ಖಾರ್ಟೌಮ್: ಸುಡಾನ್‌ನ ಡಾರ್ಫುರ್ ಪ್ರದೇಶದಲ್ಲಿ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಬುಡಕಟ್ಟು ಜನಾಂಗದವರ ಘರ್ಷಣೆಯಲ್ಲಿ ಸುಮಾರು 48 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ದಾರ್ಫುರ್‌ನಲ್ಲಿ ಮೊದಲ ದೊಡ್ಡ ಪ್ರಮಾಣದ ಬುಡಕಟ್ಟು ಹಿಂಸಾಚಾರ ನಡೆದಿತ್ತು. ಕೆಲವು ತಿಂಗಳುಗಳಿಂದ ದೇಶದ ದಕ್ಷಿಣ ಬ್ಲೂ ನೈಲ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ, ಇಲ್ಲಿಯತನಕ ಸುಮಾರು 350 ಜನ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದ ಇಂಡೋನೇಷ್ಯಾ: ಒಂದೇ ಭೂಮಿ, ಕುಟುಂಬ, ಭವಿಷ್ಯದ ಪರಿಕಲ್ಪನೆ ನೀಡಿದ ಮೋದಿ
ಶಸ್ತ್ರಾಸ್ತ್ರ ದರೋಡೆ ಮಾಡಿದ ಆರೋಪದ ಮೇಲೆ ಕಳೆದ ಬುಧವಾರ ಕೇಂದ್ರ ಡಾರ್ಫೂರ್‌ನ ಜುಗುಮಾ ಗ್ರಾಮದ ಬಳಿ ಮಿಸೇರಿಯಾ ಮತ್ತು ರೆಜಿಗಾಟ್ ಬುಡಕಟ್ಟು ಜನಾಂಗದವರ ನಡುವೆ ಹೊಡೆದಾಟ ಶುರುವಾಗಿತ್ತು ಎಂದು ವಿಶ್ವಸಂಸ್ಥೆ ಹೇಳಿದೆ. ಈ ಸಂಘರ್ಷ ತಡೆಯಲು ಪ್ರಯತ್ನಿಸುತ್ತಿರುವ ಜನರ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದು ಶನಿವಾರ ಸುಮಾರು 24 ಜನ ಮೃತಪಟ್ಟರು ಎಂದು ಗೊತ್ತಾಗಿದೆ.