ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಈಗಾಗಲೇ ಸುನಕ್ ಮತ್ತು ಯುಕೆ ಪೊಲೀಸರು ಹಲವು ಬಾರಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈಗ ತಮ್ಮ ಮುದ್ದಿನ ನಾಯಿಯಿಂದಾಗಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪತ್ನಿ ಅಕ್ಷತಾ ಮೂರ್ತಿ ಹಾಗೂ ಇತರ ಕುಟುಂಬ ಸದಸ್ಯರೊಂದಿಗೆ ಉದ್ಯಾನವನಕ್ಕೆ ತೆರಳಿ ಅಲ್ಲಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಸುನಕ್ ಮೇಲಿದೆ. ಲಂಡನ್‌ನ ಹೈಡ್ ಪಾರ್ಕ್‌ಗೆ ರಜೆಯ ಮೇಲೆ ಹೋಗಿದ್ದಾಗ ಸಾಕು ನಾಯಿ 'ನೋವಾ' ವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಸರ್ಪೆಂಟೈನ್ ಸರೋವರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯನ್ನು ಚೈನ್‌ನಿಂದ ಬಿಡುಗಡೆ ಮಾಡಿದ್ದಾರೆ.
ಬ್ರಿಟನ್‌ನ ಉದ್ಯಾನಗಳಲ್ಲಿ ನಾಯಿಗಳನ್ನು ಬಿಡುವುದು ನಿಯಮಗಳಿಗೆ ವಿರುದ್ಧ. ಇದನ್ನು ಸ್ಪಷ್ಟವಾಗಿ ತಿಳಿಸುವ ಫಲಕವೂ ಅಲ್ಲಿತ್ತು. ಆದರೆ ಸುನಕ್ ಕುಟುಂಬ ಅದನ್ನು ಅನುಸರಿಸಲಿಲ್ಲ. ಅಷ್ಟೇ ಅಲ್ಲ, ಪೊಲೀಸರು ತಕ್ಷಣ ಈ ವಿಚಾರವನ್ನು ಸುನಕ್ ಅವರ ಗಮನಕ್ಕೆ ತರಬೇಕಿತ್ತು. ಆದ್ರೆ ಅದು ವಿಳಂಬವಾಗಿದೆ. ಭದ್ರತಾ ಪಡೆಯ ಪೊಲೀಸ್ ಅಧಿಕಾರಿಯೊಬ್ಬರು ಉದ್ಯಾನದ ನಿಯಮಗಳನ್ನು ನೆನಪಿಸಿದ್ದಾರೆ. ಕೂಡಲೇ ಸುನಕ್ ಕುಟುಂಬಸ್ಥರು ನಾಯಿಗೆ ಬೆಲ್ಟ್ ಹಾಕಿದ್ದರು.
-
"Who Let the Dog Out?" @RishiSunak pic.twitter.com/TDUEg14V82
— Guido Fawkes (@GuidoFawkes) March 14, 2023 " class="align-text-top noRightClick twitterSection" data="
">"Who Let the Dog Out?" @RishiSunak pic.twitter.com/TDUEg14V82
— Guido Fawkes (@GuidoFawkes) March 14, 2023"Who Let the Dog Out?" @RishiSunak pic.twitter.com/TDUEg14V82
— Guido Fawkes (@GuidoFawkes) March 14, 2023
ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರನ್ನು ಉಲ್ಲೇಖಿಸಿ ಪೊಲೀಸರು ಮಂಗಳವಾರ ನೀಡಿರುವ ಹೇಳಿಕೆಯಲ್ಲಿ, "ಆ ಸಮಯದಲ್ಲಿ ಹಾಜರಿದ್ದ ಅಧಿಕಾರಿಯೊಬ್ಬರು ಮಾತನಾಡಿ ನಿಯಮಗಳನ್ನು ನೆನಪಿಸಿದರು. ಅದರ ನಂತರ ನಾಯಿಯನ್ನು ಬೆಲ್ಟ್ನಿಂದ ಕಟ್ಟಿದರು" ಎಂದು ತಿಳಿಸಿದರು. ಆದರೆ, ರಿಷಿ ಸುನಕ್ ಅವರ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುನಕ್ ಕ್ಷಮೆ ಯಾಚಿಸಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು. ಪೊಲೀಸರು ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ಸುನಕ್ ಇಂತಹ ವಿವಾದಗಳಲ್ಲಿ ಸಿಲುಕಿರುವುದು ಇದು ಮೊದಲಲ್ಲ. ಹಲವು ಬಾರಿ ಪೊಲೀಸರಿಗೆ ದಂಡ ಕಟ್ಟಿರುವ ಉದಾಹರಣೆಗಳಿವೆ. ಕಳೆದ ಜೂನ್ ಡೌನಿಂಗ್ ಸ್ಟ್ರೀಟ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಸುನಕ್ ಭಾಗವಹಿಸಿದ್ದಾಗ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರು. ಆಗ ಅವರಿಗೆ ಪೊಲೀಸರು ದಂಡ ವಿಧಿಸಿದ್ದರು. ಸುನಕ್ ಆಗ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ಸಾಮಾಜಿಕ ಅಂತರದಲ್ಲಿ ಸರ್ಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಪ್ರಧಾನಿಯಾದ ಬಳಿಕ ಚಲಿಸುತ್ತಿದ್ದ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದಕ್ಕೆ ದಂಡ ವಿಧಿಸಲಾಗಿತ್ತು. ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಎಂಬ ಕಾರಣಕ್ಕೆ ಪೊಲೀಸರು ದಂಡದ ಬರೆ ಎಳೆದಿದ್ದರು. ಸುನಕ್ ಕ್ಷಮೆ ಯಾಚಿಸಿದ್ದರು.
ರಿಷಿ ಸುನಕ್ ಬಗ್ಗೆ: 42 ವರ್ಷದ ಸುನಕ್ ಯುಕೆಯ ಸೌತಾಂಪ್ಟನ್‌ನಲ್ಲಿ ಭಾರತೀಯ ಕುಟುಂಬದಲ್ಲಿ ಜನಿಸಿದ್ದಾರೆ. ಅವರ ಪೂರ್ವಜರು ಪಾಕಿಸ್ತಾನದಲ್ಲಿರುವ ಪಂಜಾಬ್‌ಗೆ ಸೇರಿದವರು. ವೈದ್ಯ ದಂಪತಿ. ಸುನಕ್ ಅವರು ಇಂಗ್ಲೆಂಡ್‌ನ ಅತ್ಯಂತ ಪ್ರಸಿದ್ಧ ಶಾಲೆಗಳಲ್ಲಿ ಒಂದಾದ ವಿಂಚೆಸ್ಟರ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಇದರ ನಂತರ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿದ್ದಾರೆ. 'ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್' ನಲ್ಲಿ ಕೆಲಸ ಮಾಡಿದ್ದಾರೆ. ನಂತರ USA, ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ MBA ಮಾಡಿದ್ದರು.
ಇದನ್ನೂ ಓದಿ: ಎರಡು ವರ್ಷದ ಬಳಿಕ ಭಾರತಕ್ಕೆ ರಾಯಭಾರಿ ನೇಮಿಸಿದ ಅಮೆರಿಕ; ಬೈಡನ್ ಆಪ್ತನಿಗೆ ಮಹತ್ವದ ಹುದ್ದೆ!