ETV Bharat / international

ವರ್ಷಾಂತ್ಯಕ್ಕೆ ಬೆಂಗಳೂರಿನಿಂದ ಸ್ಯಾನ್​ ಫ್ರಾನ್ಸಿಸ್ಕೋಗೆ ವಿಮಾನಯಾನ ಆರಂಭ

author img

By

Published : Jun 20, 2022, 7:32 PM IST

ಕೊರೊನಾ ಕಾರಣಗಳಿಂದ ನಿಲ್ಲಿಸಲಾಗಿದ್ದ ವಿಮಾನಯಾನ ಸೇವೆಯನ್ನು ಈ ವರ್ಷಾಂತ್ಯದಿಂದ ಮರು ಆರಂಭಿಸಲಾಗುವುದು ಎಂದು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.

ವರ್ಷಾಂತ್ಯಕ್ಕೆ ಬೆಂಗಳೂರಿನಿಂದ ಸ್ಯಾನ್​ ಫ್ರಾನ್ಸಿಸ್ಕೋಗೆ ವಿಮಾನಯಾನ ಆರಂಭ
ವರ್ಷಾಂತ್ಯಕ್ಕೆ ಬೆಂಗಳೂರಿನಿಂದ ಸ್ಯಾನ್​ ಫ್ರಾನ್ಸಿಸ್ಕೋಗೆ ವಿಮಾನಯಾನ ಆರಂಭ

ಬೆಂಗಳೂರು: ಕೊರೊನಾ ಕಾರಣದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಕಡಿತಗೊಂಡಿತ್ತು. ಇದೀಗ ಸಾಂಕ್ರಾಮಿಕ ತಗ್ಗಿದ ಕಾರಣ ಬೆಂಗಳೂರಿನಿಂದ ಹಲವು ದೇಶಗಳಿಗೆ ವಿಮಾನಯಾನ ಸೇವೆ ಮರುಸ್ಥಾಪಿಸಲಾಗಿದೆ. ಅದರಂತೆ ವರ್ಷಾಂತ್ಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋಗೆ ಯುನೈಟೆಡ್​​ ಏರ್​ಲೈನ್ಸ್​ ಸಂಸ್ಥೆಯು ವಿಮಾನಯಾನ ಶುರು ಮಾಡಲಿದೆ.

ಯುನೈಟೆಡ್ ಏರ್‌ಲೈನ್ಸ್ 2022 ರ ಕೊನೆಯಲ್ಲಿ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ದೈನಂದಿನ ವಿಮಾನಯಾನವನ್ನು ಪ್ರಾರಂಭಿಸಲಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿಕೆಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾದ ರಾಷ್ಟ್ರೀಯ ವಾಹಕ ಕ್ವಾಂಟಾಸ್ ಕೂಡ ಸೆಪ್ಟೆಂಬರ್ 14 ರಿಂದ ಸಿಡ್ನಿಗೆ ವಾರಕ್ಕೆ ನಾಲ್ಕು ವಿಮಾನಗಳನ್ನು ಪ್ರಾರಂಭಿಸಲಿದೆ. ಟೆಲ್ ಅವಿವ್‌ನ (ಏರ್ ಇಂಡಿಯಾ) ಎರಡು ವಿಮಾನಗಳು ವಾರಕ್ಕೆ ಎರಡು ಬಾರಿ, ಅಮೆರಿಕನ್ ಏರ್‌ಲೈನ್ಸ್​ನ ಸಿಯಾಟಲ್‌ ದೈನಂದಿನ ವಿಮಾನಗಳನ್ನು ಸಹ ಮುಂದಿನ ದಿನಗಳಲ್ಲಿ ಯೋಜಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಕೆಲವು ತಿಂಗಳ ಮೊದಲು ಪ್ರಾರಂಭಿಸಲಾದ ಈ ಹೊಸ ಮಾರ್ಗಗಳನ್ನು ಈಗಾಗಲೇ ಮರು ಸಂಪರ್ಕಿಸಲಾಗಿದೆ.

ಜಪಾನ್ ಏರ್‌ಲೈನ್ಸ್ ವಾರಕ್ಕೆ ಮೂರು ಬಾರಿ ಟೋಕಿಯೊದ ನರಿಟಾಗೆ ಸಂಚಾರ ನಡೆಸಲಿದೆ. ಈ ವರ್ಷದ ಆಗಸ್ಟ್‌ನಿಂದ ಇದು ಜಾರಿಗೆ ಬರಲಿದೆ. ಬೆಂಗಳೂರು- ಆಮ್‌ಸ್ಟರ್‌ಡ್ಯಾಮ್ ಮಾರ್ಗದಲ್ಲಿ ಪ್ರಸ್ತುತ ವಾರಕ್ಕೆ ಮೂರು ವಿಮಾನಗಳು ಸಂಚರಿಸುತ್ತಿವೆ. ಮುಂದಿನ ತಿಂಗಳಿನಿಂದ ಇದು ನಾಲ್ಕಕ್ಕೆ ಹೆಚ್ಚಲಿದೆ.

ಕೊರೊನಾ ತಗ್ಗಿದ ಕಾರಣ ಕೆಂಪೇಗೌಡ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನಯಾನವನ್ನು ಹೆಚ್ಚಳ ಮಾಡಿದೆ. ಮೇ ತಿಂಗಳಿನಿಂದ 23 ದೇಶಗಳಿಗೆ ಸೇವೆಯನ್ನು ಮರು ಸ್ಥಾಪಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಲಕ ರಹಿತ ಮೆಟ್ರೋ ರೈಲು ಚಾಲನೆಗೆ ಬಿ.ಎಂ.ಆರ್.ಸಿ.ಎಲ್ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.