ETV Bharat / international

ನಿಜ್ಜರ್​ ಹತ್ಯೆಯ ಕುರಿತು ಅಮೆರಿಕ ಗುಪ್ತಚರ ಸಂಸ್ಥೆಗಳಿಂದ ಕೆನಡಾಕ್ಕೆ ಮಾಹಿತಿ: ವರದಿ - ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ

ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತವನ್ನು ಹೊಣೆಗಾರರನ್ನಾಗಿ ಮಾಡಲು ಕೆನಡಾಕ್ಕೆ ಅಮೆರಿಕ ಗುಪ್ತಚರ ಸಂಸ್ಥೆಗಳು ಮಾಹಿತಿ ಒದಗಿಸಿದ್ದವು ಎಂದು ವರದಿಯಾಗಿದೆ.

Khalistan leader Hardeep Singh Nijjar
ಖಲಿಸ್ತಾನ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್
author img

By ETV Bharat Karnataka Team

Published : Sep 24, 2023, 12:33 PM IST

ನ್ಯೂಯಾರ್ಕ್ (ಅಮೆರಿಕ): ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಅಧಿಕಾರಿಗಳ ಪ್ರಕಾರ, "ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಕೆನಡಾ ಭಾರತವನ್ನು ಹೊಣೆಗಾರರನ್ನಾಗಿ ಮಾಡಲು ಅಮೆರಿಕ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ" ಎಂದು ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮ (ನ್ಯೂಯಾರ್ಕ್ ಟೈಮ್ಸ್) ವರದಿ ಮಾಡಿದೆ.

"ಜೂ.18 ರಂದು ಬ್ರಿಟಿಷ್ ಕೊಲಂಬಿಯಾದ ಸಿಖ್ ದೇವಾಲಯದ ಹೊರಗೆ ಭಯೋತ್ಪಾದಕ ನಿಜ್ಜರ್​ ಹತ್ಯೆಗೀಡಾಗಿದ್ದ. ಬಳಿಕ ಅಮೆರಿಕನ್ ಗೂಢಚಾರಿಕೆ ಸಂಸ್ಥೆಗಳು ಕೆನಡಾದ ಸಹವರ್ತಿಗಳಿಗೆ ಮಾಹಿತಿ ನೀಡಿತು. ಇದು ಪ್ರಕರಣದಲ್ಲಿ ಭಾರತ ಭಾಗಿಯಾಗಿದೆ ಎಂದು ಕೆನಡಾ ತೀರ್ಮಾನಿಸಲು ಸಹಾಯ ಮಾಡಿತು. ಹೆಸರು ಹೇಳಲಿಚ್ಚಿಸದ ಮಿತ್ರರಾಷ್ಟ್ರಗಳ ಇಬ್ಬರು ಅಧಿಕಾರಿಗಳು, ಹತ್ಯೆಯ ಕುರಿತು ಅತ್ಯಂತ ಖಚಿತವಾದ ಗುಪ್ತಚರ ಮಾಹಿತಿಯನ್ನು ಕೆನಡಾದಿಂದ ಸಂಗ್ರಹಿಸಲಾಗಿದೆ" ಎಂದು ಖಚಿತಪಡಿಸಿದರು ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ.

ಫೈವ್ ಐಸ್‌ ಇಂಟೆಲಿಜೆನ್ಸ್: ಕೆನಡಾದ ಯುಎಸ್ ರಾಯಭಾರಿ ಡೇವಿಡ್ ಕೊಹೆನ್ ಅವರು ಭಾರತದ ವಿರುದ್ಧ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವು 'ಫೈವ್ ಐಸ್‌ ಇಂಟೆಲಿಜೆನ್ಸ್' ಹಂಚಿಕೊಂಡ ಗುಪ್ತಚರ ಮಾಹಿತಿ ಆಧರಿಸಿದೆ ಎಂದಿದ್ದಾರೆ. 'ಫೈವ್ ಐಸ್‌ ಇಂಟೆಲಿಜೆನ್ಸ್ ಎಂಬುವುದು 5 ರಾಷ್ಟ್ರಗಳ ಗುಪ್ತಚರ ಜಾಲ. ಇದು ಕೆನಡಾ ಸೇರಿದಂತೆ ಯುಎಸ್​, ಯುಕೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಒಳಗೊಂಡಿದೆ. ಇದನ್ನು 1946ರಲ್ಲಿ ಸ್ಥಾಪಿಸಲಾಗಿದೆ.

ತನಿಖೆಗೆ ಸಹಕರಿಸುವಂತೆ ಭಾರತಕ್ಕೆ ಕರೆ: ಸರ್ರೆಯಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ತನಿಖೆ ಮುಂದುವರಿಯುವುದು ನಿರ್ಣಾಯಕವಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕೆನ್, "ಪ್ರಧಾನಿ ಟ್ರುಡೊ ಅವರು ಎತ್ತಿರುವ ಆರೋಪಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ಈ ವಿಷಯದ ಬಗ್ಗೆ ನಾವು ನಮ್ಮ ಕೆನಡಾದ ಸಹೋದ್ಯೋಗಿಗಳೊಂದಿಗೆ ಬಹಳ ನಿಕಟವಾಗಿ ಸಮಾಲೋಚನೆ ನಡೆಸುತ್ತಿದ್ದೇವೆ. ನಮ್ಮ ದೃಷ್ಟಿಕೋನದಿಂದ ಕೆನಡಾದ ತನಿಖೆ ಮುಂದುವರೆಯುವುದು ನಿರ್ಣಾಯಕವಾಗಿದೆ. ತನಿಖೆಯಲ್ಲಿ ಭಾರತ ಕೆನಡಿಯನ್ನರೊಂದಿಗೆ ಕೆಲಸ ಮಾಡುವುದು ಮುಖ್ಯ" ಎಂದಿದ್ದಾರೆ. ನಾವು ಭಾರತ ಸರ್ಕಾರದೊಂದಿಗೆ ನೇರವಾಗಿ ತೊಡಗಿಸಿಕೊಂಡಿದ್ದೇವೆ. ಅಲ್ಲದೇ ಕೆನಡಾ ಸರ್ಕಾರ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಗೆ ಭಾರತ ಸಹಕರಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ-ಕೆನಡಾ ರಾಜತಾಂತ್ರಿಕ ವಿವಾದ: ಕಳೆದ ಜೂ.18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಪಾತ್ರದ ಬಗ್ಗೆ ಟ್ರೂಡೊ ಗಂಭೀರ ಆರೋಪ ಮಾಡಿದ್ದರು. ಇದು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು. ಭಾರತ ಈ ಆರೋಪಗಳನ್ನು ಅಸಂಬದ್ಧ ಮತ್ತು ಪ್ರೇರಣೆ ಎಂದು ಜರಿದಿತ್ತು. ಪ್ರಕರಣ ಸಂಬಂಧ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಚಾಟನೆ ಮಾಡಿದ್ದವು.

ಜಸ್ಟಿನ್ ಟ್ರುಡೋ ಆರೋಪವೇನು?: ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ. ಜೂ.18ರಂದು ಪಶ್ಚಿಮ ಕೆನಡಾದ ಸರ್ರೆಯ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಈತನನ್ನು ಗುಂಡಿಕ್ಕಿ ಕೊಂದಿದ್ದರು. ಸರ್ರೆಯಲ್ಲಿ ನಡೆದ ನಿಜ್ಜರ್ (45) ಹತ್ಯೆಯಲ್ಲಿ 'ಭಾರತ ಸರ್ಕಾರದ ಏಜೆಂಟ್​' ಭಾಗಿಯಾಗಿದ್ದಾರೆ ಎಂದು ಕೆನಡಾ ಪ್ರಧಾನಿ ಟ್ರೂಡೊ ಆರೋಪಿದ್ದಾರೆ.

ಇದನ್ನೂ ಓದಿ: ಭಾರತ-ಕೆನಡಾ ವಿವಾದ ತೀವ್ರ ಕಳವಳಕಾರಿ... ತನಿಖೆ ಮುಂದುವರಿಯುವುದು ನಿರ್ಣಾಯಕ: ಆಂಟನಿ ಬ್ಲಿಂಕನ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.