ETV Bharat / international

ಡೊಕ್ಸುರಿ ಚಂಡಮಾರುತದ ಎಫೆಕ್ಟ್​ನಿಂದ ಫಿಲಿಪ್ಪಿನ್ಸ್​​  ನಂತರ, ಚೀನಾದಲ್ಲೂ ಭೂಕುಸಿತ..!

author img

By

Published : Jul 29, 2023, 3:52 PM IST

ಡೋಕ್ಸುರಿ ಚಂಡಮಾರುತವು ಶುಕ್ರವಾರ ಫುಜಿಯಾನ್‌ನ ಪೂರ್ವ ಪ್ರಾಂತ್ಯಕ್ಕೆ ಅಪ್ಪಳಿಸಿದೆ. ತೈವಾನ್‌ನ ಕೆಲವು ಭಾಗಗಳಿಗೆ, ವಿಶೇಷವಾಗಿ ಪೆಂಗು ದ್ವೀಪ ಸಮೂಹಕ್ಕೆ ಚಂಡಮಾರುತದ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಇದನ್ನು ಪೆಸ್ಕಡೋರ್ಸ್ ಎಂದೂ ಕರೆಯುತ್ತಾರೆ. ಚಂಡಮಾರುತದಿಂದ ಫಿಲಿಪೈನ್ಸ್‌ ಭಾರಿ ಭೂಕುಸಿತದ ನಂತರ, ಚೀನಾದಲ್ಲಿಯೂ ಅದೇ ರೀತಿ ಭೂಕುಸಿತ ಉಂಟಾಗಿದೆ.

Typhoon Doksuri makes landfall in China
ಡೊಕ್ಸುರಿ ಚಂಡಮಾರುತದ ಎಫೆಕ್ಟ್​ನಿಂದ ಫಿಲಿಪೈನ್ಸ್‌ ನಂತರ, ಚೀನಾದಲ್ಲೂ ಭೂಕುಸಿತ..!

ಬೀಜಿಂಗ್ (ಚೀನಾ): ಫಿಲಿಪೈನ್ಸ್‌ನಲ್ಲಿ ಭಾರಿ ಭೂಕುಸಿತ ಉಂಟು ಮಾಡಿದ್ದ ಚಂಡಮಾರುತ ಡೊಕ್ಸುರಿಯು, ಚೀನಾದಲ್ಲಿ ಭೂಕುಸಿತಕ್ಕೂ ಕಾರಣವಾಗಿದೆ. ಶುಕ್ರವಾರ ಬೆಳಗ್ಗೆ ತೈವಾನ್‌ನ ಕೆಲವು ಭಾಗಗಳಿಗೆ, ವಿಶೇಷವಾಗಿ ಪೆಂಗು ದ್ವೀಪ ಸಮೂಹಕ್ಕೆ ಚಂಡಮಾರುತದ ಗಾಳಿ ಸಹಿತ ಭಾರಿ ಮಳೆಯಾಗಿದೆ. ನಂತರ ಫುಜಿಯಾನ್‌ನ ಪೂರ್ವ ಪ್ರಾಂತ್ಯಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಇದನ್ನು ಪೆಸ್ಕಡೋರ್ಸ್ ಎಂದೂ ಕರೆಯುತ್ತಾರೆ. ಫಿಲಿಪ್ಪಿನ್ಸ್​​ನಲ್ಲಿ, ಲುಜಾನ್‌ನ ಮುಖ್ಯ ದ್ವೀಪದಾದ್ಯಂತ ಒಂದು ವಾರದ ಬಿರುಗಾಳಿಯ ಹವಾಮಾನದಿಂದ 39 ಸಾವುಗಳು ಸಂಭವಿಸಿವೆ. ಇದರಲ್ಲಿ 26 ಪ್ರಯಾಣಿಕರ ಹಡಗು ಮುಳುಗಿದ ಪರಿಣಾಮ ಸಾವನ್ನಪ್ಪಿದ್ದಾರೆ.

ಡೊಕ್ಸುರಿ ಚಂಡಮಾರುತಕ್ಕೆ 13 ಜನ ಬಲಿ: ಡೊಕ್ಸುರಿ ಚಂಡಮಾರುತದ ಆಕ್ರಮಣದಿಂದ ಕನಿಷ್ಠ 13 ಜನರು ಆರಂಭದಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಹೆಚ್ಚಾಗಿ ಭೂಕುಸಿತಗಳು, ಪ್ರವಾಹ ಮತ್ತು ಮರಗಳು ಧರೆಗುರುಳಿವೆ. ಇದರಿಂದ ಸಾವಿರಾರು ಜನರು ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ಪ್ರತಿಕ್ರಿಯೆ ಅಧಿಕಾರಿಗಳು ತಿಳಿಸಿದ್ದಾರೆ. 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಕಗಾಯಾನ್ ಪ್ರಾಂತ್ಯದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಾಲ್ವರು ಕೋಸ್ಟ್ ಗಾರ್ಡ್ ಸಿಬ್ಬಂದಿಯ ದೋಣಿ ಮಗುಚಿ ಬಿದ್ದಿದೆ ಎಂದು ವಿಪತ್ತು ಪ್ರತಿಕ್ರಿಯೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಚೀನಾದಲ್ಲಿ ಚಂಡಮಾರುತದ ಅಬ್ಬರ: ಚಂಡಮಾರುತದಿಂದ ದ್ವೀಪಸಮೂಹದ ದೇಶದಲ್ಲಿ ವ್ಯಾಪಕವಾದ ವಿದ್ಯುತ್ ಕಡಿತ ಮತ್ತು ಬೆಳೆ ಹಾನಿಯನ್ನು ಉಂಟುಮಾಡಿದೆ. ಚಂಡಮಾರುತದ ಅಬ್ಬರಕ್ಕೆ ತರಗತಿಗಳು ಮತ್ತು ಸಮುದ್ರ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪಠ್ಯ ಸಂದೇಶ ಮತ್ತು ಸೂಚನೆಗಳ ಮೂಲಕ ಚೀನಾ ತನ್ನ ಟೈಫೂನ್ (ಚಂಡಮಾರುತ) ಎದರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

4ಲಕ್ಷಕ್ಕೂ ಹೆಚ್ಚು ಜನರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ: ಫುಜಿಯಾನ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನೂರಾರು ಹಡಗುಗಳು ಬಂದರುಗಳಿಗೆ ಮರಳಿವೆ. ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ವ್ಯಾಪಾರಗಳು ಮತ್ತು ಬೇಸಿಗೆ ಶಾಲಾ ತರಗತಿಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ. ಕ್ವಾನ್ಝೌ (Quanzhou) ನಗರದಲ್ಲಿ ಕ್ರೀಡಾ ಕ್ರೀಡಾಂಗಣದ ಚಾವಣಿಯು ಭಾಗಶಃ ಹರಿದಿದೆ. ಆದರೆ, ಯಾರಿಗೂ ಕೂಡಾ ಗಾಯಗಳು ಆಗಿರುವ ಬಗ್ಗೆ ವರದಿಯಾಗಿಲ್ಲ. ಕರಾವಳಿಗೆ ಅಪ್ಪಳಿಸಿದ ನಂತರ, ಟೈಫೂನ್​ ಆಗ್ನೇಯ ಚೀನಾದ ಪರ್ವತದ ಒಳಭಾಗಕ್ಕೆ ಚಲಿಸುವಾಗ ಬಲವನ್ನು ಕಳೆದುಕೊಳ್ಳುತ್ತದೆ. ಆದರೂ ಅವು ಕೆಲವು ಪ್ರದೇಶಗಳಲ್ಲಿ ಪರಿಣಾಮ ಉಂಟು ಮಾಡಲಿದೆ. ಜೊತೆಗೆ ಭಾರಿ ಮಳೆ ಮುಂದುವರಿಯಲಿದೆ.

ಇದನ್ನೂ ಓದಿ: Philippines Boat Capsize: ಫಿಲಿಪ್ಪೀನ್ಸ್‌ನಲ್ಲಿ ದೋಣಿ ಮುಳುಗಡೆ; 30 ಮಂದಿ ಸಾವು, 40 ಪ್ರಯಾಣಿಕರ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.