ETV Bharat / international

ಪೂರ್ಣ ದೇಹದ ಸೆಕ್ಸ್‌ ಡಾಲ್‌ ಆಮದು ನಿಷೇಧ ತೆಗೆದುಹಾಕಿದ ದಕ್ಷಿಣ ಕೊರಿಯಾ

ಸೆಕ್ಸ್‌ ಗೊಂಬೆಗಳ ಬಗ್ಗೆ ದಕ್ಷಿಣ ಕೊರಿಯಾ ದೇಶದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇಲ್ಲಿಯವರೆಗೆ, ದೇಶಕ್ಕೆ ಆಮದಾಗುತ್ತಿದ್ದ ಸೆಕ್ಸ್‌ ಗೊಂಬೆಗಳನ್ನು ಸೀಮಾ ಸುಂಕ ಅಧಿಕಾರಿಗಳು ತಡೆದು ಜಪ್ತಿ ಮಾಡುತ್ತಿದ್ದರು. ಆದರೆ ಇದೀಗ ಆ ದೇಶ ಮಹತ್ವದ ನಿರ್ಧಾರಕ್ಕೆ ಬಂದಿದೆ.

Etv BharatNow you can import sex dolls in South Korea government ends ban on fullbody merchandise
Etv Bharatಪೂರ್ಣ ದೇಹದ ಲೈಂಗಿಕ ಗೊಂಬೆಗಳ ಆಮದನ ನಿಷೇಧವನ್ನು ತೆಗೆದುಹಾಕಿದ ದಕ್ಷಿಣ ಕೊರಿಯಾ
author img

By

Published : Dec 26, 2022, 8:28 PM IST

ಸಿಯೋಲ್ (ದಕ್ಷಿಣ ಕೊರಿಯಾ): ಪೂರ್ಣ ದೇಹದ ಲೈಂಗಿಕ ಗೊಂಬೆಗಳ ಆಮದು ಮೇಲಿನ ನಿಷೇಧವನ್ನು ದಕ್ಷಿಣ ಕೊರಿಯಾ ತೆಗೆದುಹಾಕಿದೆ. ಜನರ ಖಾಸಗಿ ಜೀವನದಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡಬಹುದು ಎಂಬ ಚರ್ಚೆಗೆ ಈ ಮೂಲಕ ಅಂತ್ಯ ಹಾಡಿದೆ.

ಲೈಂಗಿಕ ಗೊಂಬೆಗಳ ಆಮದು ನಿಷೇಧಿಸುವ ಯಾವುದೇ ಕಾನೂನು ಅಥವಾ ನಿಬಂಧನೆಗಳು ಇಲ್ಲದಿದ್ದರೂ, ಸಾವಿರಾರು ಲೈಂಗಿಕ ಗೊಂಬೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇವು ದೇಶದ ಸಂಪ್ರದಾಯಗಳು ಮತ್ತು ಸಾರ್ವಜನಿಕ ನೈತಿಕತೆಗೆ ಹಾನಿ ಉಂಟುಮಾಡುವ ಸರಕುಗಳು ಎಂದು ಅವರು ಹೇಳುತ್ತಿದ್ದರು. ಈ ನಿರ್ಧಾರ ಪ್ರಶ್ನಿಸಿ ಗೊಂಬೆಗಳ ಆಮದುದಾರರು ನ್ಯಾಯಾಲಯಗಳ ಮೊರೆ ಹೋಗಿದ್ದರು. ನ್ಯಾಯಾಲಯವು ಇವುಗಳ ಬಳಕೆಗೆ ಒಪ್ಪಿಗೆ ನೀಡಿ ಮತ್ತು ವಶಪಡಿಸಿಕೊಂಡಿರುವ ಲೈಂಗಿಕ ಗೊಂಬೆಗಳನ್ನು ಬಿಡುಗಡೆ ಮಾಡಲು ಕಸ್ಟಮ್ಸ್​ಗೆ ಆದೇಶಿಸಿತ್ತು. ಅವುಗಳನ್ನು ಜನರು ಖಾಸಗಿ ಸ್ಥಳಗಳಲ್ಲಿ ಬಳಸುತ್ತಿದ್ದಾರೆ. ಇದರ ಬಳಕೆಯು ಮಾನವ ಘನತೆಗೆ ಧಕ್ಕೆ ತರುವುದಿಲ್ಲ ಎಂದು ಕೋರ್ಟ್‌ ಹೇಳಿತ್ತು.

ಸೋಮವಾರ ಕೊರಿಯಾ ಕಸ್ಟಮ್ಸ್ ಸೇವೆ ಅಧಿಕಾರಿಗಳು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ದೇಶಕ್ಕೆ ಲೈಂಗಿಕ ಗೊಂಬೆಗಳನ್ನು ಆಮದು ಮಾಡಿಕೊಳ್ಳಲು ಪರಿಷ್ಕೃತ ಮಾರ್ಗಸೂಚಿಯನ್ನು ಜಾರಿಗೊಳಿಸಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿತು. ಇದಕ್ಕಾಗಿ ಲಿಂಗ ಸಮಾನತೆ ಮತ್ತು ಕುಟುಂಬ ಸಚಿವಾಲಯ ಸೇರಿದಂತೆ ಸಂಬಂಧಿತ ಸರ್ಕಾರಿ ಏಜೆನ್ಸಿಗಳಿಂದ ಇತ್ತೀಚಿನ ನ್ಯಾಯಾಲಯದ ತೀರ್ಪುಗಳು ಮತ್ತು ಅಭಿಪ್ರಾಯಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ, ಮಗುವಿನಂತಹ ಲೈಂಗಿಕ ಗೊಂಬೆಗಳು ಅಥವಾ ಕೆಲವು ವ್ಯಕ್ತಿಗಳನ್ನು ಸಾಕಾರಗೊಳಿಸುವ ಇತರ ಆಮದುಗಳನ್ನು ನಿಷೇಧಿಸುವುದಾಗಿ ಕಸ್ಟಮ್ಸ್ ಹೇಳಿದೆ. ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಮತ್ತು ಯುಕೆಯಂತಹ ಇತರ ದೇಶಗಳು ಸಹ ಮಗುವಿನಂತಹ ಲೈಂಗಿಕ ಗೊಂಬೆಗಳನ್ನು ನಿಷೇಧಿಸಿವೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಸಂಪ್ರದಾಯವಾದಿ ಸಂಸ್ಥೆಗಳು ಲೈಂಗಿಕ ಗೊಂಬೆಗಳ ಬಳಕೆಗೆ ತಮ್ಮ ವಿರೋಧ ವ್ಯಕ್ತಪಡಿಸಿವೆ.

ಲೈಂಗಿಕ ಗೊಂಬೆಗಳನ್ನು ಆಮದು ಮಾಡಿಕೊಳ್ಳುವ ಸ್ಥಳೀಯ ಕಂಪನಿಯ ಮಾಜಿ ಮುಖ್ಯಸ್ಥ ಲೀ ಸಾಂಗ್ ಜಿನ್ ಪ್ರತಿಕ್ರಿಯಿಸಿ, ಕಸ್ಟಮ್ಸ್ ಸೇವೆಯ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಇದು ಸ್ವಲ್ಪ ತಡವಾಗಿ ಬಂದರೂ ಸಮಂಜಸವಾದ ನಿರ್ಧಾರ ಎಂದು ಹೇಳಿದ್ದಾರೆ.

ದಕ್ಷಿಣ ಕೊರಿಯಾದ ಅಧಿಕಾರಿಗಳು ದೇಶೀಯವಾಗಿ ತಯಾರಿಸಿದ ಲೈಂಗಿಕ ಗೊಂಬೆಗಳ ಮಾರಾಟವನ್ನು ತಡೆಯುವುದಿಲ್ಲ. ಆದರೆ ಅವುಗಳ ಗುಣಮಟ್ಟವು ಸಾಮಾನ್ಯವಾಗಿ ವಿದೇಶದಲ್ಲಿ ತಯಾರಿಸಿದ ಗುಣಮಟ್ಟಕ್ಕಿಂತ ಕೆಳಮಟ್ಟದ್ದಾಗಿದೆ. ಹಿಂದಿನ ಕಂಪನಿಯು ಈಗಾಗಲೇ ಮೊಕದ್ದಮೆಗಳ ಮೂಲಕ ಕಸ್ಟಮ್ಸ್ ಅಧಿಕಾರಿಗಳಿಂದ 20ಕ್ಕೂ ಹೆಚ್ಚು ಲೈಂಗಿಕ ಗೊಂಬೆಗಳನ್ನು ಹಿಂಪಡೆದಿದೆ ಎಂದು ಅವರು ಹೇಳಿದರು.

ಕಸ್ಟಮ್ಸ್ ಸೇವೆಯಿಂದ ಸುಮಾರು ಎರಡು ವರ್ಷಗಳ ನಂತರ ಮರುಪಡೆಯಲಾದ ಅನೇಕ ಲೈಂಗಿಕ ಗೊಂಬೆಗಳು ನಿರುಪಯುಕ್ತವಾಗಿರುವುದರಿಂದ ಕಂಪನಿಯು ಸರ್ಕಾರದಿಂದ ಪರಿಹಾರ ಕೋರಿ ಪ್ರತ್ಯೇಕ ಮೊಕದ್ದಮೆಗಳನ್ನು ಹೂಡಿದೆ ಎಂದು ಲೀ ಹೇಳಿದರು. ಕಸ್ಟಮ್ಸ್ ನಿರ್ಧಾರವು ಆಮದುದಾರರು ತಮ್ಮ ಲೈಂಗಿಕ ಗೊಂಬೆಗಳನ್ನು ಸರ್ಕಾರಿ ಏಜೆನ್ಸಿ ನಡೆಸುವ ಸ್ಟೋರೇಜ್‌ಗಳಿಂದ ಮರಳಿ ಪಡೆಯಲು ಅನುಮತಿಸುತ್ತದೆ ಎಂದಿದ್ದಾರೆ.

2018 ರಿಂದ ದಕ್ಷಿಣ ಕೊರಿಯಾಕ್ಕೆ ಕಳುಹಿಸಲಾದ 1,000ಕ್ಕೂ ಹೆಚ್ಚು ಲೈಂಗಿಕ ಗೊಂಬೆಗಳನ್ನು ತಡೆ ಹಿಡಿದಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ

ಇದನ್ನೂ ಓದಿ:ಇನ್ನು ನಿತ್ಯ ಹೊಸ ಕೋವಿಡ್ ಪ್ರಕರಣಗಳ ಅಪ್ಡೇಟ್​ ನೀಡಲ್ಲ ಎಂದ ಚೀನಾ ಸರ್ಕಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.