ETV Bharat / international

ಯುಕೆ ಸರ್ಕಾರದಲ್ಲಿ ನಾಗರಿಕ ಸೇವಾ ಹುದ್ದೆ ಅಲಂಕರಿಸಿದ ಶ್ರೀನಗರದ ಫೈಜಾನ್ ನಜೀರ್..!

ಶ್ರೀನಗರದ ಫೈಜಾನ್ ನಜೀರ್ ಯುಕೆ ಸರ್ಕಾರದಲ್ಲಿ ನಾಗರಿಕ ಸೇವಾ ಹುದ್ದೆ ಏರಿದ್ದಾರೆ. ಕಳೆದ ವರ್ಷ ಕೆಲಸಕ್ಕೆ ಅರ್ಹತೆ ಪಡೆದಿದ್ದರೂ ಈ ವರ್ಷದ ಜನವರಿಯಲ್ಲಿ ಪೋಸ್ಟಿಂಗ್ ಸಿಕ್ಕಿದೆ.

Faizan Nazir
ಯುಕೆ ಸರ್ಕಾರದಲ್ಲಿ ನಾಗರಿಕ ಸೇವಾ ಹುದ್ದೆ ಅಲಂಕರಿಸಿದ ಶ್ರೀನಗರದ ಫೈಜಾನ್ ನಜೀರ್..!
author img

By

Published : Jul 6, 2023, 9:42 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದ ಛತಾಬಾಲ್ ಪ್ರದೇಶದ ನಜೀರ್ ಅಹ್ಮದ್ ಮಿರ್ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಅದಕ್ಕೆ ಕಾರಣ ಮೀರ್ ಅವರ 30 ವರ್ಷ ವಯಸ್ಸಿನ ಮಗ ಫೈಜಾನ್ ನಜೀರ್ ಕಂಡಿದ್ದ ಕನಸು ಈಗ ನನಸಾಗಿದೆ.

ಫೈಜಾನ್ ಯುಕೆ ಸರ್ಕಾರದಲ್ಲಿ ನಾಗರಿಕ ಸೇವಾ ಹುದ್ದೆ ಏರಿದ್ದಾರೆ. ಕಳೆದ ವರ್ಷ ಕೆಲಸಕ್ಕೆ ಅರ್ಹತೆ ಪಡೆದಿದ್ದರೂ ಈ ವರ್ಷದ ಜನವರಿಯಲ್ಲಿ ಪೋಸ್ಟಿಂಗ್ ಸಿಕ್ಕಿದೆ. ಶ್ರೀನಗರದಲ್ಲಿ (ಕಾಶ್ಮೀರ) ಜನಿಸಿದ ಅವರು ಯುಕೆ ರಾಯಲ್ ಸರ್ಕಾರದಲ್ಲಿ ನೇಮಕಗೊಂಡ ಮೊದಲ ಕಾಶ್ಮೀರಿ ಯುವಕ. ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಅವರು ಈದ್ - ಉಲ್ - ಅಧಾ (ಬಕ್ರೀದ್) ಹಿನ್ನೆಲೆ ರಜೆ ತೆಗೆದುಕೊಂಡು ಮೊದಲ ಬಾರಿಗೆ ಮನೆಗೆ ಮರಳಿದ್ದಾರೆ.

ನಾಗರಿಕ ಸೇವಾ ಹುದ್ದೆ ಅಲಂಕರಿಸಿದ ಫೈಜಾನ್: ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಫೈಜಾನ್ ಅವರು, "ಲಂಡನ್‌ನಲ್ಲಿರುವ ಅನಿಲ ಮತ್ತು ವಿದ್ಯುತ್ ಮಾರುಕಟ್ಟೆಗಳ ಕಚೇರಿ (ಒಎಫ್​ಜಿಇಎಂ)ನಲ್ಲಿ ಕಾನೂನು ಸಲಹೆಗಾರಾನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಯುಕೆಯ ಮುಕ್ತ ಮತ್ತು ನ್ಯಾಯಯುತ ಪರೀಕ್ಷೆ ಹೇಗಿರುತ್ತೆ?: ಅವರ ಆಯ್ಕೆಯ ಕುರಿತು ಮಾತನಾಡಿದ ಫೈಜಾನ್, "ಭಾರತದಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆ (ಜೆಕೆಎಎಸ್) ಪರೀಕ್ಷೆಗಳಂತೆ ಯುಕೆ ಕೂಡ ಮುಕ್ತ ಮತ್ತು ನ್ಯಾಯಯುತ ಪರೀಕ್ಷೆಗಳನ್ನು ಹೊಂದಿದೆ. ಆದರೆ, ಪರೀಕ್ಷೆಗಳು ಕ್ಷೇತ್ರವಾರು ಇರುತ್ತವೆ. ಅವರು ಜಾಹೀರಾತು ನೀಡುತ್ತಾರೆ. ಪೋಸ್ಟ್‌ಗಳಿಗೆ ನೀವು ಅರ್ಜಿ ಸಲ್ಲಿಸಬೇಕು. ಭಾರತವು ಅರೆ - ಫೆಡರಲ್ ದೇಶವಾಗಿದೆ. ಆದರೆ, ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಈ ಕಾರಣದಿಂದಾಗಿ ಇಂಗ್ಲೆಂಡ್​ನಲ್ಲಿ ವಿವಿಧ ಹಂತದ ಅಧಿಕಾರಿಗಳು ಇದ್ದಾರೆ. ನಾನು ಜಿ-7 ಮತ್ತು ಅದು ಭಾರತೀಯ ಆಡಳಿತ ಸೇವೆಗಳು (ಐಎಎಸ್) ಮತ್ತು ಜಮ್ಮು ಮತ್ತು ನಡುವೆ ಬರುತ್ತದೆ. ಕಾಶ್ಮೀರ ಆಡಳಿತ ಸೇವೆಗಳು (JKAS) ಇದೆ" ಎಂದು ತಿಳಿಸಿದರು.

ನನ್ನ ಹೆತ್ತವರಿಗೆ ಋಣಿ: "ಭಾರತದಲ್ಲಿ ಅಧಿಕಾರಿಗಳಿಗೆ ಅವರ ಅನುಭವ ಮತ್ತು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡಲಾಗುತ್ತದೆ. ಭಾರತಕ್ಕಿಂತ ಭಿನ್ನವಾಗಿ, ಬ್ರಿಟನ್ ತನ್ನ ನಾಗರಿಕ ಸೇವಕರನ್ನು ಅವರ ಸಾಮರ್ಥ್ಯದ ಆಧಾರದ ಮೇಲೆ ಬಡ್ತಿ ನೀಡುತ್ತದೆ. ಮೂಲಭೂತವಾಗಿ, ಅಂದರೆ ನಾನು ಕಷ್ಟಪಟ್ಟು ಕೆಲಸ ಮಾಡಿ ನನ್ನ ಯೋಗ್ಯತೆಯನ್ನು ಸಾಬೀತುಪಡಿಸಿದರೆ, ನಾನು ಬ್ರಿಟಿಷ್ ಅಧಿಕಾರಿಯ ಉನ್ನತ ಸ್ಥಾನಕ್ಕೆ ಏರಬಲ್ಲೆ. ನನ್ನ ಯಶಸ್ಸನ್ನು ನನ್ನ ಹೆತ್ತವರಿಗೆ ಸಲ್ಲುತ್ತದೆ. ಉತ್ತಮ ವಾತಾವರಣ ಇರುವವರೆಗೂ ಯಾರಾದರೂ ಏನನ್ನಾದರೂ ಸಾಧಿಸಬಹುದು. ನಾನು ನನ್ನ ಹೆತ್ತವರಿಗೆ ಋಣಿಯಾಗಿದ್ದೇನೆ" ಎಂದು ಹೇಳಿದರು.

ಪುತ್ರನ ಸಾಧನೆಗೆ ತಂದೆ ಸಂತಸ: ''ಪುತ್ರನ ಯಶಸ್ಸಿನ ಖುಷಿ ಕಡಿಮೆಯೇನಲ್ಲ. ಫೈಜಾನ್ ಅವರ ಯಶಸ್ಸನ್ನು ತಾವು ಎದುರಿಸಿದ ಎಲ್ಲಾ ಕಷ್ಟಗಳಿಗೆ ಪ್ರತಿಫಲವಾಗಿದೆ'' ಎಂದು ಫೈಜಾನ್ ಅವರ ತಂದೆ ನಜೀರ್ ಅಹ್ಮದ್ ಮಿರ್ ಸಂತಸ ವ್ಯಕ್ತಪಡಿಸಿದರು. "ನಾವು ಬಡವರು, ಹಿಂದೆ ನಮ್ಮಲ್ಲಿ ಫೈಜಾನ್​ ಶಾಲಾ ಶುಲ್ಕವನ್ನೂ ಪಾವತಿಸಲು ಸಾಧ್ಯವಾಗದಂತ ಸಮಯವಿತ್ತು. ನಾವು ಅಸಹಾಯಕರಾಗಿದ್ದೆವು. ಆದರೆ, ಮೂಲೆ ಮೂಲೆಗಳಿಂದ ಬೆಂಬಲ ಸಿಕ್ಕಿತು. ಇಂದು ಈ ಸಂತೋಷವನ್ನು ಅನುಭವಿಸಿದ್ದೇವೆ. ಈ ಸಮಯದಲ್ಲಿ ನಮ್ಮ ಬಳಿ ಯಾವುದೇ ಪ್ರತಿಕೂಲ ಪೊಲೀಸ್ ದಾಖಲೆ ಇರಬಾರದು. ಯುಕೆ ಪರೀಕ್ಷೆಗಳ ಹಿನ್ನೆಲೆ ಪುತ್ರನ ಪರಿಶೀಲನೆಯನ್ನು ಪೊಲೀಸರು ಹಲವಾರು ಬಾರಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ಹೆತ್ತವರ ಮಾತನ್ನು ಕೇಳುವುದಿಲ್ಲ. ಆದರೆ, ಫೈಜಾನ್ ನಾವು ಹೇಳಿದಂತೆ ನಡೆದುಕೊಂಡಿದ್ದಾನೆ'' ತುಂಬಾ ಸಂತೋಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಗ್ನಿಸಾಕ್ಷಿಯಲ್ಲ, ChatGPT ಸಾಕ್ಷಿಯಾಗಿ ನಡೆಯಿತು ಮದುವೆ; ಇದು ಚಾಟ್​ಬಾಟ್​ ಪೌರೋಹಿತ್ಯದ ವಿವಾಹ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.