ETV Bharat / international

ಫಲಿತಾಂಶ ತಿರುಚಲು ಭ್ರಷ್ಟಾಚಾರದ ಮಾರ್ಗ ಅನುರಿಸಿದ್ದರಂತೆ ಟ್ರಂಪ್

author img

By

Published : Jul 22, 2022, 3:21 PM IST

Updated : Aug 10, 2022, 6:59 PM IST

ಜನವರಿ 6, 2021 ರಂದು ನಡೆದ ಹಿಂಸಾತ್ಮಕ ದಂಗೆಯ ನಂತರ ಟ್ರಂಪ್ ಅವರನ್ನು ದೋಷಾರೋಪಣೆಗೊಳಪಡಿಸಲು ಮತ ಚಲಾಯಿಸಿದ್ದ ಏಳು ಡೆಮಾಕ್ರಟಿಕ್ ಮತ್ತು ಇಬ್ಬರು ರಿಪಬ್ಲಿಕನ್ ಸಂಸದರಿಂದ ರಚನೆಯಾಗಿರುವ ಸದನ ಸಮಿತಿಯು ಕ್ಯಾಪಿಟಲ್​​ ದಾಳಿಯ ತನಿಖೆಯ ಎಂಟನೇ ಸಾರ್ವಜನಿಕ ವಿಚಾರಣೆಯನ್ನು ನಡೆಸಿತು. ಕೋವಿಡ್​ ಸೋಂಕಿತರಾಗಿರುವ ಥಾಮ್ಸನ್ ರಿಮೋಟ್ ಆಗಿ ವಿಚಾರಣೆಯಲ್ಲಿ ಭಾಗಿಯಾದರು.

trump tried to destroy democratic institutions: Probe Panel

ವಾಷಿಂಗ್ಟನ್​: 2020ರ ಅಮೆರಿಕ ಚುನಾವಣೆಯಲ್ಲಿ ಕಾನೂನು ಬಾಹಿರ ಕೃತ್ಯಗಳು ಹಾಗೂ ಭ್ರಷ್ಟಾಚಾರದ ಮಾರ್ಗಗಳ ಮೂಲಕ ತಮ್ಮ ಪರವಾದ ಫಲಿತಾಂಶ ಪಡೆಯಲು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಕ್ಯಾಪಿಟಲ್​​​​​ ಹಿಲ್ಸ್​​ ಮೇಲೆ ನಡೆದ ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ಸದನ ಸಮಿತಿಯ ಅಧ್ಯಕ್ಷರು ಟ್ರಂಪ್ ವಿರುದ್ಧ ಈ ಆರೋಪ ಮಾಡಿದ್ದಾರೆ.

ದಾಳಿಗಳ ಬಗ್ಗೆ ನಡೆದ ಸಾರ್ವಜನಿಕ ವಿಚಾರಣೆಯ ಟಿವಿ ಪ್ರಸಾರದಲ್ಲಿ ಮಾತನಾಡಿದ ಸದನ ಸಮಿತಿಯ ಅಧ್ಯಕ್ಷ ಬೆನ್ನಿ ಥಾಮ್ಸನ್, ಯಾವುದನ್ನು ಅವರು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆದಿದ್ದರೋ ಅದರ ಹೊಣೆಗಾರಿಕೆಯನ್ನು ಅವರ ಮೇಲೆ ಹೊರಿಸಬೇಕಿದೆ ಎಂದರು.

ಚುನಾವಣಾ ಫಲಿತಾಂಶಗಳನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ತನಗೆ ಸಾಧ್ಯವಿರುವುದೆಲ್ಲವನ್ನೂ ಮಾಡಿದ ಅಧ್ಯಕ್ಷರ ಬಗ್ಗೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಸದನ ಸಮಿತಿಯು ಸಾಕಷ್ಟು ತಿಳಿದುಕೊಂಡಿದೆ. ಆತ ಸುಳ್ಳು ಹೇಳಿದ, ಬೆದರಿಕೆ ಹಾಕಿದ, ಸತ್ಯದ ಪ್ರಮಾಣಕ್ಕೆ ವಂಚನೆ ಮಾಡಿದ. ಆತ ನಮ್ಮ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹಾಳು ಮಾಡಲು ಯತ್ನಿಸಿದ. ಯಾರ ಹೆದರಿಕೆಯೂ ಇಲ್ಲದೇ ಕಾನೂನುಬಾಹಿರ ಮತ್ತು ಭ್ರಷ್ಟಾಚಾರದ ಮಾರ್ಗದಲ್ಲಿ ಸಾಗಿದ ಎಂದು ಅವರು ಹೇಳಿದರು.

ಜನವರಿ 6, 2021 ರಂದು ನಡೆದ ಹಿಂಸಾತ್ಮಕ ದಂಗೆಯ ನಂತರ ಟ್ರಂಪ್ ಅವರನ್ನು ದೋಷಾರೋಪಣೆಗೊಳಪಡಿಸಲು ಮತ ಚಲಾಯಿಸಿದ್ದ ಏಳು ಡೆಮಾಕ್ರಟಿಕ್ ಮತ್ತು ಇಬ್ಬರು ರಿಪಬ್ಲಿಕನ್ ಸಂಸದರಿಂದ ರಚನೆಯಾಗಿರುವ ಸದನ ಸಮಿತಿಯು ಕ್ಯಾಪಿಟಲ್​​ ದಾಳಿಯ ತನಿಖೆಯ ಎಂಟನೇ ಸಾರ್ವಜನಿಕ ವಿಚಾರಣೆಯನ್ನು ನಡೆಸಿತು. ಕೋವಿಡ್​ ಸೋಂಕಿತರಾಗಿರುವ ಥಾಮ್ಸನ್ ರಿಮೋಟ್ ಆಗಿ ವಿಚಾರಣೆಯಲ್ಲಿ ಭಾಗಿಯಾದರು.

ಆ ದಿನದಂದು ತನ್ನ ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್ ಉದ್ರೇಕಕಾರಿ ಭಾಷಣ ಮಾಡಿದ್ದರಿಂದ ಹಿಡಿದು ಎಲ್ಲ ಘಟನಾವಳಿಗಳ ಬಗ್ಗೆ ಸಂಸದರ ಸಮಿತಿಯು ತನಿಖೆ ನಡೆಸುತ್ತಿದೆ. ಕ್ಯಾಪಿಟಲ್​ ಹಿಲ್ಸ್​​ ಮೇಲೆ ನಡೆದ ದಾಳಿಯನ್ನು ತನ್ನ ಖಾಸಗಿ ಡೈನಿಂಗ್ ರೂಮಿನ ಟಿವಿಯಲ್ಲಿ ಟ್ರಂಪ್ ಸುಮಾರು ಮೂರು ಗಂಟೆಗಳ ಕಾಲ ವೀಕ್ಷಣೆ ಮಾಡಿದ್ದರು ಎಂಬ ವಿಷಯದ ಬಗೆಗಿನ ಟ್ವೀಟ್​ಗಳನ್ನು ಸಹ ವಿಚಾರಣೆಯಲ್ಲಿ ಪ್ರದರ್ಶಿಸಲಾಯಿತು.

ಇದನ್ನು ಓದಿ:ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್‌ ಗುಣವರ್ಧನೆ ಪ್ರಮಾಣವಚನ

Last Updated : Aug 10, 2022, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.