ಯುನೈಟೆಡ್ ಕಿಂಗ್‌ಡಮ್(ಯುಕೆ): ಯುಕೆಯ ಎಸೆಕ್ಸ್‌ನಲ್ಲಿರುವ ಬುಲ್ಫಾನ್ ಕೈಗಾರಿಕಾ ಎಸ್ಟೇಟ್‌ನಿಂದ ಪೋರ್ಷೆಸ್ ಮತ್ತು ಏರಿಯಲ್ ಆಟಮ್ ಸೇರಿದಂತೆ 700,000 ಪೌಂಡ್ಸ್ ಮೌಲ್ಯದ (ಭಾರತೀಯ ರೂಪಾಯಿ ದರದಲ್ಲಿ ಕೋಟಿಗಟ್ಟಲೆ) ಐದು ಐಷಾರಾಮಿ ಮತ್ತು ಅಪರೂಪದ ಕಾರುಗಳು ನವೆಂಬರ್ 11 ರಂದು ಕಳ್ಳತನವಾಗಿವೆ. ದರೋಡೆಕೋರರು ಕಾರುಗಳನ್ನು ಅತ್ಯಂತ ಸುಲಭವಾಗಿ ಕಳ್ಳತನ ಮಾಡಿರುವ ಸಂಪೂರ್ಣ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ವಿಡಿಯೋವನ್ನು ಎಸೆಕ್ಸ್ ಪೊಲೀಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
-
We are currently investigating an incident where multiple luxury cars were stolen from a unit on Brentwood Road in #Bulphan on 11 November.
— Essex Police (@EssexPoliceUK) December 5, 2022 " class="align-text-top noRightClick twitterSection" data="
Did you witness anything suspicious? If so, please contact us. pic.twitter.com/2huktS0PJI
">We are currently investigating an incident where multiple luxury cars were stolen from a unit on Brentwood Road in #Bulphan on 11 November.
— Essex Police (@EssexPoliceUK) December 5, 2022
Did you witness anything suspicious? If so, please contact us. pic.twitter.com/2huktS0PJIWe are currently investigating an incident where multiple luxury cars were stolen from a unit on Brentwood Road in #Bulphan on 11 November.
— Essex Police (@EssexPoliceUK) December 5, 2022
Did you witness anything suspicious? If so, please contact us. pic.twitter.com/2huktS0PJI
ಒಂದೂವರೆ ನಿಮಿಷವಿರುವ ವಿಡಿಯೋದಲ್ಲಿ ಕಳ್ಳರು ಕೇವಲ 60 ಸೆಕೆಂಡ್ಗಳಿಗಿಂತಲೂ ಕಡಿಮೆ ಅವಧಿಯಲ್ಲಿ ದುಬಾರಿ ಕಾರುಗಳನ್ನು ಕದ್ದೊಯ್ದಿದ್ದಾರೆ. ಕಾರು ಕದ್ದೊಯ್ಯುವಾಗ ಇಬ್ಬರು ವ್ಯಕ್ತಿಗಳು ಗೇಟ್ ತೆರೆಯುತ್ತಿರುವುದನ್ನೂ ವಿಡಿಯೋದಲ್ಲಿ ನೋಡಬಹುದು. 'ನ.11 ರಂದು ಬಲ್ಫಾನ್‌ನ ಬ್ರೆಂಟ್‌ವುಡ್ ರಸ್ತೆಯಲ್ಲಿರುವ ಘಟಕದಿಂದ ಬಹು ಐಷಾರಾಮಿ ಕಾರುಗಳನ್ನು ಕಳವು ಮಾಡಿದ ಘಟನೆಯ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ' ಎಂಬ ಶೀರ್ಷಿಕೆಯೊಂದಿಗೆ ಪೊಲೀಸರು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಏರಿಯಲ್ ಆಟಮ್ ರೇಸಿಂಗ್ ಕಾರು, ಮರ್ಸಿಡೆಸ್ ಬೆಂಜ್ ಎ45 ಎಎಂಜಿ 4ಮ್ಯಾಟಿಕ್, ಪೋರ್ಷೆ ಕೇಯೆನ್ನೆ, ಪೋರ್ಷೆ 911 ಕ್ಯಾರೆರಾ, ಮರ್ಸಿಡಿಸ್ ಮೇಬ್ಯಾಕ್ ಕಾರುಗಳು ನಾಪತ್ತೆಯಾಗಿವೆ. ಘಟನೆ ನಡೆದ ನಂತರ ಬೆಳಗ್ಗೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಅಪರಾಧಿಗಳ ಶೋಧ ಕಾರ್ಯದಲ್ಲಿರುವ ಪೊಲೀಸರು, ಘಟನೆಯ ಕುರಿತು ಯಾರಾದರೂ ಸಿಸಿಟಿವಿ ದೃಶ್ಯಗಳನ್ನು ಹೊಂದಿದ್ದರೆ ಸಹಕರಿಸುವಂತೆ ವಿನಂತಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರು ಕಳ್ಳತನ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ