ETV Bharat / international

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ, ಭುಗಿಲೆದ್ದ ಹಿಂಸಾಚಾರ - PM Mahinda Rajapaksa Resigns

ಕಳೆದ ಕೆಲ ತಿಂಗಳಿಂದ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿ ತುರ್ತು ಪರಿಸ್ಥಿತಿ ಹೇರಿದ ಮಧ್ಯೆಯೇ ದೇಶದ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ.

Mahinda Rajapaksa resigns
Mahinda Rajapaksa resigns
author img

By

Published : May 9, 2022, 4:14 PM IST

Updated : May 9, 2022, 8:25 PM IST

ಕೊಲಂಬೊ(ಶ್ರೀಲಂಕಾ) : ಸಿಂಹಳೀಯರ ನಾಡು ಶ್ರೀಲಂಕಾದಲ್ಲಿ ತಲೆದೋರಿರುವ ಆರ್ಥಿಕ ಸಂಕಷ್ಟವನ್ನು ನೀಗಿಸುವಲ್ಲಿ ವಿಫಲವಾದ ಕಾರಣ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮಹಿಂದಾ ರಾಜಪಕ್ಸ ಅವರ ಬಳಿಕ ಮನವಿ ಮಾಡಿದ್ದರು. ಇದಕ್ಕೆ ಮಹಿಂದಾ ರಾಜಪಕ್ಸೆ ಸಮ್ಮತಿ ಸೂಚಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಧಾನಿ ಹುದ್ದೆಗೆ ನಾನು ರಾಜೀನಾಮೆ ನೀಡಿದ್ದೇನೆ. ಈ ಮೂಲಕ ಎಲ್ಲ ಪಕ್ಷಗಳನ್ನೊಳಗೊಂಡ ಸರ್ಕಾರ ರಚನೆ ಮಾಡುವ ಮೂಲಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಜನರನ್ನ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣಕ್ಕಾಗಿ ಜನರು ತೀವ್ರ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಅಲ್ಲಿನ ಮಾಜಿ ಕ್ರಿಕೆಟರ್ಸ್ ಸನತ್ ಜಯಸೂರ್ಯ, ಅರ್ಜುನ್ ರಣತುಂಗಾ ಸೇರಿದಂತೆ ಅನೇಕರು​ ಸಹ ಸಾಥ್ ನೀಡಿದ್ದರು.

  • I never thought that this type of thuggery will be unleashed on innocent protesters at galle face in broad day and outside temple trees. The police must remember they are here to protect the PUBLIC of this country not corrupt politicians. This is the end of the Rajapaksas https://t.co/taSqJEyX6j

    — Sanath Jayasuriya (@Sanath07) May 9, 2022 " class="align-text-top noRightClick twitterSection" data=" ">

ಭುಗಿಲೆದ್ದ ಹಿಂಸಾಚಾರ: ದ್ವೀಪ ರಾಷ್ಟ್ರದಲ್ಲಿ ಪ್ರಧಾನಿ ಹುದ್ದೆಗೆ ರಾಜಪಕ್ಸೆ ರಾಜೀನಾಮೆ ನೀಡುತ್ತಿದ್ದಂತೆ ಹಿಂಸಾಚಾರ ಭುಗಿಲೆದ್ದಿದ್ದು, ಆಡಳಿತಾರೂಢ ಪಕ್ಷದ ಬೆಂಬಲಿಗರು ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ 20ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದ್ದು, ಸೇನಾ ಪಡೆ ನಿಯೋಜನೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಟ್ವೀಟ್​ ಸಹ ಮಾಡಿದ್ದಾರೆ. ಹಾಡಹಗಲೇ ಅಮಾಯಕರ ಮೇಲೆ ಹಲ್ಲೆ ನಡೆಸಲಾಗ್ತಿದೆ ಎಂದು ದೂರಿದ್ದಾರೆ.

ಇದನ್ನು ಓದಿ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ಸಾಧ್ಯತೆ.. ಸರ್ವಪಕ್ಷ ಸರ್ಕಾರ ರಚನೆಯಾಗುತ್ತಾ?

Last Updated : May 9, 2022, 8:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.