ETV Bharat / international

ರಷ್ಯಾ- ಉಕ್ರೇನ್​ ಯುದ್ಧ: ಪುಟಿನ್​ ಜೊತೆ ಮೋದಿ ಶಾಂತಿ ಮಾತುಕತೆ ಕರೆಗೆ ಝೆಲೆನ್ಸ್ಕಿ ಹೇಳಿದ್ದೇನು?

ಉಕ್ರೇನ್​ ಯಾವಾಗಲೂ ಸಂವಾದದ ಮೂಲಕ ಶಾಂತಿಯುತ ಇತ್ಯರ್ಥಕ್ಕೆ ಬದ್ಧವಾಗಿದೆ. ಇದಲ್ಲದೆ ಯುಎನ್​ ಜನರಲ್​ ಅಸೆಂಬ್ಲಿಯ ಅಧಿವೇಶನದಲ್ಲಿ ನನ್ನ ಭಾಷಣದ ಸಮಯದಲ್ಲಿ ಶಾಂತಿಗಾಗಿ ನಮ್ಮ ಸ್ಪಷ್ಟ ಸೂತ್ರವನ್ನು ವಿವರಿಸಿದ್ದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

President of Ukraine Volodymyr Zelensky
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
author img

By

Published : Oct 5, 2022, 1:58 PM IST

ಕೈವ್ (ಉಕ್ರೇನ್): ಪ್ರಧಾನಿ ನರೇಂದ್ರ ಮೋದಿಯವರ ಶಾಂತಿ ಮಾತುಕತೆಯ ಕರೆಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ಮಂಗಳವಾರ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಸಂಭಾಷಣೆ ನಡೆಸಿ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಉಪಯೋಗಿಸಲ್ಪಡುವ ಪರಮಾಣುವಿನಿಂದ ಪರಿಸರಕ್ಕೆ ಅಪಾಯಯವಾಗುವ ಸಾಧ್ಯತೆಯಿದೆ ಹಾಗೂ ಅವುಗಳಿಂದ ಭವಿಷ್ಯದಲ್ಲಿ ದುರಂತ ಪರಿಣಾಮಗಳನ್ನು ಎದುರಿಸಬೇಕಾದೀತು. ಹಾಗಾಗಿ ಶಾಂತಿ ಮಾತುಕತೆ ನಡೆಸಿ ಯುದ್ಧಕ್ಕೆ ಅಂತ್ಯ ಹಾಡುವಂತೆ ಮೋದಿ ಕರೆ ನೀಡಿದ್ದರು.

ಸಂಘರ್ಷಕ್ಕೆ ಯಾವುದೇ ಮಿಲಿಟರಿ ಪರಿಹಾರವಿಲ್ಲ ಎಂದು ಪ್ರಧಾನಿ ತಮ್ಮ ದೃಢವಾದ ನಿಲುವನ್ನು ವ್ಯಕ್ತಪಡಿಸಿದ್ದರು. ಎರಡು ದೇಶಗಳ ನಡುವೆ ಶಾಂತಿಯ ಸ್ಥಾಪನೆಗಾಗಿ ಕೊಡುಗೆ ನೀಡಲು ಭಾರತವು ಸಿದ್ಧವಾಗಿದೆ. ಯುದ್ಧವನ್ನು ನಿಲ್ಲಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯವಿದೆ ಎಂದು ಹೇಳಿದ್ದರು.

ಉಕ್ರೇನ್‌ನ ನಾಲ್ಕು ರಷ್ಯಾದ ಆಕ್ರಮಿತ ಪ್ರದೇಶಗಳಲ್ಲಿನ ಜನಾಭಿಪ್ರಾಯ ಸಂಗ್ರಹಣೆಗೆ ಪ್ರತಿಕ್ರಿಯಿಸಿದ ಝೆಲೆನ್ಸ್ಕಿ, ಲುಹಾನ್ಸ್ಕ್, ಡೊನೆಟ್ಸ್ಕ್, ಜಪೋರಿಝಿಯಾ ಮತ್ತು ಖೆರ್ಸನ್, ಉಕ್ರೇನಿಯನ್ ಪ್ರದೇಶಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವ ಗುರಿಯೊಂದಿಗೆ ಯುದ್ಧ ಪ್ರಾರಂಭಿಸಿದವರು ರಷ್ಯಾದವರು. ಯುದ್ಧ ಪ್ರಾರಂಭಿಸಿರುವ ಅವರೇ ಯುದ್ಧವನ್ನು ನಿಲ್ಲಿಸಲಿ ಎಂದಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ರಷ್ಯಾದ ಒಕ್ಕೂಟದ ಪ್ರಸ್ತುತ ಅಧ್ಯಕ್ಷರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಝೆಲೆನ್ಸ್ಕಿ ಒತ್ತಿ ಹೇಳಿದರು. ಮತ್ತು ಉಕ್ರೇನ್​ ಯಾವಾಗಲೂ ಸಂವಾದದ ಮೂಲಕ ಶಾಂತಿಯುತ ಇತ್ಯರ್ಥಕ್ಕೆ ಬದ್ಧವಾಗಿದೆ. ಇದಲ್ಲದೆ ಯುಎನ್​ ಜನರಲ್​ ಅಸೆಂಬ್ಲಿಯ ಅಧಿವೇಶನದಲ್ಲಿ ನನ್ನ ಭಾಷಣದ ಸಮಯದಲ್ಲಿ ಶಾಂತಿಗಾಗಿ ನಮ್ಮ ಸ್ಪಷ್ಟ ಸೂತ್ರವನ್ನು ವಿವರಿಸಿದೆ. ಅದನ್ನು ಸಾಧಿಸಲು ನಮ್ಮ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ರಷ್ಯಾ ಯಾವುದೇ ಮಾತುಕತೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತದ ಬೆಂಬಲಕ್ಕಾಗಿ ಝೆಲೆನ್ಸ್ಕಿ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದರು. ಮತ್ತು ಇದು ಯುದ್ಧದ ಸಮಯವಲ್ಲ ಎಂಬ ಭಾರತೀಯ ನಾಯಕನ ಇತ್ತೀಚಿನ ಹೇಳಿಕೆಯ ಮಹತ್ವವನ್ನು ಒತ್ತಿ ಹೇಳಿದರು.

ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮಾತುಕತೆ: ಶಾಂತಿ ಸ್ಥಾಪನೆಗೆ ಕೊಡುಗೆ ನೀಡಲು ಭಾರತ ಸಿದ್ಧ ಎಂದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.