ಅಂಕಾರಾ: ಟರ್ಕಿಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಮತ್ತೊಂದು ಸುತ್ತಿನ ಮತದಾನ ಪ್ರಕ್ರಿಯೆ ಭಾನುವಾರ ಮುಕ್ತಾಯಗೊಂಡಿತು. ಹಾಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮರು ಆಯ್ಕೆಯಾಗುವ ಮೂಲಕ ಅವರು ತಮ್ಮ ಆಡಳಿತವನ್ನು 3ನೇ ದಶಕಕ್ಕೆ ವಿಸ್ತರಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮೇ 14 ರಂದು ನಡೆದಿದ್ದ ಮತದಾನದಲ್ಲಿ ಎರ್ಡೋಗನ್ ಮತ್ತು ಅವರ ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್‌ಡರೊಗ್ಲ ಗೆಲುವಿಗೆ ಅಗತ್ಯವಿರುವ ಬಹುಮತ ಪಡೆಯದ ಹಿನ್ನೆಲೆಯಲ್ಲಿ 2ನೇ ಸುತ್ತಿನ ಮತದಾನ ನಡೆದಿದೆ. ಭಾನುವಾರ ನಡೆದ ಮತದಾನದಲ್ಲಿ ಎರ್ಡೊಗನ್ ಅವರು ವಿರೋಧ ಪಕ್ಷದ ನಾಯಕ ಕೆಮಲ್ ಕಿಲಿಕ್‌ಡರೊಗ್ಲು ಅವರನ್ನು ಸೋಲಿಸಿದರು. ಭೂಕಂಪಪೀಡಿತ ಪ್ರದೇಶದಲ್ಲೂ ಎರ್ಡೋಗನ್ ಅವರ ಪಕ್ಷ ಪ್ರಾಬಲ್ಯ ಸಾಧಿಸಿತು. ಸಾಂಪ್ರದಾಯಿಕವಾಗಿ ಅಧ್ಯಕ್ಷರನ್ನು ಬೆಂಬಲಿಸುವ ಪ್ರದೇಶದಲ್ಲಿ 11 ಪ್ರಾಂತ್ಯಗಳಲ್ಲಿ 10 ಅನ್ನು ಗೆದ್ದು ಬೀಗಿದೆ.
ಭಾನುವಾರ ಟರ್ಕಿಯ ಸುಪ್ರೀಂ ಎಲೆಕ್ಷನ್ ಕೌನ್ಸಿಲ್ (YSK) ಘೋಷಿಸಿದ ಪ್ರಾಥಮಿಕ ಅಧಿಕೃತ ಫಲಿತಾಂಶಗಳ ಪ್ರಕಾರ, ಎರ್ಡೊಗನ್ ಶೇ 52.14 ರಷ್ಟು ಮತಗಳನ್ನು ಗಳಿಸುವ ಮೂಲಕ ಗೆದ್ದರು. ಕಿಲಿಕ್‌ಡರೊಗ್ಲ ಶೇ.47.86 ಮತಗಳನ್ನು ಪಡೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಫಲಿತಾಂಶಗಳನ್ನು ಅಧಿಕೃತಗೊಳಿಸುವ ಮೊದಲು ಎರ್ಡೊಗನ್ ಇಸ್ತಾನ್‌ಬುಲ್‌ನಲ್ಲಿರುವ ತನ್ನ ನಿವಾಸದ ಹೊರಗೆ ಪ್ರಚಾರದ ಬಸ್‌ನ ಮೇಲೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಟರ್ಕಿಯ ಧ್ವಜವನ್ನು ಬೀಸುತ್ತಾ ಹರ್ಷೋದ್ಗಾರ ಮಾಡಿ ಬೆಂಬಲಿಗರ ದೊಡ್ಡ ಗುಂಪನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರಕ್ಕೆ ಧನ್ಯವಾದ ಅರ್ಪಿಸಿದರು.
-
Kısıklı'dayız. 🇹🇷 https://t.co/KQSKDAroPD
— Recep Tayyip Erdoğan (@RTErdogan) May 28, 2023 " class="align-text-top noRightClick twitterSection" data="
">Kısıklı'dayız. 🇹🇷 https://t.co/KQSKDAroPD
— Recep Tayyip Erdoğan (@RTErdogan) May 28, 2023Kısıklı'dayız. 🇹🇷 https://t.co/KQSKDAroPD
— Recep Tayyip Erdoğan (@RTErdogan) May 28, 2023
"ನಾವು ನಮ್ಮ ರಾಷ್ಟ್ರದ ಪರವಾಗಿ 2ನೇ ಸುತ್ತಿನ ಅಧ್ಯಕ್ಷೀಯ ಚುನಾವಣೆಯನ್ನು ಪೂರ್ಣಗೊಳಿಸಿದ್ದೇವೆ. ನಮಗೆ ಪ್ರಜಾಪ್ರಭುತ್ವದ ದಿನವನ್ನು ನೀಡಿದ ನನ್ನ ರಾಷ್ಟ್ರಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಭಯೋತ್ಪಾದಕ ಸಂಘಟನೆಗಳು ಸೋತಿವೆ. ಟರ್ಕಿಯಲ್ಲಿ ಮೇ 14 ಮತ್ತು 28 ರಂದು ನಡೆದ ಚುನಾವಣೆಗಳೆರಡರಲ್ಲೂ ವಿಜೇತರು ನಮ್ಮ 85 ಮಿಲಿಯನ್ ನಾಗರಿಕರು. ನೈಜ ಪ್ರಜಾಪ್ರಭುತ್ವ ಇರುವವರೆಗೂ ಹೋರಾಟ ಮುಂದುವರಿಸುತ್ತೇನೆ"- ಎರ್ಡೊಗನ್.
-
Congratulations to President Recep Tayyip Erdogan of Türkiye on his re-election.
— President Biden (@POTUS) May 28, 2023 " class="align-text-top noRightClick twitterSection" data="
I look forward to continuing to work together as NATO Allies on bilateral issues and shared global challenges.
">Congratulations to President Recep Tayyip Erdogan of Türkiye on his re-election.
— President Biden (@POTUS) May 28, 2023
I look forward to continuing to work together as NATO Allies on bilateral issues and shared global challenges.Congratulations to President Recep Tayyip Erdogan of Türkiye on his re-election.
— President Biden (@POTUS) May 28, 2023
I look forward to continuing to work together as NATO Allies on bilateral issues and shared global challenges.
ಬೈಡನ್ ಅಭಿನಂದನೆ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಚುನಾವಣಾ ಗೆಲುವಿಗಾಗಿ ಎರ್ಡೊಗನ್ ಅವರನ್ನು ಅಭಿನಂದಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಟರ್ಕಿಯು ಕಳೆದ ಕೆಲವು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿವೆ.
ಭೂಕಂಪ ಪರಿಹಾರ ನಮ್ಮ ಆದ್ಯತೆ: ಸರ್ಕಾರವು ತನ್ನ ಎಲ್ಲಾ ಸಮಯ ಮತ್ತು ಶಕ್ತಿಯನ್ನು ಜನ ಸೇವೆಗೆ ವಿನಿಯೋಗಿಸುತ್ತದೆ. ಫೆಬ್ರವರಿಯಲ್ಲಿ ಸಂಭವಿಸಿದ ಭೂಕಂಪ ಪರಿಹಾರ ನಮ್ಮ ಮೊದಲ ಆದ್ಯತೆ. ಟರ್ಕಿಯಲ್ಲಿ ನಾಶವಾದ ನಗರಗಳನ್ನು ಪುನರ್ನಿರ್ಮಿಸುವುದು ಮತ್ತು ಅಲ್ಲಿನ ಜನರ ಜೀವನ ಸರಿಪಡಿಸುವುದು ಸರ್ಕಾರದ ಆದ್ಯತೆ ಎಂದು ಎರ್ಡೊಗನ್ ಹೇಳಿದರು.
ರಾಜಧಾನಿ ಅಂಕಾರಾದಲ್ಲಿರುವ ತನ್ನ ಪಕ್ಷದ ಪ್ರಧಾನ ಕಛೇರಿಯಲ್ಲಿ ಮಾತನಾಡಿದ ಕಿಲಿಕ್‌ಡರೋಗ್ಲ, "ಇದು ನಮ್ಮ ಇತಿಹಾಸದಲ್ಲಿ ಅತ್ಯಂತ ಅನ್ಯಾಯದ ಚುನಾವಣಾ ಅವಧಿಯಾಗಿದೆ. ನಾವು ಭಯದ ವಾತಾವರಣಕ್ಕೆ ತಲೆಬಾಗಲಿಲ್ಲ. ಈ ಚುನಾವಣೆಯಲ್ಲಿ, ಎಲ್ಲಾ ಒತ್ತಡಗಳ ನಡುವೆಯೂ ಸರ್ವಾಧಿಕಾರಿ ಸರ್ಕಾರವನ್ನು ಬದಲಾಯಿಸುವ ಜನರ ಇಚ್ಛೆ ಸ್ಪಷ್ಟವಾಯಿತು" ಎಂದು ಅವರು ಹೇಳಿದರು.
ಎರ್ಡೊಗನ್ ಕೊಟ್ಟ ಭರವಸೆಗಳೇನು?:
- ಹಣದುಬ್ಬರದಿಂದ ತೀವ್ರವಾಗಿ ಹಾನಿಗೊಳಗಾದ ಮತದಾರರನ್ನು ಓಲೈಸುವ ಪ್ರಯತ್ನದಲ್ಲಿ, ಅವರು ವೇತನ ಮತ್ತು ಪಿಂಚಣಿಗಳನ್ನು ಹೆಚ್ಚಿಸಿದ್ದಾರೆ.
- ವಿದ್ಯುತ್ ಮತ್ತು ಗ್ಯಾಸ್ ಬಿಲ್‌ಗಳಿಗೆ ಸಬ್ಸಿಡಿ.
- ಟರ್ಕಿಯ ಸ್ವದೇಶಿ ರಕ್ಷಣಾ ಉದ್ಯಮ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ.
- ವರ್ಷದೊಳಗೆ 3,19,000 ಮನೆಗಳನ್ನು ನಿರ್ಮಿಸುವುದು ಸೇರಿದಂತೆ ಭೂಕಂಪ ಪೀಡಿತ ಪ್ರದೇಶಗಳನ್ನು ಪುನರ್ನಿರ್ಮಿಸುವ ಭರವಸೆ.
ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್‌ಡರೊಗ್ಲ ಮೃದು ಸ್ವಭಾವದ ಮಾಜಿ ನಾಗರಿಕ ಸೇವಕರಾಗಿದ್ದಾರೆ. 2010 ರಿಂದ ಜಾತ್ಯತೀತ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿಯನ್ನು ಮುನ್ನಡೆಸಿದ್ದಾರೆ. ಅವರು ಎರ್ಡೊಗನ್‌ರ ಪ್ರಜಾಪ್ರಭುತ್ವ ಹಿಮ್ಮೆಟ್ಟಿಸುವ ಭರವಸೆಯ ಮೇಲೆ ಪ್ರಚಾರ ಮಾಡಿದರು. ಹೆಚ್ಚು ಸಾಂಪ್ರದಾಯಿಕ ನೀತಿಗಳಿಗೆ ಹಿಂತಿರುಗುವ ಮೂಲಕ ಆರ್ಥಿಕತೆಯನ್ನು ಪುನಃಸ್ಥಾಪಿಸುವ ಭರವಸೆ ನೀಡಿದ್ದರು.
ಇದನ್ನೂ ಓದಿ: ಟರ್ಕಿಯಲ್ಲಿಂದು ಚುನಾವಣೆ: 20 ವರ್ಷಗಳ ಎರ್ಡೊಗನ್ ಅಧಿಕಾರ ಮುಕ್ತಾಯ?