ಲಾಸ್ ಏಂಜಲೀಸ್ (ಅಮೆರಿಕ) : ಜಗತ್ತಿನ ಅತ್ಯಂತ ಸಿರಿವಂತರಲ್ಲಿ ಒಬ್ಬರಾದ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಿದ ಬಳಿಕ ಪ್ರಸಿದ್ಧ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಒಂದಲ್ಲೊಂದು ರೀತಿಯ ಬದಲಾವಣೆ ಮಾಡುತ್ತಿದ್ದಾರೆ. ಇದೀಗ ಅಂತಹದೇ ಒಂದು ಹೊಸ ನಿರ್ಧಾರ ತೆಗೆದುಕೊಂಡಿದ್ದು, ಶೀಘ್ರದಲ್ಲೇ ಟ್ವಿಟ್ಟರ್ನ ಹೊಸ ಲೋಗೋ ಲಾಂಚ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಟ್ವಿಟರ್ ಲೋಗೋವನ್ನು ಬದಲಾಯಿಸುವ ಉದ್ದೇಶವನ್ನು ಪ್ರಕಟಿಸಿದ್ದಾರೆ. "ಶೀಘ್ರದಲ್ಲಿಯೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಮತ್ತು ನೀಲಿ ಹಕ್ಕಿಗಳಿಗೆ ಕ್ರಮೇಣವಾಗಿ ನಾವು ವಿದಾಯ ಹೇಳಬೇಕಿದೆ" ಎಂದು ತಿಳಿಸಿದ್ದಾರೆ.
-
And soon we shall bid adieu to the twitter brand and, gradually, all the birds
— Elon Musk (@elonmusk) July 23, 2023 " class="align-text-top noRightClick twitterSection" data="
">And soon we shall bid adieu to the twitter brand and, gradually, all the birds
— Elon Musk (@elonmusk) July 23, 2023And soon we shall bid adieu to the twitter brand and, gradually, all the birds
— Elon Musk (@elonmusk) July 23, 2023
ಇದರ ಜೊತೆಗೆ, ತಮ್ಮ ಕನಸಿನ 'ಎಕ್ಸ್' ಆ್ಯಪ್ ಬಗ್ಗೆಯೂ ಕೂಡ ಪ್ರಸ್ತಾಪ ಮಾಡಿದ್ದಾರೆ. ಈ ಆ್ಯಪ್ ಅನ್ನು ಜನರು ತಮ್ಮ ಅನಿಸಿಕೆಗಳನ್ನು ಜಗತ್ತಿನ ಜತೆ ಹಂಚಿಕೊಳ್ಳಲು ಇರುವ ವೇದಿಕೆಗಳಿಗಿಂತಲೂ ವಿಭಿನ್ನ ಹಾಗೂ ದೊಡ್ಡದು ಎಂದು ಅವರು ಬಣ್ಣಿಸಿದ್ದಾರೆ. "ಇಂದು ರಾತ್ರಿ ಸಾಕಷ್ಟು ಉತ್ತಮ ಎನ್ನಬಹುದಾದ X ಲೋಗೋ ದೊರೆತರೆ, ನಾಳೆಯೇ ನಾವು ಜಗತ್ತಿನಾದ್ಯಂತ ಲೈವ್ ಹೋಗಲಿದ್ದೇವೆ" ಎಂದು ಎಕ್ಸ್ ಆ್ಯಪ್ ಕಾರ್ಯಾಚರಣೆ ಶೀಘ್ರವೇ ನಡೆಸಲಿದೆ ಎಂಬುದಾಗಿ ಪ್ರಕಟಿಸಿದ್ದಾರೆ.
ಏಪ್ರಿಲ್‌ನಲ್ಲಿ ನಾಯಿಯ ಚಿತ್ರದೊಂದಿಗೆ ಟ್ವಿಟರ್‌ನ ಹಕ್ಕಿ ಚಿತ್ರವನ್ನು ತಾತ್ಕಾಲಿಕವಾಗಿ ಬದಲಿಸಲಾಗಿತ್ತು. ಬದಲಾದ ಲೋಗೋ ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿಯದ್ದಾಗಿತ್ತು. ವಿಚಿತ್ರವೆಂದರೆ, ಈ ಡಾಗಿ ಲೋಗೋ ಟ್ವಿಟ್ಟರ್ನ ವೆಬ್ನಲ್ಲಿ ಮಾತ್ರ ಗೋಚರಿಸುವಂತೆ ಮಾಡಲಾಗಿತ್ತು. ಹಾಗೆಯೇ, ಟ್ವಿಟ್ಟರ್ ತನ್ನ ಮುಖಪುಟದ ಲೋಗೋವನ್ನು ಡಾಗ್ ಚಿತ್ರವನ್ನಾಗಿ ಬದಲಾಯಿಸಿದ ನಂತರ ಡಾಗ್‌ಕಾಯಿನ್‌ನ ಕ್ರಿಪ್ಟೋಕರೆನ್ಸಿ ಮೌಲ್ಯ ಶೇ 30ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ : ವೆರಿಫೈ ಆಗಿ, ಸಾವಿರಾರು ಡಾಲರ್ ರೊಕ್ಕ ಗಳಿಸಿ; Twitter ಬಳಕೆದಾರರಿಗೆ ಮಸ್ಕ್ ಕರೆ!
ಕಳೆದ ವರ್ಷ ಟ್ವಿಟ್ಟರ್ ಅನ್ನು 44 ಬಿಲಿಯನ್ ಡಾಲರ್ಗೆ ಎಲಾನ್ ಮಸ್ಕ್ ಖರೀದಿಸಿದ್ದರು. ಇದರ ನಂತರದಿಂದ ಟ್ವಿಟ್ಟರ್ ಉದ್ಯೋಗಿಗಳ ಬದಲಾವಣೆ ಮತ್ತು ಬ್ಲೂ ವೆರಿಫಿಕೇಶನ್ ವಿಷಯವಾಗಿ ಮಸ್ಕ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಳೆದ ಏಪ್ರಿಲ್ 1ರಿಂದ ಕಂಪನಿಯು ತನ್ನ ಹಳೆಯ ಪರಿಶೀಲಿಸಿದ (ವೆರಿಫೈಡ್) ಖಾತೆಗಳಿಗೆ ಶುಲ್ಕ ವಿಧಿಸಲಾಗುವುದು ಎಂದು ತಿಳಿಸಿತ್ತು. ಬಳಕೆದಾರರು ನೀಲಿ ಚೆಕ್‌ಮಾರ್ಕ್‌ಗಳಿಗೆ ತಿಂಗಳಿಗೆ 8 ಡಾಲರ್ ಪಾವತಿಸಬೇಕಾಗುತ್ತದೆ ಎಂದು ಕಂಪನಿ ಹೇಳಿತ್ತು. ಶುಲ್ಕ ಪಾವತಿಸದ, ಪರಿಶೀಲಿಸಿದ ಖಾತೆಗಳ ಚೆಕ್‌ಮಾರ್ಕ್ ಅನ್ನು ತೆಗೆದು ಹಾಕಲಾಗಿದೆ.
ಇದನ್ನೂ ಓದಿ : ‘ದ್ವೇಷಪೂರಿತ, ಹಿಂಸಾತ್ಮಕ ಪೋಸ್ಟ್‌ಗಳು ಹೆಚ್ಚುತ್ತಿವೆ’.. ವರದಿ ತಳ್ಳಿಹಾಕಿದ ಟ್ವಿಟರ್ ಸಿಇಒ
ಇನ್ನೊಂದೆಡೆ, ಎಲ್ಲ ಬಳಕೆದಾರರು ತಮ್ಮ ಟ್ವಿಟ್ಟರ್ ಖಾತೆಯನ್ನು ವೆರಿಫೈ ಮಾಡಿಸಿಕೊಂಡು, ಜಾಹೀರಾತು ಆದಾಯದಲ್ಲಿ ಪಾಲು ಪಡೆಯಲು ಪ್ರಯತ್ನಿಸಬೇಕೆಂದು ಎಲಾನ್ ಮಸ್ಕ್ ಕಳೆದ ಶನಿವಾರ ಕರೆ ನೀಡಿದ್ದರು.
ಇದನ್ನೂ ಓದಿ : ಟ್ವಿಟರ್ ಲೋಗೋ ಬದಲಿಸಿದ ಮಸ್ಕ್: ನೀಲಿ ಹಕ್ಕಿ ಜಾಗಕ್ಕೆ ಬಂತು ಈ ಪ್ರಾಣಿ?