರೆ. ರಷ್ಯಾದ ಸೈನ್ಯದ ವಿರುದ್ಧ ಬಂಡಾಯ ಎದ್ದಿದ್ದಾರೆ ಎಂದು ಘೋಷಿಸಿದ್ದಾರೆ'' ಎಂದು ಟುಎಎಸ್​ಎಸ್​ ಸಂಸ್ಥೆ ವರದಿ ಮಾಡಿತ್ತು.

ಇದನ್ನೂ ಓದಿ: ರಷ್ಯಾ ವೈಮಾನಿಕ ದಾಳಿಗೆ ಸಿರಿಯಾದಲ್ಲಿ 9 ಮಂದಿ ಬಲಿ, ಹಲವರಿಗೆ ಗಾಯ

ಆಂಟೋನಿ ಬ್ಲಿಂಕೆನ್ ಹೇಳಿದ್ದೇನು?: ಸಂದರ್ಶನದಲ್ಲಿ ಬ್ಲಿಂಕೆನ್ ಅವರು, ''ವ್ಯಾಗ್ನರ್ ಅನ್ನು ಅತ್ಯಂತ ಶಕ್ತಿಶಾಲಿ ಗುಂಪು ಎಂದು ಬಣ್ಣಿಸಿದ್ದಾರೆ. ವ್ಯಾಗ್ನರ್ ಇರುವಲ್ಲೆಲ್ಲ ಸಾವು, ವಿನಾಶ, ಶೋಷಣೆ ಇರುತ್ತದೆ. ಪುಟಿನ್ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಪ್ರಶ್ನೆಗೆ ಉತ್ತರಿಸಿದ ಬ್ಲಿಂಕೆನ್, ''ಇನ್ನೂ ನಮ್ಮಲ್ಲಿ ಉತ್ತರಗಳಿಲ್ಲದ ಅನೇಕ ಪ್ರಶ್ನೆಗಳು ಹುಟ್ಟಿವೆ. ರಷ್ಯಾ ಆಂತರಿಕ ಸವಾಲನ್ನು ಎದುರಿಸುತ್ತಿದೆ. ಪುಟಿನ್ ಏನನ್ನು ಸಾಧಿಸಲು ಪ್ರಯತ್ನಿಸಿದ್ದಾರೋ ಅದಕ್ಕೆ ತದ್ವಿರುದ್ಧವಾಗಿದೆ'' ಎಂದು ಹೇಳಿದರು.

''ರಷ್ಯಾ ಆರ್ಥಿಕವಾಗಿ ದುರ್ಬಲವಾಗಿದೆ. ಈ ದೇಶದ ಮಿಲಿಟರಿ ದುರ್ಬಲವಾಗಿದೆ. ವಿಶ್ವದಲ್ಲಿ ಅದರ ವಿಶ್ವಾಸಾರ್ಹತೆಯೂ ಕುಸಿದಿದೆ. ಇದು ನ್ಯಾಟೋವನ್ನು ಬಲಪಡಿಸಲು ಮತ್ತು ಒಂದುಗೂಡಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಇದು ಉಕ್ರೇನಿಯನ್ನರನ್ನು ದೂರವಿಡುವಲ್ಲಿ ಮತ್ತು ಒಂದುಗೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ವಿಶ್ವದಲ್ಲಿಯೇ ಭಾರತ & ಅಮೆರಿಕ ನಡುವಣ ಸ್ನೇಹ ಅತ್ಯಂತ ಪರಿಣಾಮಕಾರಿಯಾಗಿದೆ: ಬೈಡನ್​ ಟ್ವೀಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.