ETV Bharat / international

ವಿಶ್ವ ಆರ್ಥಿಕತೆಯಲ್ಲಿ ಬ್ರಿಟನ್​ ಹಿಂದಿಕ್ಕಿದ ಭಾರತ.. 5ನೇ ಸ್ಥಾನಕ್ಕೆ ಜಿಗಿದ ಹಿಂದೂಸ್ತಾನ್​​

ಜಾಗತಿಕ ಆರ್ಥಿಕತೆಯಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಇಂಗ್ಲೆಂಡ್​​ ಹಿಂದಿಕ್ಕಿರುವ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿದೆ.

UK slips behind India
UK slips behind India
author img

By

Published : Sep 3, 2022, 9:03 AM IST

ಲಂಡನ್​​: ವಿಶ್ವದ ಆರ್ಥಿಕತೆಯಲ್ಲಿ ಭಾರತ ಮಹತ್ವದ ಸಾಧನೆ ಮಾಡಿದ್ದು, ಅಭಿವೃದ್ಧಿ ಹೊಂದಿರುವ ಬ್ರಿಟನ್​ ಹಿಂದಿಕ್ಕಿ ಇದೀಗ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ ಎಂದು ತಿಳಿದು ಬಂದಿದೆ. ಬ್ಲೂಮ್​​ಬರ್ಗ್​ ನೀಡಿರುವ ಮಾಹಿತಿ ಪ್ರಕಾರ, ಬ್ರಿಟನ್​​ ವಿಶ್ವದ ಆರ್ಥಿಕತೆಯಲ್ಲಿ ಭಾರತಕ್ಕಿಂತಲೂ ಹಿಂದೆ ಬಿದ್ದಿದ್ದು, 6ನೇ ಸ್ಥಾನಕ್ಕೆ ಕುಸಿತಕಂಡಿದೆ ಎಂದು ವರದಿಯಾಗಿದೆ.

ಬ್ರಿಟನ್​ನಲ್ಲಿ ಪ್ರಧಾನಿ ಹುದ್ದೆಗೆ ಚುನಾವಣೆ ಘೋಷಣೆಯಾಗಿರುವ ಕಾರಣ, ಸದ್ಯ ಅತಿ ಹೆಚ್ಚಿನ ಜೀವನ ವೆಚ್ಚ ಎದುರಿಸುತ್ತಿದೆ. ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಹಣದುಬ್ಬರ ಸಮಸ್ಯೆ ಎದುರಾಗಿದೆ. ಹೀಗಾಗಿ, ವಿಶ್ವದ ಆರ್ಥಿಕತೆಯಲ್ಲಿ ದೊಡ್ಡ ಹೊಡೆತ ಬಿದ್ದಿದೆ. 2021ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಹಿಂದೂಸ್ತಾನ್​ ಬ್ರಿಟನ್​​ ಹಿಂದಿಕ್ಕಿದೆ. 5ನೇ ಸ್ಥಾನಕ್ಕೆ ಲಗ್ಗೆ ಹಾಕಿರುವ ಭಾರತ, ಸದ್ಯ ವಿಶ್ವದ ಅತಿದೊಡ್ಡ 5ನೇ ಆರ್ಥಿಕತೆ ದೇಶವಾಗಿ ಹೊರಹೊಮ್ಮಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿ-ಅಂಶಗಳ ಪ್ರಕಾರ 2022ರಲ್ಲೂ ಭಾರತ ಮೊದಲ ತ್ರೈಮಾಸಿಕದಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎನ್ನಲಾಗ್ತಿದೆ.

ವಿಶ್ವದ ಆರ್ಥಿಕತೆಯಲ್ಲಿ ಸದ್ಯ ಅಮೆರಿಕ, ಚೀನಾ, ಜಪಾನ್​ ಮತ್ತು ಜರ್ಮನ್​ ಮುಂದೆ ಇವೆ. ಕಳೆದ ಒಂದು ದಶಕದ ಹಿಂದೆ ಭಾರತ ಈ ಸಾಲಿನಲ್ಲಿ 11ನೇ ಸ್ಥಾನದಲ್ಲಿತ್ತು. ಇಂಗ್ಲೆಂಡ್​​ 5ನೇ ಸ್ಥಾನದಲ್ಲಿತ್ತು. ಕಳೆದ ಒಂದು ದಶಕದಲ್ಲಿ ಭಾರತ ಗಮನಾರ್ಹ ಚೇತರಿಕೆ ಕಂಡಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಲಂಡನ್​ ಹಣದುಬ್ಬರ ಸಮಸ್ಯೆ ಎದುರಿಸುತ್ತಿದ್ದು, ಬ್ಯಾಂಕ್​ ಆಫ್​ ಇಂಗ್ಲೆಂಡ್​​ ಸಂಕಷ್ಟಕ್ಕೊಳಗಾಗಿದೆ. ಜೊತೆಗೆ ಭಾರತೀಯ ಕರೆನ್ಸಿ ವಿರುದ್ಧ ಇಂಗ್ಲೆಂಡ್​​ನ ಪೌಂಡ್​ ಶೇ. 8ರಷ್ಟು ಕುಸಿತಗೊಂಡಿದೆ.

ಇದನ್ನೂ ಓದಿ: ಭಾವನಾತ್ಮಕ ಸಂದೇಶದೊಂದಿಗೆ ಪ್ರಚಾರ ಕೊನೆಗೊಳಿಸಿದ ರಿಷಿ ಸುನಕ್

ಡಾಲರ್​ ಮೌಲ್ಯದ ದರದಲ್ಲಿ ಲೆಕ್ಕ ಹಾಕಿದಾಗ ಭಾರತೀಯ ಆರ್ಥಿಕತೆಯ ಗಾತ್ರ 854.7 ಬಿಲಿಯನ್ ಡಾಲರ್‌ ಆಗಿದ್ದರೆ ಯುಕೆ ಆರ್ಥಿಕತೆ 816 ಬಿಲಿಯನ್ ಡಾಲರ್‌ ಆಗಿದೆ ಎಂದು ವರದಿಯಲ್ಲಿ ಪ್ರಕಟಗೊಂಡಿದೆ.

ಇಂಗ್ಲೆಂಡ್​​ನಲ್ಲಿ ಬೋರಿಸ್ ಜಾನ್ಸನ್​​​​ ಉತ್ತರಾಧಿಕಾರಿ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ನಾಡಿದ್ದು ಫಲಿತಾಂಶ ಬಹಿರಂಗಗೊಳ್ಳಲಿದೆ. ಈ ರೇಸ್​​​ನಲ್ಲಿ ರಿಷಿ ಸುನಕ್​ ಹಾಗೂ ಲಿಜ್​ ಟ್ರಸ್​​ ಇದ್ದಾರೆ. ಇದೀಗ ಬಿಡುಗಡೆಯಾಗಿರುವ ವರದಿ ಹೊಸ ಪ್ರಧಾನಿಗೆ ದೊಡ್ಡ ತಲೆನೋವು ಆಗಿ ಪರಿಣಮಿಸುವ ಸಾಧ್ಯತೆ ಸಹ ದಟ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.