ETV Bharat / international

ಎನ್​ಜಿಒ ಕೆಲಸ, ಮಸೀದಿ ಬೋಧನೆಯಲ್ಲಿ ಪಾಲ್ಗೊಳ್ಳಬೇಡಿ: ಮಹಿಳೆಯರಿಗೆ ತಾಲಿಬಾನ್​ ನಿಷೇಧ

author img

By

Published : Dec 25, 2022, 7:54 AM IST

Updated : Dec 25, 2022, 9:16 AM IST

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ ಒಂದಿಲ್ಲೊಂದು ವಿಚಿತ್ರ ಕಾನೂನುಗಳು ಜಾರಿಗೆ ಬರುತ್ತಿವೆ. ಅದ್ರಲ್ಲೂ ಮಹಿಳೆಯ ಬದುಕು ದಿನೇ ದಿನೇ ಅಸಹನೀಯವೆನಿಸುತ್ತಿದೆ. ಮಹಿಳೆಯರ ಬದುಕಿನ ಕನಿಷ್ಠ ಹಕ್ಕುಗಳನ್ನೂ ಮೊಟಕುಗೊಳಿಸಲಾಗುತ್ತಿದೆ. ಇದಕ್ಕೆ ಲೇಟೆಸ್ಟ್‌ ಉದಾಹರಣೆ ಇಲ್ಲಿದೆ ನೋಡಿ.

taliban-ban-women-from-working-for-ngos
ತಾಲಿಬಾನ್​ ನಿಷೇಧಾಜ್ಞೆ

ಕಾಬೂಲ್(ಅಫ್ಘಾನಿಸ್ತಾನ): ಮಹಿಳೆಯರ ಮೇಲಿನ ನಿಷೇಧಗಳನ್ನು ತಾಲಿಬಾನ್​ ಸರ್ಕಾರ ಮುಂದುವರಿಸಿದೆ. ಹಿಜಾಬ್​ ಸರಿಯಾಗಿ ಧರಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳಲ್ಲಿ(ಎನ್​ಜಿಒ) ಮಹಿಳೆಯರು ಕೆಲಸ ಮಾಡುವುದು, ಮಸೀದಿಗಳಲ್ಲಿ ಧಾರ್ಮಿಕ ಬೋಧನೆಗಳಲ್ಲಿ ಭಾಗಿಯಾಗುವುದನ್ನು ನಿಷೇಧಿಸಿದೆ. ಶನಿವಾರ ತಾಲಿಬಾನ್​ ಸರ್ಕಾರ ಈ ಆದೇಶ ಹೊರಡಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳೆಯರಿಗೆ ಮೊನ್ನೆಯಷ್ಟೇ ಉನ್ನತ ಶಿಕ್ಷಣ ಪಡೆಯುವುದನ್ನು ನಿಷೇಧಿಸಿದ ಕೆಲವೇ ದಿನಗಳಲ್ಲಿ ಮತ್ತೊಂದು ನಿರ್ಬಂಧದ ಆದೇಶ ಹೊರಡಿಸಲಾಗಿದೆ. ಎನ್​ಜಿಒಗಳಲ್ಲಿ ಕೆಲಸದ ವೇಳೆ ಮಹಿಳೆಯರು ಹಿಜಾಬ್ ​ಧರಿಸುವ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಮಹಿಳೆಯರು ಕೆಲಸ ಮಾಡುವುದನ್ನೇ ತಡೆಯಲಾಗಿದೆ. ಇದು ಅಫ್ಘನ್​ ಮಹಿಳೆಯರಿಗೆ ಮಾತ್ರವೋ ಅಥವಾ ಎಲ್ಲ ಮಹಿಳೆಯರಿಗೂ ಅನ್ವಯಿಸುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ.

ಪರವಾನಗಿ ನಿಷೇಧ ಎಚ್ಚರಿಕೆ: ಹಣಕಾಸು ಸಚಿವ ಮೊಹಮ್ಮದ್ ಹನೀಫ್ ಎಲ್ಲ ಎನ್​ಜಿಒಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಆಯಾ ಸಂಸ್ಥೆಗಳಲ್ಲಿ ಮಹಿಳೆಯರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಬಾರದು. ಇದು ಧಾರ್ಮಿಕ ಕಟ್ಟಳೆಯಾಗಿದೆ. ನಿಯಮ ಮೀರಿ ಯಾವುದೇ ಸಂಸ್ಥೆ ಮಹಿಳಾ ಸಿಬ್ಬಂದಿಯನ್ನು ಹೊಂದಿದಲ್ಲಿ ಅಂತಹ ಸಂಸ್ಥೆಯ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಹಿಳೆಯರ ಮೇಲೆ ನಿಯಮಗಳ ಸಂಕೋಲೆ: ತಾಲಿಬಾನಿಗಳು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಮಹಿಳೆಯರ ಮೇಲೆ ನಿರಂತರವಾಗಿ ಹಲವಾರು ನಿರ್ಬಂಧಗಳನ್ನು ವಿಧಿಸುತ್ತಾ ಬರುತ್ತಿದ್ದಾರೆ. ಮೊದಮೊದಲು ಎಲ್ಲ ಸ್ವಾತಂತ್ರ್ಯ ನೀಡಲಾಗುವುದು ಎಂಬ ಆಶ್ವಾಸನೆಯ ಮೇಲೆ ಅಧಿಕಾರಕ್ಕೆ ಬಂದ ತಾಲಿಬಾನ್​ ಕ್ರಮೇಣ ಮಹಿಳೆಯರನ್ನು ನಿರ್ಬಂಧದ ಕಟ್ಟಳೆಗೆ ದೂಡುತ್ತಾ ಬರುತ್ತಿದೆ.

ಮಹಿಳೆಯರ ಮೇಲೆ ವಿಧಿಸಿದ ನಿರ್ಬಂಧಗಳಿವು..:

  • ಸಾರ್ವಜನಿಕ ಪಾರ್ಕ್​ಗಳ ಪ್ರವೇಶ ನಿಷೇಧ
  • ವಾಹನ ಚಲಾವಣೆ, ಡಿಎಲ್​ ನೀಡುವುದು ಬಂದ್​
  • ಉನ್ನತ ಶಿಕ್ಷಣ ಪಡೆಯುವುದರ ಮೇಲೆ ನಿರ್ಬಂಧ
  • ಮಸೀದಿಗಳಲ್ಲಿ ಬೋಧನಾ ತರಗತಿಗಳಿಗೆ ತಡೆ
  • ಸಾರ್ವಜನಿಕವಾಗಿ ಬುರ್ಕಾ, ಹಿಜಾಬ್​ ಅನ್ನು ಅಡಿಯಿಂದ ಮುಡಿವರೆಗೂ ಧಾರಣೆ
  • ಈ ನಿಯಮ ಮೀರಿದರೆ ಆಕೆಯ ಪತಿಗೆ ಶಿಕ್ಷೆಯ ಎಚ್ಚರಿಕೆ

ನಿರ್ಬಂಧಕ್ಕೆ ಮಹಿಳೆಯರು ಏನಂತಾರೆ?: ತಾಲಿಬಾನ್​ ಹೇರಿದ ಈ ನಿರ್ಬಂಧಕ್ಕೆ ಮಹಿಳೆಯರು ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದಾರೆ. 'ಇದೊಂದು ಹೃದಯವಿದ್ರಾವಕ ಘೋಷಣೆಯಾಗಿದೆ. ನಾವು ಕೂಡ ಮನುಷ್ಯರಲ್ಲವೇ, ನಮ್ಮ ಮೇಲೇಕೆ ಈ ಕ್ರೌರ್ಯ ಎಂದು ಲಿಂಗ ಆಧಾರಿತ ದೌರ್ಜನ್ಯದ ಬಗ್ಗೆ ಯುವಜನರಿಗೆ ತಿಳಿಹೇಳುವ ಎನ್‌ಜಿಒದ ಮಲಿಹಾ ನಿಯಾಜೈ ಪ್ರಶ್ನಿಸಿದ್ದಾರೆ.

ಕುಟುಂಬದಲ್ಲಿ ಯುವತಿಯೇ ಜೀವನಾಧಾರವಾಗಿದ್ದರೆ ಅವಳ ಕೆಲಸ ಕಸಿದರೆ ಆ ಕುಟುಂಬದ ಗತಿಯೇನು. ಈ ನಿಯಮದ ನಂತರ ಯುವತಿ ಎನ್​ಜಿಒದಲ್ಲಿ ಕೆಲಸ ಮಾಡದಿದ್ದರೆ ಕುಟುಂಬ ಉಳಿಯುವುದಾದರೂ ಹೇಗೆ? ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ನಾರ್ವೇಜಿಯನ್ ನಿರಾಶ್ರಿತರ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬರು ಈ ನಿರ್ಬಂಧವನ್ನು ಖಂಡಿಸಿದ್ದು, ಇದು ನನ್ನ ಜೀವನದ ಅತಿ ಕೆಟ್ಟ ಕ್ಷಣ. ಉದ್ಯೋಗವು ಬದುಕುವುದರ ಜೊತೆಗೆ ಭದ್ರತೆ ನೀಡುತ್ತದೆ. ಇದೇ ಇಲ್ಲವಾದರೆ ಬದುಕೇ ದುಸ್ತರವಾಗುತ್ತದೆ ಎಂದು ಕಿಡಿಕಾರಿದ್ದಾರೆ.

ವಿಶ್ವಸಂಸ್ಥೆ ಖಂಡನೆ: ಇನ್ನು ತಾಲಿಬಾನ್​ನ ಎನ್​ಜಿಒ ಕಠಿಣ ನಿಯಮಕ್ಕೆ ವಿಶ್ವಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ. ಆದೇಶವನ್ನು ಖಂಡಿಸಿದ್ದು, ತಾಲಿಬಾನ್​ ಸರ್ಕಾರದ ಜೊತೆಗೆ ಮಾತನಾಡುವುದಾಗಿ ಹೇಳಿದೆ. ಮಹಿಳೆಯರು ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಈ ನಿರ್ಬಂಧ ಅವರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಸಾಮಾಜಿಕ ಮತ್ತು ರಾಜಕೀಯವಾಗಿ ಅವರನ್ನು ನಿರ್ಲಕ್ಷಿಸುವುದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಹೇಳಿದೆ.

ಉನ್ನತ ಶಿಕ್ಷಣ ನಿಷೇಧ ವಿರುದ್ಧ ಪ್ರತಿಭಟನೆ: ಈಚೆಗಷ್ಟೇ ಉನ್ನತ ಶಿಕ್ಷಣ ಪಡೆಯುವುದನ್ನು ನಿಷೇಧಿಸಿದ ಆದೇಶದ ವಿರುದ್ಧ ಮಹಿಳೆಯರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಇದನ್ನು ತಡೆಯಲು ಸರ್ಕಾರ ಮಹಿಳೆಯರ ಮೇಲೆ ಜಲಫಿರಂಗಿ ಬಳಸಿದ್ದಾರೆ. ಕಾಬೂಲ್​ನಲ್ಲಿ ಪ್ರಾಂತೀಯ ಗವರ್ನರ್​ ನಿವಾಸದ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸಿದರು. ಶಿಕ್ಷಣ ನಮ್ಮ ಹಕ್ಕಾಗಿದೆ ಎಂದು ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾನಿರತ ಮಹಿಳೆಯರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ.

ಮಹಿಳೆಯರು ಇದರಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋ ಕೂಡ ಇದೆ. ಪ್ರತಿಭಟನಾನಿರತ ಮಹಿಳೆಯರ ಮೇಲಿನ ಈ ದೌರ್ಜನ್ಯ 'ಅವಮಾನಕರ'ವಾಗಿದೆ ಎಂದು ವಿಶ್ವಾದ್ಯಂತ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಉಗ್ರ ಜವಾಹಿರಿ ಹತ್ಯೆಯ 35 ನಿಮಿಷದ ವಿಡಿಯೋ ಹಂಚಿಕೊಂಡ ಅಲ್​ಖೈದಾ ಸಂಘಟನೆ

Last Updated : Dec 25, 2022, 9:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.