ETV Bharat / international

ಅಮೆರಿಕ ಸಂಸತ್​ ಮೇಲೆ ದಾಳಿ ಕೇಸ್: ತಪ್ಪಿತಸ್ಥ ಮಾಜಿ ಪೊಲೀಸ್​ ಅಧಿಕಾರಿಗೆ 11 ವರ್ಷ ಜೈಲು ಶಿಕ್ಷೆ - ಈಟಿವಿ ಭಾರತ ಕನ್ನಡ

ಅಮೆರಿಕ ಸಂಸತ್​ ಮೇಲಿನ ದಾಳಿ ಪ್ರಕರಣದಲ್ಲಿ ಮಾಜಿ ಪೊಲೀಸ್​ ಅಧಿಕಾರಿಯೊಬ್ಬರಿಗೆ ಅಲ್ಲಿನ ಕೋರ್ಟ್​ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಅಮೆರಿಕ ಸಂಸತ್​ ಮೇಲೆ ದಾಳಿ ಕೇಸ್
ಅಮೆರಿಕ ಸಂಸತ್​ ಮೇಲೆ ದಾಳಿ ಕೇಸ್
author img

By ETV Bharat Karnataka Team

Published : Dec 9, 2023, 9:50 AM IST

ಕ್ಯಾಲಿಫೋರ್ನಿಯಾ(ಅಮೆರಿಕ) : ಅಮೆರಿಕದ ಕ್ಯಾಪಿಟಲ್​ (ಸಂಸತ್ತು) ಮೇಲೆ 2021 ರ ಜನವರಿ 6 ರಂದು ನಡೆದ ದಾಳಿಯ ಪ್ರಕರಣದಲ್ಲಿ ಕ್ಯಾಲಿಫೋರ್ನಿಯಾದ ಮಾಜಿ ಪೊಲೀಸ್​ ಅಧಿಕಾರಿಗೆ 11 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಂಸತ್​ ಮೇಲಿನ ದಾಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಈತನಿಗೆ ಮರಣದಂಡನೆ ವಿಧಿಸಬೇಕು ಎಂದ ಆಗ್ರಹ ಕೇಳಿಬಂದಿತ್ತು.

ಸಂಸತ್​ ಮೇಲಿನ ದಾಳಿಯಲ್ಲಿ ಪಾತ್ರ ಇರುವ ಮಾಜಿ ಅಧಿಕಾರಿ 59 ವರ್ಷದ ಅಲನ್ ಹೊಸ್ಟೆಟ್ಟರ್​ಗೆ ಜಿಲ್ಲಾ ನ್ಯಾಯಾಧೀಶ ರಾಯ್ಸ್ ಸಿ ಲ್ಯಾಂಬರ್ತ್ ಅವರಿಂದ ಅವರು ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಅಲನ್​ ಅವರು ದಾಳಿಯ ವೇಳೆ ಮಾರಣಾಂತಿಕ ಶಸ್ತ್ರಾಸ್ತ್ರಗಳು ಮತ್ತು ನಿರ್ಬಂಧಿತ ಕಟ್ಟಡದ ಅಥವಾ ಮೈದಾನಕ್ಕೆ ಅಕ್ರಮ ಪ್ರವೇಶ, ಸಂಸತ್​ ಒಳಗೆ ನುಗ್ಗಿ ದಾಳಿ ನಡೆಸಿದ ಆರೋಪಗಳಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿದೆ. ಮಾರಣಾಂತಿಕ ಆಯುಧಗಳನ್ನು ಹೊಂದಿರುವ ಬಗ್ಗೆಯೂ ಪುರಾವೆಗಳಿವೆ ಎಂದು ಕೋರ್ಟ್​ ಹೇಳಿದೆ.

ಚುನಾವಣೆಯಲ್ಲೂ ಟ್ರಂಪ್​ ಪರ ಪಿತೂರಿ: ಸಂಸತ್​ ಮೇಲಿನ ದಾಳಿಗೂ ಮೊದಲು ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಅಲನ್​ ಹೊಸ್ಟೆಟ್ಟರ್​ 2020 ರ ಅಧ್ಯಕ್ಷೀಯ ಚುನಾವಣೆಯಲ್ಲೂ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಪರವಾಗಿ ಪಿತೂರಿ ನಡೆಸಿದ ಆರೋಪಗಳೂ ಇವೆ. ಇದು ನ್ಯಾಯಾಂಗ ತನಿಖೆಯ ವಿಚಾರಣೆಯಲ್ಲಿವೆ.

ಕ್ಯಾಪಿಟಲ್ ಗಲಭೆಯ ಹಿಂದಿನ ದಿನವಾದ ಜನವರಿ 5 ರಂದು ಹೊಸ್ಟೆಟ್ಟರ್​ ಅವರು ವಾಷಿಂಗ್ಟನ್ ಡಿಸಿಯಲ್ಲಿ ಹಿಂಸಾತ್ಮಕ ಕೃತ್ಯಗಳಿಗೆ ಪ್ರಚೋದನೆ ನೀಡುವ ಭಾಷಣ ಮಾಡಿದ್ದರು. ಟ್ರಂಪ್ ಪರ ರ‍್ಯಾಲಿಗಳಲ್ಲೂ ಸಹ ಇದರ ಪ್ರಾಯೋಜಕತ್ವ ವಹಿಸಿದ್ದರು. ಮರುದಿನ, ದಾಳಿಗಾಗಿ ಗೇರ್, ಹೆಲ್ಮೆಟ್, ಹ್ಯಾಚ್‌ಗಳು, ಚಾಕುಗಳು, ಸ್ಟನ್ ಬ್ಯಾಟನ್‌ಗಳು, ಪೆಪ್ಪರ್ ಸ್ಪ್ರೇ ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ಸಂಸತ್ತಿಗೆ ಬಂದಿದ್ದಾರೆ ಎಂದು ಕೋರ್ಟ್​ ಗುರುತಿಸಿದೆ.

ಚುನಾವಣಾ ಪ್ರಕ್ರಿಯೆಗೆ ಅಡ್ಡಿ: ಬಳಿಕ ಟ್ರಂಪ್​ ಪರ ಬೆಂಬಲಿಗರ ಸಮೇತ ಮಾರಕ ಶಸ್ತ್ರಾಸ್ತ್ರಗಳಿಂದ ಸಂಸತ್​ ಮೇಲೆ ದಾಳಿ ಮಾಡಿದ್ದರು. ಬಳಿಕ ಅಲನ್​ ಅವರನ್ನು ಜೂನ್ 10, 2021 ರಂದು ಕ್ಯಾಲಿಫೋರ್ನಿಯಾದಲ್ಲಿ ಎಫ್​ಬಿಐ ಬಂಧಿಸಿತ್ತು. ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಸಂಚು ರೂಪಿಸಿದ್ದಕ್ಕಾಗಿ ಈತನ ನಾಲ್ವರು ಸಹಚರರಿಗೆ ಶಿಕ್ಷೆ ವಿಧಿಸಲಾಗಿದೆ. ಐದನೇ ಸಹಚರ ರಸೆಲ್ ಟೇಲರ್ ಪಿತೂರಿ ನಡೆಸಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪರ ಬೆಂಬಲಿಗರು ‌ಜ.6 ರಂದು ಕ್ಯಾಪಿಟಲ್‌ ಮೇಲೆ ದಾಳಿ ನಡೆಸಿ, ಅಲ್ಲಿ ನಡೆಯುತ್ತಿದ್ದ ಎಲೆಕ್ಟೋರಲ್ ಕಾಲೇಜ್ ಮತ ಎಣಿಕೆಗೆ ಅಡ್ಡಿ‌ಯುಂಟು ಮಾಡಿದ್ದರು. ಜತೆಗೆ, ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಐವರ ಸಾವಿಗೂ ಕಾರಣರಾಗಿದ್ದರು. ಇದು ದೇಶದ ರಾಜಕೀಯ ಇತಿಹಾಸದಲ್ಲಿ ಕರಾಳ ಘಟನೆಯಾಗಿದೆ.

ಇದನ್ನೂ ಓದಿ: ಕ್ಯಾಪಿಟಲ್ ಗಲಭೆ ತನಿಖೆಗೆ ಸಹಕರಿಸುವಂತೆ ಇವಾಂಕಾ ಟ್ರಂಪ್​ಗೆ ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.