ETV Bharat / international

ಶ್ರೀಲಂಕಾದಲ್ಲಿ 50,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ಪತ್ತೆ!

author img

By

Published : Jul 6, 2023, 2:30 PM IST

ಶ್ರೀಲಂಕಾದಲ್ಲಿ ಡೆಂಗ್ಯೂ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಈವರೆಗೆ 50,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಡೆಂಗ್ಯೂ ಪ್ರಕರಣ
ಡೆಂಗ್ಯೂ ಪ್ರಕರಣ

ಕೊಲಂಬೊ: ಶ್ರೀಲಂಕಾದಲ್ಲಿ ಈ ವರ್ಷ ಇದುವರೆಗೆ ಒಟ್ಟು 50,264 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ದ್ವೀಪ ರಾಷ್ಟ್ರದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗಂಪಹಾ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ ಎಂದು ಸಚಿವಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ಘಟಕ ತಿಳಿಸಿದೆ.

43 ಡೆಂಗ್ಯೂ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಸೊಳ್ಳೆ ನಿರ್ಮೂಲನಾ ಅಭಿಯಾನವನ್ನು ನಡೆಯುತ್ತಿದೆ. 2023ರಲ್ಲಿ ಇಲ್ಲಿಯವರೆಗೆ ಒಟ್ಟು 31 ಡೆಂಗ್ಯೂ ಸಂಬಂಧಿತ ಸಾವುಗಳು ವರದಿಯಾಗಿವೆ ಎಂದು ಘಟಕ ತಿಳಿಸಿದೆ. ಏತನ್ಮಧ್ಯೆ, ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗಲಿದ್ದು, ಸೊಳ್ಳೆಗಳ ಉತ್ಪತ್ತಿಗೆ ಉತ್ತೇಜನ ನೀಡಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ ಶ್ರೀಲಂಕಾದಲ್ಲಿ ಕಳೆದ ವರ್ಷ 76,000 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು.

ಕೇರಳದಲ್ಲೂ ಹೆಚ್ಚಿದ ಡೆಂಗ್ಯೂ: ನೆರೆಯ ರಾಜ್ಯ ಕೇರಳದಲ್ಲೂ ಡೆಂಗ್ಯೂ ಪ್ರಕರಣ ಹೆಚ್ಚಾಗತೊಡಗಿವೆ. 2022ರಲ್ಲಿನ ಪ್ರಕರಣಗಳಿಗೆ ಹೋಲಿಸಿದರೆ 2023ರ ಆರು ತಿಂಗಳಲ್ಲೇ 132% ಹೆಚ್ಚಳವನ್ನು ಕಂಡಿದೆ. ರಾಜ್ಯದಲ್ಲಿ 2023ರ ಜನವರಿ 1 ರಿಂದ ಜೂನ್ 28 ರವರೆಗೆ 3,409 ಪ್ರಕರಣಗಳು ದೃಢಪಟ್ಟಿದ್ದು, 10,038 ಶಂಕಿತ ಪ್ರಕರಣಗಳು ವರದಿಯಾಗಿವೆ.

2022 ರಲ್ಲಿ ದೃಢಪಡಿಸಿದ ಡೆಂಗ್ಯೂ ಪ್ರಕರಣಗಳ ಸಂಖ್ಯೆ 1,472 ಇತ್ತು. ಶಂಕಿತ ಪ್ರಕರಣಗಳ ಸಂಖ್ಯೆ 4,311 ರಷ್ಟಿತ್ತು. 2020 ರಲ್ಲಿ, 1,045 ದೃಢ ಪ್ರಕರಣ ಮತ್ತು 4,819 ಶಂಕಿತ ಪ್ರಕರಣಗಳು ವರದಿಯಾಗಿದ್ದವು. ಇವಕ್ಕೆ ಹೋಲಿಸದರೇ 2023ರಲ್ಲಿ ಕೇವಲ ಆರು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ.

ಡೆಂಗ್ಯೂ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ತೀವ್ರ ಎಚ್ಚರಿಕೆಯ ಅಗತ್ಯವಿರುತ್ತದೆ. ಡೆಂಗ್ಯೂ ಜ್ವರ ಸೇರಿದಂತೆ ಯಾವುದೇ ಜ್ವರವು ಸಾಂಕ್ರಾಮಿಕವಾಗಬಹುದು. ಆದ್ದರಿಂದ ತೀವ್ರ ಅಥವಾ ದೀರ್ಘಕಾಲದ ಜ್ವರಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

ಡೆಂಗ್ಯೂ ಮಕ್ಕಳು ಮತ್ತು ವಯಸ್ಕರನ್ನು ಸಮಾನವಾಗಿ ಬಾಧಿಸುತ್ತದೆ. ಡೆಂಗ್ಯೂ ಜ್ವರದ ಲಕ್ಷಣಗಳು ಇತರ ಸಾಮಾನ್ಯ ವೈರಲ್ ಜ್ವರಗಳಿಗಿಂತ ಭಿನ್ನವಾಗಿರದ ಕಾರಣ, ಡೆಂಗ್ಯೂ ಜ್ವರವು ಸಾಮಾನ್ಯವಾಗಿ ರೋಗನಿರ್ಣಯ ಅಥವಾ ವಿಳಂಬವಾಗಬಹುದು. ಡೆಂಗ್ಯೂ ವೈರಸ್‌ನಲ್ಲಿ ನಾಲ್ಕು ವಿಧಗಳಿವೆ. ಅದೇ ರೀತಿಯ ಡೆಂಗ್ಯೂ ಮರುಕಳಿಸುವಿಕೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಡೆಂಗ್ಯೂ ಜ್ವರದ ಲಕ್ಷಣಗಳು: ಡೆಂಗ್ಯೂನ ಮುಖ್ಯ ಲಕ್ಷಣವೆಂದರೆ ಹಠಾತ್ ಜ್ವರ. ತಲೆನೋವು, ಸ್ನಾಯು ನೋವು, ಹಸಿವು ಕಡಿಮೆಯಾಗುವುದು, ವಾಕರಿಕೆ, ವಾಂತಿ, ಆಯಾಸ, ಗಂಟಲು ನೋವು ಮತ್ತು ಕೆಮ್ಮು ಮುಂತಾದ ಲಕ್ಷಣಗಳು ಸಹ ಕಂಡುಬರಬಹುದು. ಇನ್ನು ಕೆಲವರಲ್ಲಿ ಬೆನ್ನು ನೋವು, ಹೊಟ್ಟೆ ನೋವು, ಕಣ್ಣುಗಳ ನೋವು ಮತ್ತು ದೇಹದ ಮೇಲೆ ಕೆಂಪು ಕಲೆಗಳು ಕಂಡು ಬರುತ್ತವೆ.

ಮತ್ತೆ ಕೆಲವರಲ್ಲಿ ತೀವ್ರವಾದ ಹೊಟ್ಟೆ ನೋವು, ಉಸಿರಾಟದ ತೊಂದರೆ, ಮೂತ್ರ ವಿಸರ್ಜನೆಯಲ್ಲಿ ಹಠಾತ್ ಇಳಿಕೆ, ಮೂರ್ಛೆ ಲಕ್ಷಣಗಳು, ಜಾಂಡೀಸ್, ದೇಹದ ಯಾವುದೇ ಭಾಗದಿಂದ ರಕ್ತಸ್ರಾವ, ಕಪ್ಪು ಮಲಬದ್ದತೆ ಕಾಣಿಸಿಕೊಳ್ಳಲಿವೆ. ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಭೇಟಿ ಮಾಡಿ ರಕ್ತ ಪರೀಕ್ಷೆಗೊಳಗಾಗಬೇಕು.

ಡೆಂಗ್ಯೂನಿಂದ ರಕ್ಷಣೆ ಹೇಗೆ?

  • ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸೊಳ್ಳೆ ಹಾವಳಿ ಹೆಚ್ಚಾಗಿರುವ ಕಾರಣ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು.
  • ಕಟ್ಟಡಗಳ ಒಳಗೆ ಮತ್ತು ಹೊರಗೆ ಮತ್ತು ಛಾವಣಿಗಳಲ್ಲಿ ನೀರು ನಿಲ್ಲದಂತೆ ಕಾಳಜಿ ವಹಿಸಬೇಕು. ಮಡಕೆಗಳು, ಚಿಪ್ಪುಗಳು, ಟೈರುಗಳು ಶೇಖರಿಸದಿರಿ.
  • ನೀರಿನ ಪಾತ್ರೆಗಳು ಮತ್ತು ತೊಟ್ಟಿಗಳನ್ನು ಮುಚ್ಚಿಡಿ.
  • ಸೊಳ್ಳೆ ಕಡಿತವನ್ನು ತಪ್ಪಿಸಲು ಸೊಳ್ಳೆ ಪರದೆ ಬಳಸಿ.
  • ಜ್ವರದ ಲಕ್ಷಣ ಇರುವವರು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಬೇಕು.
  • ಡೆಂಗ್ಯೂ ಲಕ್ಷಣ ಕಾಣಿಸಿದ್ದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ಇದನ್ನೂ ಓದಿ: ಎಐ ತಂತ್ರಜ್ಞಾನದಿಂದ ಶ್ವಾಸಕೋಶದ ಕ್ಯಾನ್ಸರ್​ ನಿಖರವಾಗಿ ಪತ್ತೆ ಹಚ್ಚಬಹುದು: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.