ETV Bharat / international

ವಸಾಹತುಶಾಹಿ ಆಡಳಿತ ದೂರವಾಯ್ತು.. ಬದಲಾದ ಬದುಕು.. ತೃತೀಯ ಲಿಂಗಿಗಳ ಕಡೆಗಣನೆ ಸಾಕು..

author img

By

Published : Dec 10, 2022, 7:12 PM IST

ಮಂಗಳಮುಖಿಯರ ಅದೃಷ್ಟ 1830ರಲ್ಲಿ ಶುರುವಾಯಿತು. ದಕ್ಷಿಣ ಏಷ್ಯಾದಲ್ಲಿ ಆಡಳಿತ ಹೊಂದಿದ್ದ ಮೊಘಲ್​, ಮರಾಠರು ಈ ಮಂಗಳಮುಖಿಯರಿಗೆ ಪ್ರೋತ್ಸಾಹಿಸಿದ್ದರು ಎಂದು ಸಿಂಗಾಪೂರದ ನಾನ್ಯಂಗ್​ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧಕಿ ಜೆಸ್ಸಿಕಾ ಹಿಂಚೆ ತಿಳಿಸಿದ್ದಾರೆ.

ಭಾರತದ ತೃತೀಯ ಲಿಂಗಿಗಳ ಸ್ಥಾನಮಾನದ ಕಡೆಗಣನೆಗೆ ಕಾರಣವಾಯ್ತಾ ವಸಾಹತು ಶಾಹಿ ಆಡಳಿತ?
the-colonial-rule-led-to-the-neglect-of-the-status-of-third-genders-in-india

ಹೈದರಾಬಾದ್​: ಮಹಾಭಾರತದ ಶಿಖಂಡಿ ಬಗ್ಗೆ ತಿಳಿಯದವರಿಲ್ಲ. ತನ್ನ ಹಿಂದಿನ ಜನ್ಮದಲ್ಲಿ ಭೀಷ್ಮನ ಕೊಲ್ಲುವ ಶಪಥ ಮಾಡಿದ್ದ ಶಿಖಂಡಿ ಹೆಣ್ಣಾಗಿ ಹುಟ್ಟಿದವಳು. ಯಾವಾಗ ಭೀಷ್ಮ ಮಹಿಳೆಯರ ವಿರುದ್ಧ ಹೋರಾಟ ಮಾಡುವುದಿಲ್ಲ ಎಂದು ತಿಳಿದಳೋ ಆಗ ಪುರುಷನಾಗಿ ಪರಿವರ್ತಿತಳಾಗಿ ಮಹಾಭಾರತ ಯುದ್ಧದಲ್ಲಿ ಭೀಷ್ಮನ ಸಾವಿಗೆ ಕಾರಣಳಾದಳು. ಮಹಾಭಾರತದಲ್ಲಿ ಕಂಡು ಬರುವ ತೃತೀಯ ಲಿಂಗಿ ಕೇವಲ ಶಿಖಂಡಿ ಮಾತ್ರವಲ್ಲ, ಅರ್ಜುನ ಕೂಡ ಈ ಸಾಲಿಗೆ ಸೇರುತ್ತಾನೆ. ತಮ್ಮ ಅಜ್ಞಾತವಾಸದಲ್ಲಿ ಮಹಿಳೆ ವೇಷ ಧರಿಸಿ, ತೃತೀಯ ಲಿಂಗಿಯಂತೆ ಬಿಂಬಿತನಾದವನು ಅರ್ಜುನ.

ಭಾರತದ ಪುರಾಣಗಳು ಲಿಂಗ ಗುರುತನ್ನು ಮೀರಿ ಆತ್ಮವನ್ನು ಪರಿಗಣಿಸಿದ್ದಾರೆ. ಬ್ರಹ್ಮನು ವೇದಗಳನ್ನು ಲಿಂಗಾಧಾರಿತ ಬೇಧವಿಲ್ಲದೇ ಬರೆದನು. ಪುರಾಣಗಳನ್ನು ಪರಿಸ್ಥಿತಿಗಳಿಗೆ ಅನುಗುಣವಾಗಿ ಪುರುಷ ಅಥವಾ ಸ್ತ್ರೀ ರೂಪವನ್ನು ಆಯ್ಕೆ ಮಾಡಬಹುದಾಗಿದೆ ಎಂಬುದಾಗಿ ಭಾರತೀಯ ಇತಿಹಾಸ ಮತ್ತು ಧರ್ಮಗಳ ಕುರಿತು ಅಧ್ಯಯನ ನಡೆಸುತ್ತಿರುವ ಲಾವಣ್ಯ ವೆಮಸನಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್​ ತೀರ್ಪು: 2014ರಲ್ಲಿ ಸುಪ್ರೀಂ ಕೋರ್ಟ್​ ಮಂಗಳಮುಖಿಯರಿಗೆ ತೃತೀಯ ಲಿಂಗದ ಸ್ಥಾನವನ್ನು ನೀಡುವ ಮೂಲಕ ಅವರಿಗೆ ಒಂದು ಸ್ವಯಂ ಗುರುತನ್ನು ನೀಡಿತು. ಈ ಮೂಲಕ ನ್ಯಾಯಾಲಯ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಇರುವ ಲಿಂಗ ತಾರತಮ್ಯದ ಬಗ್ಗೆ ಇರುವ ಅಂಶವನ್ನು ದೃಢಪಡಿಸಿತು. ಹೀಗಾಗಿ ನ್ಯಾಯಾಲಯದ ಈ ತೀರ್ಪು ಮುಖ್ಯವಾಗಿ ಮಂಗಳಮುಖಿಯರಿಗೆ ಶೇಕಡಾ ಒಂದರಷ್ಟು ಮೀಸಲಾತಿ ಕಲ್ಪಿಸಿದ್ದು, ಆ ಸಮುದಾಯಕ್ಕೆ ಅನುಕೂಲವಾಗಿದೆ.

ಆದರೆ, ಈ ಮಂಗಳಮುಖಿಯರ ಬಗ್ಗೆ ಇರುವ ಜನರ ಅಭಿಪ್ರಾಯ ನಿಧಾನವಾಗಿ ಬದಲಾಗುತ್ತಿದೆ. ಈ ಜನರು ಸಮಾಜಕ್ಕೆ ಕಳಂಕ ಎಂಬ ಮನೋಭಾವವನ್ನು ಇಂದಿಗೂ ಮುಂದುವರೆಸಲಾಗಿದೆ. ಸಲಿಂಗಕಾಮವನ್ನು ಅಪರಾಧ ಎನ್ನುವುದನ್ನು ಸುಪ್ರೀಂ ಕೋರ್ಟ್​ ತೊಡೆದು ಹಾಕಿದೆ. ವರ್ಷದ ಬಳಿಕ ಟ್ರಾನ್ಸ್​ಜೆಂಡರ್​ ಹಕ್ಕಿನ ಕುರಿತ ಕಾನೂನನ್ನು ಸಂಸತ್​ ಪಾಸ್​ ಮಾಡಿದೆ. ಆದರೂ ಕೂಡ ಭಾರತದಲ್ಲಿ ಸಾಮಾಜಿಕ ಗುಂಪಿನಿಂದ ಹೊರಗಿದ್ದಾರೆ ತೃತೀಯ ಲಿಂಗಿಗಳು.

ಮರಾಠರು, ಮೊಘಲರಿಗಂದ ಪ್ರೋತ್ಸಾಹ: ಮಂಗಳಮುಖಿಯರಿಂದ ಅದೃಷ್ಟ 1830ರಲ್ಲಿ ಶುರುವಾಯಿತು. ದಕ್ಷಿಣ ಏಷ್ಯಾದಲ್ಲಿ ವ್ಯಾಪಕ ಆಡಳಿತ ಹೊಂದಿದ್ದ ಮೊಘಲ್​, ಮರಾಠರು ಈ ಮಂಗಳಮುಖಿಯರಿಗೆ ಪ್ರೋತ್ಸಾಹಿಸಿದ್ದರು ಎಂದು ಸಿಂಗಾಪುರದ ನಾನ್ಯಂಗ್​ ತಾಂತ್ರಿಕ ವಿಶ್ವಿವಿದ್ಯಾಲಯದ​ಸಂಶೋಧಕಿ ಜೆಸ್ಸಿಕಾ ಹಿಂಚೆ ತಿಳಿಸಿದ್ದಾರೆ.

18ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ರಾಜ ಮತ್ತು ಉನ್ನತ ಕುಟುಂಬದ ಮಹಿಳೆಯರು ಕಾರ್ಯಕ್ರಮ ಪ್ರದರ್ಶನಕ್ಕಾಗಿ ಮಂಗಳಮುಖಿಯರನ್ನು ಆಹ್ವಾನಿಸುತ್ತಿದ್ದರು. ಈ ಕ್ವಾಜಾ ಸಾರಾ ಎಂಬ ಮಂಗಳಮುಖಿ ಸಮುದಾಯ ಮುಖ್ಯವಾಗಿ ಇಂದಿನ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದರು. ಇವರು ರಕ್ಷಣಾ, ಸೇನಾ ಕಮಾಂಡರ್​, ಉನ್ನತ ಹಂತದ ರಾಜ್ಯ ಅಧಿಕಾರಿಗಳು ಅಥವಾ ಗುಪ್ತಚರರು ಅಥವಾ ತೆರಿಗೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ರಾಜ್ಯದ ಪ್ರೋತ್ಸಾಹ ಸಿಕ್ಕಿದ್ದು, ಅವರಿಗೆ ಮಾನವೀಯತೆ ನೆಲೆ ಒದಗಿಸಲಾಗಿತ್ತು. 1830ರಲ್ಲಿ ಬ್ರಿಟಿಷ್​ ಭಾರತ ಹಿಜ್ರಾಗಳಿಗೆ ಭಯಾನಕವಾಯಿತು. 1850ರಲ್ಲಿ ಮಂಗಳಮುಖಿ ಮತ್ತು ಕಡೆಗಣನೆಗೆ ಗುರಿಯಾದ ಜನರಿಗೆ ಅಗೌರವನ್ನು ನೀಡಲು ಆರಂಭವಾಯಿತು. ಅಲ್ಲದೇ ಅವರ ಉಳಿವು ಮತ್ತು ಸಾವು ಎಂಬ ರೀತಿ ಪ್ರಚಾರ ಆರಂಭವಾಯಿತು ಎನ್ನುತ್ತಾರೆ ಹಿಂಚೆ.

ವಸಾಹತುಶಾಹಿ ಪರಿಣಾಮ: 2018ರಲ್ಲಿ ರದ್ದುಗೊಂಡ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಕಾನೂನನ್ನು 1861 ರಲ್ಲಿ ಪರಿಚಯಿಸಲಾಯಿತು. ವಿಕ್ಟೋರಿಯನ್ ನೈತಿಕತೆಯನ್ನು ಪ್ರತಿಬಿಂಬಿಸುತ್ತ, ಸಲಿಂಗಕಾಮವನ್ನು ಅಸ್ವಾಭಾವಿಕ ಅಪರಾಧಗಳು ಮತ್ತು ಪ್ರಕೃತಿಯ ಕ್ರಮಕ್ಕೆ ವಿರುದ್ಧವಾದ ಸಂಭೋಗ ಎಂದಿತು. ವಸಾಹತುಶಾಯಿ ಆಡಳಿತದಲ್ಲಿ ಈ ಲಿಂಗದವರು ಸಾಕಷ್ಟು ತೊಂದರೆ ಅನುಭವಿಸಿದರು ಎಂದು ಅಂಜಲಿ ಗೋಪಾಲನ್ ಹೇಳಿದ್ದಾರೆ.

ಈ ತುಳಿತಕ್ಕೆ ಒಳಗಾಗುವಂತೆ ಮಾಡುವ ಕಾನೂನುಗಳು ಮಂಗಳಮುಖಿಯರ ಮೇಲೆ ಭಾರಿ ಪರಿಣಾಮ ಬೀರಿದವು. ಸಮಾಜದ ಅಂಚಿನಲ್ಲಿ ಇಂದು ಬದುಕುತ್ತಿರುವ ಅವರು ಲೈಂಗಿಕ ಕಾರ್ಯಕರ್ತರಾಗಿ ಅಥವಾ ಮದುವೆ, ಶುಭಾರಂಭದಲ್ಲಿ ಆಶೀರ್ವದಿಸಿದ ಹಣದಲ್ಲಿ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಎಲ್ಲಾ ಮಂಗಳಮುಖಿ ಸಮುದಾಯದವರು ತಾರತಮ್ಯ ಮತ್ತು ಕಳಂಕದಲ್ಲಿ ಬದುಕುತ್ತಿದ್ದಾರೆ. ಶಾಲೆಗಳಲ್ಲಿ ತಮ್ಮ ಲಿಂಗ ಬದಲಾವಣೆಗಳಿಂದ ಆಗುವ ಅವಮಾನಗಳನ್ನು ತಾಳಲಾರದೇ ಅನೇಕರು ಆತ್ಮಹತ್ಯೆ ಹಾದಿಯನ್ನು ಹಿಡಿದಿದ್ದಾರೆ. ಅದರಲ್ಲೂ ಕುಟುಂಬ ಸದಸ್ಯರು ಅವರನ್ನು ದೂರ ತಳ್ಳುತ್ತಿದ್ದಾರೆ. ಕಾನೂನು ಬದಲಾದರೂ ಸಹ ಅವರ ಮನಸ್ಥಿತಿ ಹಾಗೇ ಇದೆ ಎನ್ನುತ್ತಾರೆ ಗೋಪಾಲನ್.​

ಲಾಕ್​ಡೌನ್​ನಲ್ಲಿ ಸಂಕಷ್ಟದ ಸ್ಥಿತಿ: ಕೋವಿಡ್​ 19 ಲಾಕ್​ಡೌನ್​ ಅಂತೂ ಮುಂಗಳಮುಖಿಯರಿಗೆ ಕೆಟ್ಟ ಪರಿಸ್ಥಿತಿ ತಂದೊಡ್ಡಿತು. ವಿಶೇಷವಾಗಿ ಲೈಂಗಿಕ ಕಾರ್ಯಕರ್ತರಿಗೆ. ಇಂತಹವರ ಸಹಾಯಕ್ಕಾಗಿ ಹೈದರಾಬಾದ್​ ಮಂಗಳಮುಖಿ ಅರುವಿ ಟ್ರಾನ್ಸ್​ ಕಿಚನ್​ ಆರಂಭಿಸಿದರು. ಮೂವರು ಸ್ನೇಹಿತರ ಸಹಾಯದಿಂದ ಅವರು ತಮ್ಮ ಸಮುದಾಯ ಸೇರಿದಂತೆ ಕಡೆಗಣನೆಗೆ ಒಳಗಾದ ಗುಂಪಿಗೆ ಆಹಾರ ಸೇವೆ ಒದಗಿಸಿದರು. ಈ ಕುರಿತು ಮಾತನಾಡಿರುವ ಅರುವಿ, ಹಸಿವು ದೊಡ್ಡ ಕೊಲೆಗಾರ. ಕಡಿಮೆ ಮತ್ತು ಉಚಿತ ಆಹಾರಕ್ಕೆ ಯಾವುದೇ ಮೂಲ ಇರಲಿಲ್ಲ ಎಂದಿದ್ದಾರೆ.

ಭಾರತದಲ್ಲಿ ಅನೇಕ ದೇವರುಗಳು ಪುರುಷ ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸುತ್ತವೆ. ಭಾರತದಲ್ಲಿ ಈ ಲಿಂಗತಾರತಮ್ಯವನ್ನು ನಿಗ್ರಹಿಸಲಾಗಿದೆ. ಅರ್ಧ ನಾರೀಶ್ವರ, ಲಕ್ಷ್ಮೀ ನಾರಾಯಣ ಗಂಡು ಹೆಣ್ಣಿನ ಸಮಾಗಮನವಾಗಿವೆ. ಶಿವ ಮತ್ತು ವಿಷ್ಣುವಿನ ಮೂಲಕ ಅಯ್ಯಪ್ಪ ಜನಿಸಿದರು. ಮೋಹಿನಿ ಕೂಡ ಹೀಗೆ ಜನ್ಮ ತಾಳಿದ್ದು ಎಂಬ ಕಥೆಗಳಿವೆ. ಆದರೆ, ಯುರೋಪಿಯನ್​ ನೈತಿಕತೆ ಪರಂಪರೆಯು ಇವುಗಳನ್ನು ಬದಿಗಿರಿಸಿದೆ. ತೃತೀಯ ಲಿಂಗಿಗಳ ಮೇಲೆ ವಾಸಹಾತುಶಾಹಿ ಆಡಳಿತ ದೈಹಿಕವಾಗಿ, ನೈತಿಕ ಮತ್ತು ಭಾವನಾತ್ಮಕವಾಗಿ ಹಾನಿ ಮಾಡಿತು. ಈ ಕುರಿತು ಅನೇಕ ಮಾಹಿತಿಯನ್ನು ಅಳಿಸಿ ಹಾಕಲಾಗಿದೆ. ಕಳೆದು ಹೋದ ಈ ಅಧ್ಯಯವನ್ನು ಪುನರ್​ಸ್ಥಾಪಿಸಬೇಕಿದ್ದು, ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪ್ರೊ ಜೆಫೆರಿ ಡಿ ಲಾಂಗ್​​ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳಮುಖಿಯ ಪ್ರೀತಿಯಲ್ಲಿ ಬೀಳುವ ನಾಯಕ.. 'ಜಾಯ್‌ಲ್ಯಾಂಡ್' ಸಿನಿಮಾ ಬ್ಯಾನ್​, ಪರಿಶೀಲನೆಗೆ ಮುಂದಾದ ಪಾಕ್​ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.