ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಹತ್ಯೆಗೆ ಸಂಬಂಧಿಸಿದ ದಾಖಲೆಗಳ ಹೊಸ ಕಡತಗಳನ್ನ ಅಮೆರಿಕ ಸರ್ಕಾರ ಬಿಡುಗಡೆ ಮಾಡಿದೆ. 1992 ರಲ್ಲಿ ಕಾಂಗ್ರೆಸ್ ಅಂಗೀಕರಿಸಿದ ಶಾಸನಕ್ಕೆ ಒಳಪಟ್ಟು ಹೊಸ ಮಾಹಿತಿಗಳನ್ನು ಒಳಗೊಂಡಿರುವ 13,000 ಕ್ಕೂ ಹೆಚ್ಚು ದಾಖಲೆಗಳನ್ನು ನ್ಯಾಷನಲ್ ಆರ್ಕೈವ್ಸ್ ಪೋಸ್ಟ್ ಮಾಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಫೆಡರಲ್ ಏಜೆನ್ಸಿಯ ಪ್ರಕಾರ ಜಾನ್ ಎಫ್ ಕೆನಡಿ ಹತ್ಯೆಯ ರೆಕಾರ್ಡ್ಸ್ ಕಲೆಕ್ಷನ್‌ನಲ್ಲಿ 97 ಪ್ರತಿಶತದಷ್ಟು ದಾಖಲೆಗಳು ಲಭ್ಯವಿವೆ ಎಂದು ಗುರುವಾರ ಬಿಡುಗಡೆಯಾದ ದಾಖಲೆಗಳು ಹೇಳುತ್ತಿವೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಬಿಡುಗಡೆ ಮಾಡಿರುವ ಜ್ಞಾಪಕ ಪತ್ರದಲ್ಲಿ, ಹತ್ಯೆಗೆ ಸಂಬಂಧಿಸಿದ ದಾಖಲೆಗಳಲ್ಲಿನ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.
ಅಧ್ಯಕ್ಷ ಕೆನಡಿಯವರ ಹತ್ಯೆ ಇಡಿ ಜಗತ್ತನ್ನು ತಲ್ಲಣಗೊಳಿಸಿದ ಸುದ್ದಿಯಾಗಿತ್ತು. 1963ರಲ್ಲಿ ನಡೆದ ಈ ಹತ್ಯೆ ಇಂದಿನವರೆಗೂ ಕಾಡುತ್ತಿದೆ. ಇದು ಅಮೆರಿಕ ಇತಿಹಾಸದಲ್ಲಿ ಭಯಾನಕ ಅಧ್ಯಯನವಾಗಿತ್ತು ಹಾಗೂ ಅಮೆರಿಕನ್ನರ ನೆನಪುಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ ಎಂದು ಎಂದು ಜೋ ಬೈಡನ್ ಹೇಳಿದ್ದಾರೆ.
ಕೋವಿಡ್ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಬೈಡನ್ ಆಡಳಿತ ಈ ದಾಖಲೆಗಳನ್ನು ಬಿಡುಗಡೆಯನ್ನು ಮುಂದೂಡಿಕೆ ಮಾಡಿತ್ತು. ಟೆಕ್ಸಾಸ್‌ನ ಡೌನ್‌ಟೌನ್ ಡಲ್ಲಾಸ್ ಮೂಲಕ ಓಪನ್ - ಟಾಪ್ ಕನ್ವರ್ಟಿಬಲ್‌ಗೆ ಆಗಿನ ಅಮೆರಿಕದ 35 ನೇ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರನ್ನು ನವೆಂಬರ್ 22, 1963 ರಂದು ಹತ್ಯೆ ಮಾಡಲಾಗಿತ್ತು. ಇದು ಇಡೀ ಜಗತ್ತನ್ನೇ ಅಚ್ಚರಿ ಹಾಗೂ ಭೀಭತ್ಸಕ್ಕೆ ದೂಡಿತ್ತು.
ಇದನ್ನುಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನಕ್ಕೆ ಭಾರತ ಸನ್ನಿಹಿತ.. ಐದರಲ್ಲಿ ಮೂರು ರಾಷ್ಟ್ರಗಳಿಂದ ಬೆಂಬಲ