ಲಂಡನ್ (ಬ್ರಿಟನ್): ಕೋವಿಡ್ 19 ಸೋಂಕಿನ ರೂಪಾಂತರಿಯಾದ ಓಮಿಕ್ರಾನ್‌ಗೆ ಬ್ರಿಟನ್ ಲಸಿಕೆ ಕಂಡು ಹಿಡಿದಿದೆ. ಈ ಮೂಲಕ ಓಮಿಕ್ರಾನ್‌ಗೆ ಲಸಿಕೆ ಅಧಿಕೃತಗೊಳಿಸಿದ ಜಗತ್ತಿನ ಮೊದಲ ದೇಶವಾಗಿದೆ. ಇತ್ತ, ಮುಂದಿನ ಆರು ತಿಂಗಳಲ್ಲಿ ಭಾರತ ಕೂಡ ಓಮಿಕ್ರಾನ್‌ನ ಬಿಎ-5 ಉಪ ವೇರಿಯಂಟ್ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವ ನಿರೀಕ್ಷೆ ಇದೆ. ಈ ಮಾಹಿತಿಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ನೀಡಿದ್ದಾರೆ.
ಬ್ರಿಟನ್ ಔಷಧಿ ನಿಯಂತ್ರಕ ಘಟಕವು ಈ ಹೊಸ ಮೊಡೆರ್ನಾ ಲಸಿಕೆಯನ್ನು ಅನುಮೋದಿಸಿದೆ. ಈ ಲಸಿಕೆಯು ಓಮಿಕ್ರಾನ್ ರೂಪಾಂತರ ಹಾಗೂ ಮೂಲ ಸೋಂಕಿನ ವಿರುದ್ಧವೂ ಕೆಲಸ ಮಾಡುತ್ತದೆ. ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿಯಾಗಿದ್ದು, ಪ್ರಬಲ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂದು ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಜೂನ್ ರೈನ್ ತಿಳಿಸಿದ್ದಾರೆ.
ಈಗಾಗಲೇ ಕಂಡು ಹಿಡಿದಿರುವ ಲಸಿಕೆಗಳು ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದನ್ನು ತಗ್ಗಿಸುತ್ತಿವೆ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹೊಸ ಲಸಿಕೆ ಕೂಡ ಎರಡು ಓಮಿಕ್ರಾನ್ ರೂಪಾಂತರಿಗಳ ವಿರುದ್ಧ ಉತ್ತಮ ಕೆಲಸ ಮಾಡುತ್ತಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: 75ನೇ ಸ್ವಾತಂತ್ರ್ಯದಂದು ಮಡಗಾಸ್ಕರ್‌ಗೆ 15,000 ಬೈಸಿಕಲ್‌ಗಳನ್ನು ಕೊಡುಗೆ ನೀಡಿದ ಭಾರತ